ಸುಳ್ಯ ನಗರದಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಸಾರ್ವಜನಿಕರು ಅಳವಡಿಸಿಕೊಳ್ಳಲು ಮಂಗಳೂರು ಲೋಕಾಯುಕ್ತ ಡಿವೈಎಸ್ಪಿ ವಿಜಯ ಪ್ರಸಾದ್ ಸೂಚನೆ ನೀಡಿದ್ದಾರೆ.
ಅವರು ಸುಳ್ಯ ಪೇಟೆಯಲ್ಲಿ ಅಧಿಕಾರಿಗಳ ಜತೆ ರೌಂಡ್ಸ್ ಮಾಡಿದರು.ಈ ಸಂದರ್ಭದಲ್ಲಿ ಕೆಲವರು ಮಾಸ್ಕ್ ಧರಿಸದೆ ಅಂತರ ಕಾಯ್ದುಕೊಳ್ಳದಿರುವುದನ್ನು ಗಮನಿಸಿದ ಡಿವೈಎಸ್ಪಿ ಯವರು ಅವರಿಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡ ಘಟನೆಯೂ ನಡೆಯಿತು.ಸುಳ್ಯ ಪೇಟೆಯಲ್ಲಿ ಅಂಗಡಿ ಹೋಟೆಲ್, ಬ್ಯಾಂಕ್,ಮೆಡಿಕಲ್, ವಸ್ತ್ರ ಮಳಿಗೆ ಕಛೇರಿಗಳಿಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಲೋಕಾಯುಕ್ತ ಹೆಡ್ ಕಾನ್ಸ್ಟೆಬಲ್ ವೇಣುಗೋಪಾಲ್, ಸುಳ್ಯ ನಗರ ಪಂಚಾಯತ್ ಅರೋಗ್ಯ ನಿರೀಕ್ಷಕ ರವಿ ಕೃಷ್ಣ ಪಂಚಾಯತ್ ಸಿಬ್ಬಂದಿಗಳು ಇದ್ದರು.