ಮಂಗಳೂರು: ದ.ಕ ಜಿಲ್ಲೆಯ ಪ್ರವರ್ಗ ‘ಬಿ’ ಮತ್ತು ‘ಸಿ’ ಗೆ ಸೇರಿದ ದೇವಸ್ಥಾನಗಳಿಗೆ ಹೊಸದಾಗಿ ವ್ಯವಸ್ಥಾಪನಾ ಸಮಿತಿ ರಚಿಸುವ ಸಲುವಾಗಿ ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯರಾಗ ಬಯಸುವ ಆಸಕ್ತ ಸಾರ್ವಜನಿಕರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ನಿಗಧಿತ ನಮೂನೆಯಲ್ಲಿ ಭರ್ತಿ ಮಾಡಿ ಜೂನ್ 30 ರಂದು ಸಂಜೆ 5.30ಗಂಟೆಯೊಳಗೆ ಸಹಾಯಕ ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಮಂಗಳೂರು ಇವರಿಗೆ ಸಲ್ಲಿಸಬೇಕು. ನಿಗಧಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ನಿಗಧಿತ ಅರ್ಜಿ ನಮೂನೆಯು ಸಹಾಯಕ ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಮಂಗಳೂರು ಮತ್ತು ಜಿಲ್ಲಾಧಿಕಾರಿಗಳ ಕಚೇರಿಯ ಧಾರ್ಮಿಕ ದತ್ತಿ ಶಾಖೆಯಲ್ಲಿ ಲಭ್ಯವಿರುತ್ತದೆ.
ಸುಳ್ಯ ತಾಲೂಕು: ಸುಳ್ಯ ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಬಿ’ ಪಟ್ಟಿಯ ದೇವಸ್ಥಾನಗಳ ವಿವರ ಇಂತಿವೆ:-ಹರಿಹರ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನ ಹರಿಹರ ಪಲ್ಲತಡ್ಕ.
ಸುಳ್ಯ ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಸಿ’ ಪಟ್ಟಿಯ ದೇವಸ್ಥಾನಗಳ ವಿವರ ಇಂತಿವೆ:- ಎಡಮಂಡಲ ಗ್ರಾಮದ ಶ್ರೀ ದುರ್ಗಪರಮೇಶ್ವರಿ ದೇವಸ್ಥಾನ, ಕುಕ್ಕನ್ನೂರು, ಜಾಲ್ಸೂರು ಗ್ರಾಮದ ಶ್ರೀ ಕಿನ್ನಿಮಾಣಿ ಪೂಮಾಣಿ ದೇವಸ್ಥಾನ, ಮರ್ಕಂಜ ಗ್ರಾಮದ ಶ್ರೀ ಕಾವೂರು ವಿಷ್ಣುಮೂರ್ತಿ ದೇವಸ್ಥಾನ, ವಳಂಬೆ ಗುತ್ತಿಗಾರು ಗ್ರಾಮದ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ, ದೇವಂಚಲ್ಲ ಗ್ರಾಮದ ಶಂಖಪಾಲ ಕಂದ್ರಪಾಡಿ ರಾಜದೈವ ಪುರುಷಭೂತ ದೇವಸ್ಥಾನ, ಏಣೆಕಲ್ಲು ಗ್ರಾಮದ ಶ್ರೀ ಬಚ್ಚನಾಯಕ ದೇವಸ್ಥಾನ, ಬೆಳ್ಳಾರೆ ಗ್ರಾಮದ ಶ್ರೀ ಜಲದುರ್ಗಾದೇವಿ ದೇವಸ್ಥಾನ, ಅಮರ ಪಡ್ನೂರು ಗ್ರಾಮದ ಶ್ರೀ ಚೊಕ್ಕಾಡಿ ಉಳ್ಳಾಕ್ಲು ಯಾನೆ ನಾಯರ್ ಭೂತ ದೇವಸ್ಥಾನ, ಸುಳ್ಯ ಕಸಬಾ ಗ್ರಾಮದ ಶ್ರೀ ಕಾಯರ್ತೋಡಿ ಮಹಾವಿಷ್ಣುಮೂರ್ತಿ ದೇವಸ್ಥಾನ, ಎಡಮಂಗಲ ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಮಂಡೆಕೋಲು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಉಬರಡ್ಕ ಮಿತ್ತೂರು ಗ್ರಾಮದ ಶ್ರೀ ನರಸಿಂಹ ಶಾಸ್ತಾವು ದೇವಸ್ಥಾನ, ಬೆಳ್ಳಾರೆ ಗ್ರಾಮದ ಶ್ರೀ ಪನ್ನೆಭೂತ ದೇವಸ್ಥಾನ, ಏಣೆಕಲ್ಲು ಗ್ರಾಮದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಬಚ್ಚನಾಯಕ ದೇವಸ್ಥಾನ, ಬಳ್ಪ ಗ್ರಾಮದ ಶ್ರೀ ಸದಾಶಿವ ದೇವಸ್ಥಾನ, ಹರಿಹರ ಪಲ್ಲತಡ್ಕ ಗ್ರಾಮದ ಶ್ರೀ ಗಣಪತಿ ದೇವರು ದೇವಸ್ಥಾನ, ಆರಂತೋಡು ಗ್ರಾಮದ ಶ್ರೀ ತೋಡಿಕಾನ ಮಲ್ಲಿಕಾರ್ಜುನ ದೇವಸ್ಥಾನ, ಆಲೆಟ್ಟಿ ಗ್ರಾಮದ ಶ್ರೀ ಇಡ್ಯಡ್ಕ ಕ್ಷೇತ್ರಪಾಲ ದೇವರು, ಜಾಲ್ಸೂರು ಗ್ರಾಮದ ಶ್ರೀ ಅಡ್ಕಾರು ಸುಬ್ರಹ್ಮಣ್ಯ ದೇವರು, ಅಜ್ಜವಾರ ಗ್ರಾಮದ ಶ್ರೀ ಮುಳ್ಯ ವಿನಾಯಕ ದೇವಸ್ಥಾನ, ಅಜ್ಜಾವರ ಗ್ರಾಮದ ಶ್ರೀ ತುದಿಯಡ್ಕ ಸದಾಶಿವ ದೇವರು, ಮಂಡೆಕೋಲು ಗ್ರಾಮದ ಶ್ರೀ ಅಲೆಟ್ಟಿ ವಿಷ್ಣುಮೂರ್ತಿ ದೇವಸ್ಥಾನ, ಸುಬ್ರಹ್ಮಣ್ಯ ಗ್ರಾಮದ ಶ್ರೀ ಜಾರಿ ಬ್ರಹ್ಮದಾಯ ಸುಬ್ರಹ್ಮಣ್ಯ ದೇವರು, ಅಜ್ಜಾವರ ಗ್ರಾಮದ ಶ್ರೀ ಬೆಟ್ಟಮಾನ್ಯ ಉಳಿಯಾ ಬೈಪಾಡಿತ್ತಾಯ ದೇವರು, ಐವತೋಕ್ಲು ಗ್ರಾಮದ ಶ್ರೀ ಪೈಂದೋಡಿ ಸುಬ್ರಾಯ ದೇವರು, ಎಡಮಂಗಲ ಗ್ರಾಮದ ನೂಜಿಲ ಗೋಪಾಲಕೃಷ್ಣ ದೇವಸ್ಥಾನ, ಎಡಮಂಗಲ ಗ್ರಾಮದ ನೂಜಿಲ ಬಾಲಚಂದ್ರ ದೇವಸ್ಥಾನ, ಪಂಬೆತ್ತಾಡಿ ಗ್ರಾಮದ ಶ್ರೀ ವಿನಾಯಕ ದೇವಸ್ಥಾನ ಗೋಳಿಕಟ್ಟೆ, ನಾಲ್ಕೂರು ಗ್ರಾಮದ ಶ್ರೀ ಕಾಳದುರ್ಗಾದೇವಿ ದೇವಸ್ಥಾನ, ಪಡ್ನೂರು ಗ್ರಾಮದ ಶ್ರೀ ಮಳಿಯಾಳಿ ಭೂತ, ಮುರಳ್ಯ ಗ್ರಾಮದ ಶ್ರೀ ಗಣಪತಿ ಮಲ್ಲಿಕಾರ್ಜುನ ದೇವಸ್ಥಾನ, ಬಜ್ಪೆ ಗ್ರಾಮದ ಶ್ರೀ ನೇರ್ಪು ರಾಜನ್ ದೇವಸ್ಥಾನ ಎಂದು ಹಿಂದೂ ಮತ್ತು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್, ಮಂಗಳೂರು ಹಾಗೂ ಸಹಾಯಕ ಆಯುಕ್ತರು ಪದನಿಮಿತ್ತ ಕಾರ್ಯದಶಿಗಳ ಪ್ರಕಟಣೆ ತಿಳಿಸಿದೆ.