
ಸುಳ್ಯ ನಗರ ಪಂಚಾಯತ್ ತ್ಯಾಜ್ಯವಿಲೇವಾರಿ ಬಾಬ್ತು ಸಂಗ್ರಹಿಸುವ ಮೊತ್ತಕ್ಕೆ ಆರ್ ಟಿಐ ಕಾರ್ಯಕರ್ತ ಡಿ.ಯಂ ಶಾರಿಖ್ ತೀವ್ರ ಅಸಮಾಧಾನಗೊಂಡು ಈಗ ಸಾಂಕ್ರಾಮಿಕ ರೋಗ ಹರಡುತ್ತಿದ್ದು ವರ್ತಕರು ಯಾವುದೇ ತರದ ವ್ಯಾಪಾರ-ವಹಿವಾಟು ಕಳೆದ ಎಪ್ರಿಲ್ ತಿಂಗಳಿನಿಂದ ಇಲ್ಲದೆ ಕಂಗಾಲಾಗಿರುವ ಸಂದರ್ಭದಲ್ಲಿ ವರ್ತಕರಿಂದ ತ್ಯಾಜ್ಯ ವಿಲೇವಾರಿ ಬಗ್ಗೆ ಸಂಗ್ರಹಿಸುವ ಮೊತ್ತ ಮತ್ತುದ ಖಂಡನೀಯ. ವರ್ತಕರಿಗೆ ಈ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಮಾಡುವುದು ಸರಿಯಲ್ಲ. ಇದಕ್ಕೆ ಸಾಮೂಹಿಕವಾಗಿ ವರ್ತಕರು ಖಂಡಿತವಾಗಿ ಆಕ್ಷೇಪ ಹೇಳಲೇಬೇಕು. ಸಂಘದ ಪದಾಧಿಕಾರಿಗಳು ಕೂಡ ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಲೇಬೇಕು ಕೊರೊನಾ ಸೋಂಕು ಹತೋಟಿಗೆ ಬಂದ ನಂತರ ವಾಣಿಜ್ಯ ವ್ಯವಹಾರ ಸರಿ ಹೋದ ನಂತರ ಸಂಗ್ರಹಿಸುವುದು ಸೂಕ್ತ ಎಂದು ತಿಳಿಸಿದ್ದಾರೆ.