ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಪೈಚಾರು ಪರಿಸರದಲ್ಲಿ ಎರಡು ಮಕ್ಕಳು ಸೇರಿದಂತೆ ಹತ್ತಕ್ಕೂ ಅಧಿಕ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಎಸ್ಡಿಪಿಐ ವತಿಯಿಂದ ಅಧಿಕಾರಿಗಳಿಗೆ ಮನವಿ ಜೂ 9 ರಂದು ನೀಡಲಾಗಿದೆ. ಕಳೆದ ಎರಡು ದಿನಗಳಲ್ಲಿ ಅತ್ಯಧಿಕ ಪ್ರಕರಣಗಳು ದಾಖಲಾಗಿದ್ದು ಆಶಾ ಕಾರ್ಯಕರ್ತರು ಯಾವುದೇ ಸಂದರ್ಶನವನ್ನು ನೀಡಿರುವುದಿಲ್ಲ ಅದೇ ರೀತಿ ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳನ್ನು ಹೊದಗಿಸಿಕೊಡಬೇಕಾಗಿ ಎಸ್ಡಿಪಿಐ ಪಕ್ಷದವತಿಯಿಂದ ಮನವಿಯಲ್ಲಿ ಆಗ್ರಹಿಸಲಾಗಿದೆ ಎಂದು ಎಸ್ಡಿಪಿಐ ಪೈಚಾರು ಬ್ರಾಂಚ್ ಅಧ್ಯಕ್ಷ ಆಬಿದ್ ಪೈಚಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ಮುಸ್ತಫ, ನಗರ ಉಪಾಧ್ಯಕ್ಷ ಇಕ್ಬಾಲ್, ಸಮಿತಿ ಸದಸ್ಯರಾದ ಅಶ್ರಫ್ ಪೈಚ್ಚಾರ್, ಅಕ್ಬರ್ ಮಹಮ್ಮದ್, ಮರ್ಝೂಕ್, ಇರ್ಶಾದ್ ಸುಳ್ಯ,ಮೊದಲಾದವರು ಉಪಸ್ಥಿತರಿದ್ದರು.
- Friday
- November 1st, 2024