✍️ ಚಿದಾನಂದ ಪರಿವಾರ್
ಯುವ ಬ್ರಿಗೇಡ್ ಗೆ 6 ವರುಷ ತುಂಬಿದೆ ಅದಕ್ಕೆ ತುಂಬಾ ಹೆಮ್ಮೆ, ಖುಷಿ ಎಲ್ಲಾ ಇದೆ. ಯಾವುದೇ ಪ್ರತಿಫಲ ನಿರೀಕ್ಷೆ ಇಲ್ಲದೆ ಗೆಳಯರ ಜೊತೆಗೂಡಿ ನಿಸ್ವಾರ್ಥವಾಗಿ ಮಾಡೋ ಕೆಲಸದ ಅನುಭವ ಅದ್ಭುತ. ಎಲ್ಲಾ ಒಂದೇ ಮನಸಿನ ಮನಸುಗಳು ತಂಡದಲ್ಲಿ ಒಬ್ಬರು ಸೂಚಿಸಿದ ಕೆಲಸಕ್ಕೆ ಒಮ್ಮತದಿಂದ ತೊಡಗೋದು ಅದೂ ಸಮಯ ನಿಗದಿ ಇಲ್ಲದೆ. ನೂರಾರು ಸೇವೆಗಳನ್ನು ಕೊಟ್ಟ ಹೆಮ್ಮೆ ನಮ್ಮದು. ಬಡವ ಬಲ್ಲಿದ ಎನ್ನದೆ ರಕ್ತದಾನ, ಸ್ವಚ್ಛತೆ, ಜಾತ್ರೋತ್ಸವ ದಲ್ಲಿ ಸ್ವಚ್ಛತೆ, ಬಸ್ಸ್ ನಿಲ್ದಾಣಗಳು , ಸರಕಾರಿ ಪ್ರಾಥಮಿಕ ಶಾಲೆಗಳು, ಗುಡಿಗಳು, ಸುಳ್ಯ -ಸಂಪಾಜೆ ಹೆದ್ದಾರಿಯ ಸೂಚನಾ ಫಲಕ ದ ಸ್ವಚ್ಛತೆ, ಮನೆ ನಿರ್ಮಾಣ ವಂತೂ ತಂಡಕ್ಕೆ ಕಿರೀಟ ಹೊರುವಂತ ಕೆಲಸ, ಅಂಗನವಾಡಿಗಳು, ಹಿಂದೂ ರುದ್ರ ಭೂಮಿ, ಮುಖ್ಯ ರಸ್ತೆಯ ಗುಂಡಿಗಳ ಮುಚ್ಚುವಿಕೆ, ವಿದ್ಯುತ್ ಸಂಪರ್ಕ ಮತ್ತು ವೈರಿಂಗ್, ಸೋಲಾರ್ ಅಳವಡಿಕೆ, ಮನೆಯ ಮೇಲ್ಚಾವಣಿ ನಿರ್ಮಾಣ, ಪಡಿತರ ಚೀಟಿ ಇಲ್ಲದವರಿಗೆ ಒದಗಿಸಿ ಕೊಡುವುದು, ಅಂಗವಿಕಲ ವೇತನ ಬರುವಂತೆ ಮಾಡಿದ್ದು, ಬಡವರಿಗೆ ಆಧಾರ್ ಕಾರ್ಡ್ ಮಾಡಿಸಿ ಕೊಟ್ಟದ್ದು ಹೀಗೆ ಸೇವಾ ಕಾರ್ಯಗಳು ನಡೆದವು. ಖರ್ಚು ವೆಚ್ಚವನ್ನು ಸದಸ್ಯರು ಗಳೇ ಹೊಂದಿಸುವುದರ ಜೊತೆಗೆ ದಾನಿಗಳು ಕೈಜೋಡಿಸಿದ್ದು ತುಂಬಾ ಇದೆ. ಗೆಳೆಯರ ಜೊತೆ ಸೇರಿ ಕೆಲಸ ಮಾಡುವಾಗ ಸಮಯ ಕಳೆಯೋದೇ ಗೊತ್ತಾಗೋದಿಲ್ಲ, 7 ಗಂಟೆಗೆ ಪ್ರಾಂಭಿಸಿ ಕೆಲಸ ಮುಗಿಯೋದು ರಾತ್ರಿ 8 ಗಂಟೆ ಆದರೂ ಅರ್ಧದಿಂದ ಬರೋ ಮಾತೆ ಇಲ್ಲ, ಕೆಲವೊಂದು ರಾತ್ರಿ 7ರಿಂದ ಮುಂಜಾನೆ 2 ಗಂಟೆ ಆದದ್ದೂ ಇದೆ. ಹಾಗೇನೇ ಇನ್ನೂ ಮುಂದೆಯೂ ನಡೆಯಲಿ, ಆ ದೇವರು ಎಲ್ಲರಿಗೂ ಶಕ್ತಿ, ಸಾಮರ್ಥ್ಯ, ಆರೋಗ್ಯ ನೀಡಲಿ ಎಂದು ನನ್ನ ಪ್ರಾರ್ಥನೆ. @ಯುವಾಬ್ರಿಗೇಡ್ ಸುಳ್ಯ ತಾಲೂಕು. ತಂಡವು ಸೇವೆಯು ಇನ್ನಷ್ಟು ಬೆಳೆಯಲಿ. ಜೈ ಯುವ ಬ್ರಿಗೇಡ್. ಜೈ ಚಕ್ರವರ್ತಿ ಅಣ್ಣ.
✍️ಚಿದಾನಂದ ಪರಿವಾರ್. ಯುವಾ ಬ್ರಿಗೇಡ್ ಸಂಚಾಲಕ ಸುಳ್ಯ