
ಸುಳ್ಯ ಜಯನಗರದ ನಾರಾಜೆಯಲ್ಲಿ ವ್ಯಕ್ತಿಯೊಬ್ಬರಿಗೆ ಸಿಡಿಲಾಘಾತಗೊಂಡು ಕುಸಿದು ಬಿದ್ದ ಘಟನೆ ಇಂದು ನಡೆದಿದೆ. ತನ್ನ ಸಹೋದರಿ ಗೀತಾ ಮನೆೆಗೆ ಬಂದಿದ್ದ ಪುತ್ತೂರು ನಿವಾಸಿ ಜಯರಾಮ (27)ಎಂಬವರು ಫೋನ್ ನಲ್ಲಿ ಮಾತನಾಡುವ ವೇಳೆ ಸಿಡಿಲಾಘಾತಕ್ಕೆ ಕುಸಿದು ಬಿದ್ದರೆನ್ನಲಾಗಿದೆ.ಅವರು ಸಹೋದರಿ ಮನೆ ಸಮೀಪ ಬಂದು ಕಾರಿನಿಂದ ಇಳಿಯುವ ವೇಳೆಯೇ ಸಿಡಿಲಾಘಾತವಾಗಿದ್ದ ಅವರ ಕೈಯಲ್ಲಿದ್ದ ಮೊಬೈಲ್ ದೂರಕ್ಕೆ ಎಸೆಯಲ್ಪಟ್ಟಿತ್ತು. ಕುಸಿದ ಬಿದ್ದ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ.