ಕನಕಮಜಲು ಗ್ರಾಮ ಪಂಚಾಯತಿ ಮತ್ತು ಯುವಜನ ವಿಕಾಸ ಕೇಂದ್ರ ಯುವಕಮಂಡಲ ಕನಕಮಜಲು ಇದರ ಜಂಟೀ ಆಶ್ರಯದಲ್ಲಿ ಹಣ್ಣಿನ ಗಿಡಗಳು ಮತ್ತು ಹಲಸಿನ ಹಣ್ಣಿನ ಖಾದ್ಯಗಳ ಕುರಿತು ಮಾಹಿತಿ ಶಿಬಿರವು ಜೂ.16ರಂದು ಜರುಗಿತು.
ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶ್ರೀಧರ ಕುತ್ಯಾಳ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಮ್ಮ ಪರಿಸರದಲ್ಲಿ ಬೆಳೆಯುವ ಹಣ್ಣಿನ ಗಿಡಗಳು ಎಂಬ ವಿಷಯದ ಕುರಿತು ಅಡಿಕೆ ಪತ್ರಿಕೆಯ ಅಂಕಣಕಾರರಾದ ಅನಿಲ್ ಬಳಂಜ,ಹಾಗೂ ಹಲಸಿನ ಹಣ್ಣಿನ ಖಾದ್ಯಗಳು ಎಂಬ ವಿಷಯದ ಕುರಿತು ಶ್ರೀಮತಿ ಶೈಲಜ ಬಳಂಜ ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದು, ದೇಶ ವಿದೇಶಗಳಲ್ಲಿ ಬೆಳೆಯುವ ವಿವಿಧ ರೀತಿಯ ಹಣ್ಣುಗಳ ಕುರಿತು ಮಾಹಿತಿ ನೀಡಿದರು.
ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ನಾರಾಯಣ ಬೊಮ್ಮೆಟ್ಟಿ,
ಯುವಕ ಮಂಡಲದ ಅಧ್ಯಕ್ಷ ಜಯಪ್ರಸಾದ್ ಕಾರಿಂಜ, ಪ್ರ.ಕಾರ್ಯದರ್ಶಿ ಬಾಲಚಂದ್ರ ನೆಡಿಲು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಗ್ರಾ.ಪಂ. ಉಪಾಧ್ಯಕ್ಷ ಶ್ರೀಧರ ಕುತ್ಯಾಳ ಹಾಗೂ ಸಹಕಾರಿ ಸಂಘದ ಉಪಾಧ್ಯಕ್ಷ ನಾರಾಯಣ ಬೊಮ್ಮೆಟ್ಟಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ನಿವೃತ್ತ ವೈದ್ಯಾಧಿಕಾರಿ ಡಾ. ರಂಗಯ್ಯ, ಯುವಕ ಮಂಡಲದ ಎಲ್ಲಾ ಪದಾಧಿಕಾರಿಗಳು, ಯುವಕ ಮಂಡಲದ ಪೂರ್ವಾಧ್ಯಕ್ಷರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಚೈತನ್ಯ ಮಠಬೈಲು ಪ್ರಾರ್ಥಿಸಿದರು. ಪುಷ್ಪರಾಜ್ ಪಳ್ಳತ್ತಡ್ಕ ಸ್ವಾಗತಿಸಿ, ಯು.ಮಂಡಲದ ಸಾಂಸ್ಕೃತಿಕ ಕಾರ್ಯದರ್ಶಿ ಅಶ್ವಥ್ ಅಡ್ಕಾರು ವಂದಿಸಿದರು. ಯು.ಮಂಡಲದ ಪೂರ್ವಾಧ್ಯಕ್ಷ ದಾಮೋದರ ಕಣಜಾಲು ಕಾರ್ಯಕ್ರಮ ನಿರೂಪಿಸಿದರು.