ಸುಳ್ಯದ ನಾವೂರು ಎಂಬಲ್ಲಿಂದ ಜೂನ್ 15ರಂದು ಸಂಜೆ ಅಕ್ರಮವಾಗಿ ದನ ಸಾಗಾಟ ಪ್ರಕರಣದ ಹಿನ್ನೆಲೆಯಲ್ಲಿ ದುಗಲಡ್ಕಸಮೀಪ ಪರಿಸರದ ಯುವಕರು ವಾಹನವನ್ನು ತಡೆದು ಪಿಕಪ್ ವಾಹನದಲ್ಲಿದ್ದ ಮೂವರನ್ನು ಥಳಿಸಿದ್ದಾರೆ ನಂತರ ವಿಷಯ ತಿಳಿದ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ವಾಹನವನ್ನು ಮತ್ತು ದನ ಸಾಗಾಟ ಮಾಡುತ್ತಿದ್ದ ಯುವಕರನ್ನು ಬಂಧಿಸಿದರು. ಈ ಘಟನೆಯ ಹಿನ್ನೆಲೆಯಲ್ಲಿ ಸುಳ್ಯಕ್ಕೆ ಭೇಟಿ ನೀಡಿದ ಡಿವೈಎಸ್ಪಿ ದಿನಕರ ಶೆಟ್ಟಿ ಇಂದು ಬೆಳಿಗ್ಗೆ ದುಗಲಡ್ಕಹಾಗೂ ಜಟ್ಟಿಪಳ್ಳ ದ ಪರಿಸರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೂರ್ಣ ಮಾಹಿತಿ ಪಡೆದ ಅವರು ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸುಳ್ಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.
- Sunday
- November 24th, 2024