ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಎರಡು ಬಣಗಳ ಕಾದಾಟದಲ್ಲಿ
ನಮ್ಮ ಜಮಾಅತ್ ಗೆ ಒಳಪಟ್ಟ ಅಮಾಯಕ ಅಬ್ದುಲ್ ಲತೀಫ್ ಎಂಬ ಯುವಕನನ್ನು ಹಾಡಹಗಲೇ ದುಷ್ಕರ್ಮಿಗಳು ಕೊಲೆಗೈದು ವಿಕ್ರತಿ ಮೆರೆದದ್ದು ಖಂಡನೀಯವಾಗಿದೆ.
ಸಾದು ಸ್ವಭಾವ ಮತ್ತು ಪರೋಪಕಾರಿ ಯಾಗಿ ನಮ್ಮ ಜಮಾಅತ್ ನ ಎಲ್ಲಾ ಆಗು ಹೋಗುಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಈ ಯುವಕನ ಅಕಾಲಿಕ ಮರಣವು ಇಡೀ ಊರನ್ನೆ ಶೋಕ ಸಾಗರದಲ್ಲಿ ಮುಳುಗಿಸಿದೆ.
ಈಗಾಗಲೇ ಪೋಲಿಸರು ನಾಲ್ಕು ಆರೋಪಿಗಳನ್ನು ಬಂದಿಸಿರುವುದು ಸ್ವಾಗತಾರ್ಹವಾಗಿದೆ.ಆದರೆ ಕೊಲೆಗೆ ಕುಮ್ಮಕ್ಕು ನೀಡಿದ ಮತ್ತು ಪ್ರಚೋದನೆ ನೀಡಿದ ಆರೋಪಿಗಳನ್ನು ಪೋಲಿಸ್ ಇಲಾಖೆ ಶೀಘ್ರವಾಗಿ ಬಂಧಿಸಿ ಇದರ ಹಿಂದಿರುವ ಎಲ್ಲಾ ಕಾಣದ ಕೈಗಳನ್ನು ಬಂದಿಸಬೇಕಾಗಿದೆ.
ಆರೋಪಿಗಳು ಎಷ್ಟೇ ಪ್ರಭಾವ ಶಾಲಿಯಾಗಿದ್ದರು ಪೋಲಿಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೆ ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು.
ಅದೇ ರೀತಿಯಲ್ಲಿ ಈಗಾಗಲೇ ವೈರಲ್ ಆಗಿರುವ ಒಂದು ವಾಯ್ಸ್ ಮೆಸೇಜ್ ನಲ್ಲಿ ಮ್ರತ ಅಬ್ದುಲ್ ಲತೀಫ್ ಹೇಳುವಂತೆ ಕತರ್ ನಲ್ಲಿರುವ M.K ರಿಝ್ವಾನ್ ಎಂಬವನು ಕಳೆದ ಮೂರು ತಿಂಗಳಿನಿಂದಲೇ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.ಹಾಗೂ ಇದಕ್ಕೆ ಪೂರಕವೆಂಬಂತೆ ಈ ಕೊಲೆಯಲ್ಲಿ ಆತನ ತಮ್ಮನು ಶಾಮೀಲಾಗಿ ಬಂಧನಕ್ಕೆ ಒಳಗಾಗಿದ್ದಾನೆ.
ಅದೇ ರೀತಿಯಲ್ಲಿ ಲತೀಫ್ ವಿದೇಶದಲ್ಲಿ ಇರುವ ವ್ಯಕ್ತಿಯೋರ್ವರಿಗೆ ಉದ್ಯಮಕ್ಕೆ ಹನ್ನೆರಡು ಲಕ್ಷ ಹಣ ನೀಡಿ ಹಣ ಪಡೆದ ವ್ಯಕ್ತಿ ಲಾಭಾಂಶವನ್ನು ನೀಡದೆ ಮತ್ತು ಮರಳಿ ಹಣವನ್ನು ನೀಡದೆ ಸತಾಯಿಸುತ್ತಿದ್ದ.
ಹಾಗೂ ಇದೇ ರೀತಿ ಕೆಲವರ ಉದ್ಯಮಕ್ಕೆ ಬಂಡವಾಳ ಹಾಕಿ ವಂಚನೆಗೆ ಒಳಗಾಗಿದ್ದ ಎಂಬ ಮಾಹಿತಿ ಕೂಡ ಇದೆ.
ಹಾಗಾಗಿ ಇದು ಕೇವಲ ಕಾರ್ ಗೆ ಸೈಡ್ ಕೊಡುವ ವಿಚಾರದ ಮುಂದುವರಿದ ಬಾಗವೆಂಬುದು ಕೇವಲ ಕೇಸ್ ನಿಂದ ತಪ್ಪಿಸಿಕೊಳ್ಳಲು ಮಾಡಿದ ಪ್ರೀಪ್ಲಾನ್ ಎಂಬಂತೆ ಬಾಸವಾಗುತ್ತಿದೆ. ಹಾಗೂ ಇದರ ಹಿಂದೆ ಬೇರೆ ಯಾವುದೋ ಬಲವಾದ ಕಾರಣ ಮತ್ತು ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ ಎಂಬಂತೆ ಕಾಣುತ್ತಿದೆ.
ಆದ್ದರಿಂದ ಪೋಲಿಸ್ ಇಲಾಖೆ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಿ ಇದರ ಹಿಂದಿರುವ ನೈಜ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು.
ಅದೇ ರೀತಿ ಕೊಲೆಗೈದ ಆರೋಪಿಗಳ ಜಮಾಅತ್ ನ ಆಡಳಿತ ಸಮಿತಿಗಳು ತಮ್ಮ ಮಸ್ಜಿದ್ ನಿಂದ ಆರೋಪಿಗಳ ಸದಸ್ಯತ್ವವನ್ನು ವಜಾಗೊಳಿಸಿ ಸಾಮಾಜಿಕ ಬಹಿಷ್ಕಾರ ಹಾಕಿ ಇಂತಹ ಮನಸ್ಥಿತಿಯ ವ್ಯಕ್ತಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಬೇಕೆಂದು ರಿಫಾಯಿ ಜುಮಾಃ ಮಸ್ಜಿದ್ ಸಮಹಾದಿ ಮುರುಳ್ಯ ಆಡಳಿತ ಸಮಿತಿಯು ಪತ್ರಿಕಾ ಪ್ರಕಟಣೆಯ ಮೂಲಕ ಪೋಲಿಸ್ ಇಲಾಖೆಯನ್ನು ಮತ್ತು ಮುಲ್ಕಿ ವ್ಯಾಪ್ತಿಗೆ ಸಂಬಂಧಪಟ್ಟ ಮಸ್ಜಿದ್ ಆಡಳಿತ ಸಮಿತಿಗಳನ್ನು ಆಗ್ರಹಿಸಿದೆ.
- Friday
- November 22nd, 2024