
ಸುಳ್ಯ ತಾಲೂಕಿನ ದುಗ್ಗಲಡ್ಕದಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ವ್ಯಾಪಾರಿಗಳ ಮೇಲೆ ಸಂಘಪರಿವಾರದ ಗೂಂಡಾಗಳು ನಡೆಸಿದ ಮಾರಣಾಂತಿಕ ಹಲ್ಲೆ ಕೃತ್ಯವನ್ನು ಎಸ್ ಡಿಪಿಐ ತೀವ್ರವಾಗಿ ಖಂಡಿಸುತ್ತದೆ.
ಎರಡು ದಿನಗಳ ಹಿಂದೆ ಮಂಗಳೂರಿನ ಉರ್ವಸ್ಟೋರ್ ಬಳಿ ಜಾನುವಾರು ಸಾಗಾಟ ಮಾಡುತ್ತಿದ್ದ ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಸಂತ್ರಸ್ತನ ಮೇಲೆ ಪೋಲೀಸರು ಸ್ವಯಂ ಪ್ರೇರಿತ ಕೇಸ್ ದಾಖಲಿಸಿದ್ದಾರೆ ಆದರೇ ಹಲ್ಲೆ ನಡೆಸಿದ ಆರೋಪಿಗಳ ಮೇಲೆ ಲಘು ಸೆಕ್ಷನ್ ಹಾಕಿ ಬಂಧಿಸಿ ಕೆಲವೇ ಗಂಟೆಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆ ಗೊಳಿಸಿದ ಪರಿಣಾಮವೇ ಸಂಘಪರಿವಾರದ ಗೂಂಡಾಗಳಿಗೆ ಕಾನೂನಿನ ಭಯವಿಲ್ಲದೆ ನೈತಿಕ ಪೋಲಿಸ್‌ಗಿರಿ ನಡೆಸಲು ಪ್ರೇರಣೆಯಾಗಿರುವುದು.
ಗೋಸಾಗಾಟ ಮಾಡುವಾಗ ಅದನ್ನು ತಡೆದು ಪೋಲಿಸ್ ಗಿರಿ ನಡೆಸಲು ಸಂಘಪರಿವಾರಕ್ಕೆ ಗುತ್ತಿಗೆ ನೀಡಿದವರು ಯಾರು? ಹಾಗಾದರೆ ಪೋಲಿಸರು ಯಾಕಾಗಿ ಇರುವುದು?
ಲಾಕ್‌ಡೌನ್ ಸಂದರ್ಭದಲ್ಲಿ ಜನ ಸಾಮಾನ್ಯರು ಸಂಕಷ್ಟದಲ್ಲಿದ್ದಾಗ ಪರಸ್ಪರ ಸಹಾಯ ಸಹಕಾರ ಮಾಡಿ ಸೌಹಾರ್ದತೆಯಿಂದ ಇರುವುದನ್ನು ಅರಗಿಸಿಕೊಳ್ಳಲು ಸಾದ್ಯವಾಗದ ಸಂಘಪರಿವಾರ ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿ ನೈತಿಕ ಪೋಲಿಸ್‌ಗಿರಿ ಮೂಲಕ ಜಿಲ್ಲೆಯಲ್ಲಿ ಕೋಮುಗಲಭೆ ನಡೆಸುವ ಸಂಚಿನ ಭಾಗವಾಗಿದೆ.
ಪೋಲಿಸ್ ಇಲಾಖೆ ಮತ್ತು ಜಿಲ್ಲಾಡಳಿತ ಪ್ರಕರಣದಲ್ಲಿ ಸಂತ್ರಸ್ತರ ಮೇಲೆ ಪ್ರಕರಣ ದಾಖಲು ಮಾಡದೆ ಹಲ್ಲೆ ನಡೆಸಿ ನೈತಿಕ ಪೋಲಿಸ್ ಗಿರಿ ನಡೆಸಿದ ತಪ್ಪಿತಸ್ಥ ಆರೋಪಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ಎಲ್ಲಾ ವಿದ್ಯಮಾನಗಳಿಗೂ ಪೋಲಿಸ್ ಇಲಾಖೆ ನೇರ ಹೊಣೆಯಾಗಲಿದೆ ಎಂದು ಎಸ್.ಡಿ.ಪಿ.ಐ ಪಕ್ಷದ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ದುಲ್ ಕಲಾಂ ಸುಳ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.