ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು ಕೈಗೊಂಡ ಕ್ರಮದಿಂದ ಪ್ರಾರ್ಥನಾ ಮಂದಿರಗಳ ಪ್ರವೇಶ ಸುಮಾರು 2 ತಿಂಗಳುಗಳಿಂದ ನಿರ್ಬಂಧಿಸಲಾಗಿದ್ದು ಜೂ.8 ರಿಂದ ಮತ್ತೆ ತೆರೆಯಲಿದೆ.
ಬೆಳ್ಳಾರೆಯ ಮುಖ್ಯ ಪೇಟೆ ಸಮೀಪ ಇರುವ ಝಖರಿಯ್ಯಾ ಜುಮ್ಮಾ ಮಸೀದಿಯಲ್ಲಿ ಭಕ್ತಾದಿಗಳಿಗೆ ಇಂದಿನಿಂದ ಪ್ರವೇಶ ನೀಡಲಾಗಿದೆ. ಮುಖಕ್ಕೆ ಮಾಸ್ಕ್ ಕಡ್ಡಾಯವಾಗಿ ಹಾಕಿಕೊಂಡು ಬರಬೇಕು. ಸರಕಾರದ ಆದೇಶಗಳನ್ನು
ಸಂಪೂರ್ಣ ವಾಗಿ ಪಾಲಿಸಲಾಗುವುದು.ಮಸೀದಿಯಲ್ಲಿ ಪ್ರವೇಶಿಸುವವರಿಗೆ ಮತ್ತು ಹೊರಹೋಗುವ ವರಿಗೆ ಸೋಪ್ ಉಪಯೋಗಿಸಿ ಕೈಗಳನ್ನು ರೋಗಾಣು ಮುಕ್ತವಾಗಿಸಲು ವ್ಯವಸ್ಥೆ ಮಾಡಲಾಗಿದೆ. ಅಂಗಶುದ್ದಿಯನ್ನು ಮನೆಯಿಂದಲೇ ಮಾಡಲು ನಿರ್ದೇಶನ ನೀಡಲಾಗಿದೆ.
ಮಸೀದಿಯ ಹೌಲುಗಳ ಬದಲು ನಲ್ಲಿ ನೀರಿನಿಂದ (ಟೇಪ್) ಅಂಗಶುದ್ದಿ. ರೋಗಿಗಳು,ವೃದ್ಧರು,
ಮಕ್ಕಳು, ಪ್ರತಿರೋಧ ಶಕ್ತಿ ಕಮ್ಮಿ ಇರುವ ಮಂದಿಗೆ ಅವಕಾಶವಿಲ್ಲ. ಅಪರಿಚಿತರು,ಯಾತ್ರಿಕರು ಮುಂತಾದವರಿಗೆ ಅನಿವಾರ್ಯ ವಾಗಿ ಬಂದರೆ ಮಸೀದಿಯ ಹೊರಗಿನ ಚಾವಡಿ ಯಲ್ಲಿ ನಮಾಜಿಗೆ ವ್ಯವಸ್ಥೆ ಮಾಡಲಾಗಿದೆ. ಬಾಂಗಿಗೆ ಐದು ನಿಮಿಷಗಳ ಮೊದಲು ಮಸೀದಿಯನ್ನು ತೆರೆಯುವುದು ಜಮಾಅತನ್ನು ಹದಿನೈದು ನಿಮಿಷಗಳ ಒಳಗೆ ಮತ್ತು ಜುಮಾ ನಮಾಜು ಇಪ್ಪತ್ತು ನಿಮಿಷಗಳ ಒಳಗೆ ನಿರ್ವಹಿಸಿ ಇತರ ಸಮಯದಲ್ಲಿ ಮಸೀದಿಯನ್ನು ಬಂದ್ ಮಾಡಲಾಗುವುದು. ಜನರು ನಮ್ಮೊಂದಿಗೆ ಸಹಕರಿಸಬೇಕು ಎಂದು ಮಸೀದಿ ಅಧ್ಯಕ್ಷ ಕೆ.ಎಂ.ಮಹಮ್ಮದ್ ಹಾಜಿಯವರು ತಿಳಿಸಿದ್ದಾರೆ.