ಶಾಲೆ ಪ್ರಾರಂಭ ಸದ್ಯಕ್ಕಿಲ್ಲ , ಹಂತ ಹಂತವಾಗಿ ತೆರೆಯಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಉಡುಪಿಗೆ ಆಗಮಿಸಿದ್ದ ಅವರು ಪತ್ರಿಕಾಗೋಷ್ಠಿ ನಡೆಸಿ ಈ ಮಾತನ್ನು ಹೇಳಿದರು.
ಈಗಾಗಲೇ ಜುಲೈ ನಿಂದ ಶಾಲೆಗಳು ಪ್ರಾರಂಭಿಸುವ ಕುರಿತಾಗಿ ಪೋಷಕರ ಅಭಿಪ್ರಾಯ ಸಂಗ್ರಹಿಸಲಾಗುವುದು. ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಮುಂದೂಡುವಂತೆ ಅಭಿಪ್ರಾಯಗಳು ಬಂದಿದ್ದವು. ಮಕ್ಕಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಕಷ್ಟಸಾಧ್ಯವಿದೆ. ಈ ಹಿನ್ನಲೆಯಲ್ಲಿ ಸದ್ಯದ ಮಟ್ಟಿಗೆ ಶಾಲೆಗಳು ಪ್ರಾರಂಭವಾಗುವುದಿಲ್ಲ.
ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಯು ಮಾರ್ಗಸೂಚಿಗಳನ್ನು ನೀಡಿದ್ದಾರೆ. ಅದರ ಪ್ರಕಾರವೇ ಶಾಲೆಗಳನ್ನು ತೆರೆಯಲಾಗುವುದು. ಆಗಷ್ಟ್ ಬಳಿಕ ಹಂತ ಹಂತವಾಗಿ ಶಾಳೆಗಳನ್ನು ಪ್ರಾರಂಭಿಸಲಾಗುವುದು. ಮೊದಲ ಹಂತದಲ್ಲಿ ಪ್ರೌಢ ಶಾಲೆಗಳನ್ನು ಪ್ರಾರಂಭಿಸಲಾಗುವುದು. ಎರಡನೇ ಹಂತದಲ್ಲಿ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಲಾಗುವುದು. ಈ ಬಗ್ಗೆ ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಎಸ್ ಎಸ್ ಎಲ್ ಸಿ ಪರೀಕ್ಷೆ ರದ್ದು ಇಲ್ಲ : ಯಾವುದೇ ಒತ್ತಡ, ಲಾಭಿಗೆ ಮಣಿಯುವುದಿಲ್ಲ. ಎಸ್ ಎಸ್ ಎಲ್ ಸಿ ಪರೀಕ್ಷೆ ರದ್ದು ಮಾಡಲ್ಲ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಪರೀಕ್ಷೆಯನ್ನು ನಡೆಸಿಯೇ ಸಿದ್ಧ ಎಂದು ಹೇಳಿದರು. ಎಸ್ ಎಸ್ ಎಲ್ ಸಿ ಎಂದರೆ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಅದನ್ನು ತಡೆಹಿಡಿದರೆ ಭವಿಷ್ಯಕ್ಕೆ ತೊಂದರೆಯುಂಟಾಗಲಿದೆ. ಈಗಾಗಲೇ ತೆಲಂಗಾಣ, ತಮಿಳುನಾಡು ಹಾಗೂ ಪಾಂಡಿಚೇರಿಯಲ್ಲಿ ಹತ್ತನೇ ತರಗತಿಯ ಪರೀಕ್ಷೆಯನ್ನು ರದ್ದು ಗೊಳಿಸಿ ಆದೇಶಿಸಿದೆ. ಆದರೆ ಕರ್ನಾಟಕ ಈ ರಾಜ್ಯವು ಇಂತಹ ನಿರ್ಧಾರವನ್ನು ಅನುಸರಿಸುವುದಿಲ್ಲ ಎಂದರು.
ಸುರಕ್ಷತಾ ಕ್ರಮಗಳು ಹೇಗಿದೆ? ಪರೀಕ್ಷಾ ಕೊಠಡಿಗಳ ಸಂಖ್ಯೆ ಹೆಚ್ಚು ಆಗಲಿದೆ. ಸ್ಯಾನಿಟೈಸರ್ ಬಳಕೆ ಮಾಡಲಿದೆ. ಒಂದು ಕೊಠಡಿಯಲ್ಲಿ 18 ರಿಂದ 20 ಮಕ್ಕಳು ಮಾತ್ರ ಪರೀಕ್ಷೆ ಬರೆಯಲ್ಲಿದ್ದಾರೆ. ಪರೀಕ್ಷಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಮಾಸ್ಕ್ ಧರಿಸಿಕೊಂಡೇ ಪರೀಕ್ಷೆಯನ್ನು ಬರೆಯಬೇಕಾಗಿದೆ.