
ಕನಕಮಜಲು ಬಳಿ ಇಂಡಿಕಾಕಾರು ಮತ್ತು ಬೈಕ್ ಪರಸ್ಪರ ಡಿಕ್ಕಿಯಾಗಿ ಬೈಕ್ ಸವಾರ ತೀವ್ರ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಸುಳ್ಯ ಕಡೆಯಿಂದ ಮಂಗಳೂರಿಗೆ ಹೋಗುತ್ತಿದ್ದ ಕಾರು ಪುತ್ತೂರು ಕಡೆಯಿಂದ ಕನಕಮಜಲು ಬರುತ್ತಿದ್ದ ಬೈಕ್ ಇದಾಗಿದ್ದು ಸ್ಥಳೀಯರು ಬೈಕು ಸವಾರರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೈಕ್ ಸವಾರ ಸ್ಥಳೀಯ ಕನಕಮಜಲು ನಿವಾಸಿಯಾಗಿದ್ದಾರೆ ಎಂದು ತಿಳಿದು ಬಂದಿದೆ .