Ad Widget

ಯುವತಿಯರ ಮದುವೆ ವಯಸ್ಸು 21ಕ್ಕೆ ಏರಿಕೆ ಮಾಡುವ ಬಗ್ಗೆ ಕೇಂದ್ರ ಚಿಂತನೆ


ಯುವತಿಯರ ಮದುವೆಗೆ ನಿಗದಿಪಡಿಸಿದ ಕನಿಷ್ಟ ವಯೋಮಿತಿಯನ್ನು 18 ವರ್ಷದಿಂದ 21 ವರ್ಷಕ್ಕೆ ಏರಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ . ಈ ಕುರಿತಾಗಿ ವರದಿ ನೀಡಲು ಸಮಿತಿಯನ್ನು ರಚಿಸಲಾಗಿದೆ . ಸಮತಾ ಪಕ್ಷದ ಮಾಜಿ ಅಧ್ಯಕ್ಷರಾದ ಜಯಾ ಜೇಟ್ಲಿ ನೇತೃತ್ವದಲ್ಲಿ 10 ಜನರ ಕಾರ್ಯಪಡೆಯನ್ನು ರಚಿಸಲಾಗಿದೆ . ಪುರುಷರಿಗೆ ಸಮಾನವಾಗಿ 21 ವರ್ಷಕ್ಕೆ ಯುವತಿಯರ ಮದುವೆ ವಯಸ್ಸಿನ ಕನಿಷ್ಠ ವಯೋಮಿತಿ ಏರಿತ ಮಾಡಲು ಚಿಂತನೆ ನಡೆಸಲಾಗಿದೆ . ಶಿಶುವಿನ ಆರೋಗ್ಯ , ಶಿಶುವಿನ ಮರಣದ ಮೇಲೆ ಮದುವೆಯ ವಯಸ್ಸಿನ ಪರಿಣಾಮ , ತಾಯಂದಿರ ಮರಣ , ಮಾತೃತ್ವ , ಲಿಂಗಾನುಪಾತ , ಫಲವತ್ತತೆಯ ದರ ಮೊದಲಾದ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸಿ ಸಮಿತಿ ವರದಿ ನೀಡಲಿದೆ . ಈ ಹಿಂದ 1978 ರಲ್ಲಿ ಮದುವೆ ವಯೋಮಿತಿಯನ್ನು 15 ರಿಂದ 18 ವರ್ಷಕ್ಕೆ ಏರಿಕೆ ಮಾಡಲಾಗಿದೆ . ಈಗ 21 ವರ್ಷಕ್ಕೆ ಏರಿಕೆ ಮಾಡಲು ಚಿಂತನೆ ನಡೆದಿದೆ ಎನ್ನಲಾಗಿದೆ .

. . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!