Ad Widget

ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ನಡುವೆ ದ್ವಿಚಕ್ರ ವಾಹನ ಸಂಚಾರ ಗ್ರಾಪಂ ಮಾಜಿ ಅಧ್ಯಕ್ಷ ರಿಂದ ಗುತ್ತಿಗೆದಾರರಿಗೆ ತರಾಟೆ


ಗಾಂಧಿನಗರ ಆಲೆಟ್ಟಿ ಸಂಪರ್ಕಿಸುವ ರಸ್ತೆ ಸುಮಾರು 157 ಮೀಟರ್ ಕಾಂಕ್ರೀಟಿಕರಣ ಗೊಳ್ಳುತ್ತಿದ್ದು ಎರಡು ವಾರಗಳಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಭಾಗದಲ್ಲಿ ಬರುವ ಸಾರ್ವಜನಿಕರು ತಮ್ಮ ತಮ್ಮ ವಾಹನಗಳನ್ನು ನಾಗಪಟ್ಟಣ ಸೇತುವೆಯ ಬಳಿ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಬಂದು ಸುಳ್ಯ ಪೇಟೆಯಿಂದ ತಮ್ಮ ತಮ್ಮ ವ್ಯವಹಾರಗಳನ್ನು ಮುಗಿಸಿ ಹೋಗಬೇಕಾಗಿದೆ. ಸುಳ್ಯಕ್ಕೆ ಬರಲು ಪರ್ಯಾಯ ಮಾರ್ಗವಿದ್ದರೂ ಸಂಚರಿಸಲು ಯೋಗ್ಯ ವಿಲ್ಲವೆಂದು ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಕೆಲವರು ರಾತ್ರಿ ವೇಳೆ ಹಾಗೂ ಮುಂಜಾನೆ ದ್ವಿಚಕ್ರವಾಹನದಲ್ಲಿ ಕಾಮಗಾರಿ ನಡೆಯುತ್ತಿದ್ದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇದನ್ನು ಕಂಡ ಆಲೆಟ್ಟಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮುತ್ತಪ್ಪ ಪೂಜಾರಿ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಈ ವೇಳೆ ಗುತ್ತಿಗೆದಾರರಿಗೆ ಮುತ್ತಪ್ಪ ಪೂಜಾರಿಗೂ ಮಾತಿನ ಚಕಮಕಿ ನಡೆದಿದೆ ಎಂದು ಕೂಡ ತಿಳಿದುಬಂದಿದೆ. ವಿಷಯ ತಿಳಿದ ಸುಳ್ಯ ಕಾಂಗ್ರೆಸ್ ಪಕ್ಷದ ಮುಖಂಡರು ಕೆಪಿಸಿಸಿ ಮಾಜಿ ಕಾರ್ಯದರ್ಶಿ ವೆಂಕಪ್ಪ ಗೌಡರ ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು.

ಈ ಸಮಯದಲ್ಲಿ ಕಾಮಗಾರಿಯ ಗುತ್ತಿಗೆದಾರರೊಂದಿಗೆ ಸಮಾಲೋಚನೆ ನಡೆಸಿದ ವೆಂಕಪ್ಪ ಗೌಡರು ಅತಿ ಶೀಘ್ರದಲ್ಲಿ ಕಾಮಗಾರಿ ಯನ್ನು ಪೂರೈಸಿ ಸಾರ್ವಜನಿಕರಿಗೆ ಸಂಚಾರ ಮುಕ್ತ ಮಾಡಿಕೊಡುವಂತೆ ಕೇಳಿಕೊಂಡರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ವೆಂಕಪ್ಪ ಗೌಡರು ಈ ರಸ್ತೆಯ ಕಾಮಗಾರಿ ನಡೆಸುವ ಇಲಾಖೆಯವರು ಯಾರೆಂದು ಸರಿಯಾಗಿ ಮಾಹಿತಿ ಇಲ್ಲ. ಲೋಕೋಪಯೋಗಿ ಇಲಾಖೆಯಿಂದ ಅಥವಾ ಜಿಲ್ಲಾ ಪಂಚಾಯತ್ ವತಿಯಿಂದ ನಗರ ಪಂಚಾಯತ್ ವತಿಯಿಂದಲೋ ಯಾರ ಅಡಿಯಲ್ಲಿ ಈ ಕಾಮಗಾರಿ ನಡೆಯುವುದು ಎಂದು ಯಾರಿಗೂ ಸರಿಯಾದ ಮಾಹಿತಿ ಇಲ್ಲ ಎಂದರು. ಶಾಸಕ ಅಂಗಾರರು ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಹೋಗಿರುತ್ತಾರೆ ನಂತರ ಯಾವುದೇ ಇಲಾಖೆಯವರು ಸ್ಥಳಕ್ಕೆ ಬಂದು ಪರಿಶೀಲನೆ ಕಾಮಗಾರಿಯ ಬಗ್ಗೆ ವೀಕ್ಷಣೆ ನಡೆಸಿಲ್ಲ ಎಂದು ಆರೋಪಿಸಿದರು. ಕಾಮಗಾರಿ ಉತ್ತಮವಾಗಿದ್ದಲ್ಲಿ ಅದು ಬಿಜೆಪಿಯವರು ಮಾಡಿದ್ದು ಕಳಪೆ ಆದಲ್ಲಿ ಅದು ಕಾಂಗ್ರೆಸ್ ಮಾಡಿದ್ದು ಎಂದು ಬಿಜೆಪಿಯವರು ರಾಜಕೀಯ ಮಾಡುತ್ತಾರೆ ಹಾಗೂ ಕಾಮಗಾರಿಯಲ್ಲಿ ಕೂಡ ಕಳಪೆ ನಡೆದಿದೆ ಎಂಬ ಮಾಹಿತಿ ಕೂಡ ಬಂದಿದೆ ಆದರೆ ಇಲ್ಲಿ ಬಂದು ನೋಡಿದರೆ ಈ ಮಳೆಯ ಸಂದರ್ಭದಲ್ಲಿ ಈ ರೀತಿಯ ಕಾಮಗಾರಿ ನಡೆಸಲು ಅನುಮತಿ ನೀಡಿರುವುದು ಸರಿಯಲ್ಲ ಈ ಕೆಲಸ ಎರಡು ತಿಂಗಳು ಮೊದಲೇ ಆಗಿದ್ದರೆ ಎಲ್ಲವೂ ಸರಿಯಾಗುತ್ತಿತ್ತು ಆದರೆ ಈ ಸಮಸ್ಯೆ ಉಂಟಾಗಲು ಮುಖ್ಯ ಕಾರಣ ಎಂದಅವರು ಆದಷ್ಟು ಶೀಘ್ರದಲ್ಲಿ ಕಾಮಗಾರಿ ಯನ್ನು ಮುಗಿಸಿ ಸಾರ್ವಜನಿಕರಿಗೆ ಸಂಚರಿಸಲು ಅನುವು ಮಾಡಿಕೊಡಬೇಕೆಂದು ಗುತ್ತಿಗೆದಾರರಲ್ಲಿ ಕೇಳಿಕೊಂಡರು. ಈ ವೇಳೆ ಮಾತನಾಡಿದ ನಗರ ಪಂಚಾಯತ್ ಮಾಜಿ ಸದಸ್ಯ ಗೋಕುಲದಾಸ್ ರಸ್ತೆಯ ಅಗಲೀಕರಣಕ್ಕೆ ಇನ್ನೂ ಬೇಕಾದಷ್ಟು ಸ್ಥಳಗಳು ಇದ್ದವು ರಸ್ತೆಯ ಬದಿಗಳಲ್ಲಿ ಚರಂಡಿ ನಿರ್ಮಾಣ ಮಾಡಲಿರುವ ಜಾಗವನ್ನು ರಸ್ತೆಯ ಅಕ್ಕಪಕ್ಕದಲ್ಲಿರುವ ತೋಟದವರು ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿದರು.
ಸುಳ್ಯ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬಿಸಿ ಲೋಲಜಾಕ್ಷ ಮಾತನಾಡಿ ಈ ರಸ್ತೆಯಲ್ಲಿ ಸಂಚರಿಸುವ ಆಲೆಟ್ಟಿ-ಬಡ್ಡಡ್ಕ ಮುಂತಾದ ಕಡೆಗಳ ಸಾರ್ವಜನಿಕರು ರಸ್ತೆಯನ್ನು ಅವಲಂಬಿಸಿಕೊಂಡಿದ್ದಾರೆ. ಸುಳ್ಯಕ್ಕೆ ಸಂಚರಿಸಲು ಪರ್ಯಾಯ ರಸ್ತೆ ಸರಿಯಾಗಿಲ್ಲದ ಕಾರಣ ರಸ್ತೆ ಕಾಮಗಾರಿ ಅತಿ ಶೀಘ್ರದಲ್ಲಿ ಮುಗಿಸಿಕೊಡುವಂತೆ ಗುತ್ತಿಗೆದಾರರಲ್ಲಿ ಆಗ್ರಹಿಸಿದರು. ಗ್ರಾಮ ಪ್ರದೇಶಗಳ ರಸ್ತೆಗಳು ಅಭಿವೃದ್ಧಿಯಾಗಬೇಕಾದದ್ದು ಉತ್ತಮವೇ ಸರಿ ಆದರೆ ಪರ್ಯಾಯ ರಸ್ತೆಯ ಅನುಕೂಲವನ್ನು ಮಾಡಿಕೊಡದೆ ತಿಂಗಳುಗಟ್ಟಲೆ ಸಂಚಾರಕ್ಕೆ ತೊಂದರೆ ಕೊಡುವುದು ಸರಿಯಾದ ಕ್ರಮವಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಉತ್ತರಿಸಿದ ಗುತ್ತಿಗೆದಾರರು ಜುಲೈ ತಿಂಗಳ ಪ್ರಥಮ ವಾರದಲ್ಲಿ ರಸ್ತೆಯ ಕಾಮಗಾರಿಯನ್ನು ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಪಿ ಎಸ್ ಗಂಗಾಧರ, ಸುರೇಶ್ ಅಮೈ,ಧರ್ಮಪಾಲ ಕೊಯಿಂಗಾಜೆ, ಶಹಿದ್ ಪಾರೆ ಮೊದಲಾದವರು ಉಪಸ್ಥಿತರಿದ್ದರು .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!