ಅರಂತೋಡು ಕಳೆದ ವಾರ ಅರಂತೋಡಿನ ಸಂಬಂಧಿಕರ ಮನೆಗೆ ಬಂದಿದ್ದ ವೈದ್ಯರಿಗೆ ಕೊರೋನಾ ಪಾಸಿಟಿವ್ ಧೃಡಪಟ್ಟಿದ್ದ ಹಿನ್ನಲೆಯಲ್ಲಿ ಅವರನ್ನು ಮಂಗಳೂರು ಆಸ್ಪತ್ರೆ ಗೆ ದಾಖಲಾಗಿದ್ದ ವೈದ್ಯರ ವರದಿ ನೆಗೆಟಿವ್ ಬಂದಿದ್ದು ವೈದ್ಯರು ಬಂದಿದ್ದ ಸಂಬಂಧಿಕರ ಮನೆ ಯಜಮಾನ ಮದುವೆಯಲ್ಲಿ ಭಾಗವಹಿಸಿದರು.ಅವರನ್ನು ಕ್ವಾರೆಂಟೈನ್ ನಲ್ಲಿರಲು ಸೂಚಿಸಲಾಯಿತು.ಇದೀಗ ಅವರು ಹಾಗೂ ಅವರ ಸಂಪರ್ಕದಲ್ಲಿದ್ದ ವ್ಯಕ್ತಿಗಳ ವರದಿ ನೆಗೆಟಿವ್ ಬಂದಿದ್ದು ಅರಂತೋಡಿನ ಜನರು ನಿಟ್ಟಿಸಿರು ಬಿಟ್ಟಿದ್ದಾರೆ.
ತಾಲ್ಲೂಕು ಆರೋಗ್ಯಾಧಿಕಾರಿ ಅವರ ಸೂಚನೆಯ ಪ್ರಕಾರ ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಏಳು ದಿನ ಇದ್ದ ನಂತರ ವರದಿಯು ನೆಗೆಟಿವ್ ಬಂದಲ್ಲಿ ಅವರನ್ನು ಹದಿನಾಲ್ಕು ದಿನಗಳ ಹೋಂ ಕ್ವಾರಂಟೈನ್ ಗಾಗಿ ಮನೆಗೆ ಕಳುಹಿಸುವುದಾಗಿದೆ. ಅರಂತೋಡಿನ ಪ್ರಕರಣದಲ್ಲಿ ಎಲ್ಲರೂ ಹೋಂ ಕ್ವಾರಂಟೈನ್ ನಲ್ಲಿ ಇರುವ ಕಾರಣ 14 ದಿನಗಳ ಹೋಂ ಕ್ವಾರಂಟೈನ್ ಮುಗಿಸಲೇ ಬೇಕು ಎಂಬುದಾಗಿದೆ. ಆದುದರಿಂದ ಕ್ವಾರಂಟೈನ್ ನಲ್ಲಿರುವ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರೆಲ್ಲರೂ ಕೂಡ ದಿನಾಂಕ 14-06-2020 ರವರೆಗೆ ಹೋಂ ಕ್ವಾರಂಟೈನ್ ನಲ್ಲಿ ಇರಬೇಕಾಗಿ ಮೂಲಕ ಸೂಚಿಸಲಾಗಿದೆ.