
ಸುಳ್ಯದ ಶ್ರೀ ವೆಂಕಟರಮಣ ಸೊಸೈಟಿಯಲ್ಲಿ ವಾರ್ಷಿಕ ಗಣಪತಿ ಹವನ ಹಾಗೂ ಲಕ್ಷ್ಮೀ ಪೂಜೆ ಇಂದು ನಡೆಯಿತು. ಪುರೋಹಿತ ಪ್ರಸನ್ನ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ಪಿ.ಸಿ ಜಯರಾಮ, ಉಪಾಧ್ಯಕ್ಷ ಮೋಹನ್ ರಾಮ್ ಸುಳ್ಳಿ, ನಿರ್ದೇಶಕರಾದ ಚಂದ್ರಾಕೋಲ್ಚಾರ್, ದಿನೇಶ್ ಮಡಪ್ಪಾಡಿ, ಪಿ.ಎಸ್ ಗಂಗಾಧರ, ಹೇಮಚಂದ್ರ ಕದಿಕಡ್ಕ, ಶೈಲೇಶ್ ಅಂಬೆಕಲ್ಲು, ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಕಾರ್ಯನಿರ್ವಹಣಾಧಿಕಾರಿ ಕೆ.ಟಿ ವಿಶ್ವನಾಥ, ಮುಖ್ಯ ಪ್ರಬಂಧಕ ಚಂದ್ರಶೇಖರ ಯಂ, ಶಾಖಾ ವ್ಯವಸ್ಥಾಪಕ ಲೋಹಿತ್ ಕಳಂಜ, ಗೌಡ ಸಂಘದ ಪದಾಧಿಕಾರಿಗಳು, ಸೊಸೈಟಿ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
