
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ SKSSF ಸುಳ್ಯ ಟೌನ್ ಶಾಖೆಯ ವತಿಯಿಂದ ಗಿಡ ನೆಡುವ ಕಾರ್ಯಕ್ರಮ ಅರಂಬೂರು ಮದ್ರಸ ವಠಾರದಲ್ಲಿ ನಡೆಯಿತು.
ಸುಳ್ಯ ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ರಜಾಕ್ ಕರಾವಳಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸುಳ್ಯ ಟೌನ್ ಅಧ್ಯಕ್ಷ ಆಶಿಕ್ ಸುಳ್ಯ, ಸುಳ್ಯ ಮದ್ರಸ ಮೇನೇಜ್ಮೆಂಟ್ ಪ್ರ. ಕಾರ್ಯದರ್ಶಿ ಬಶೀರ್ ಯು.ಪಿ, ಜಿಲ್ಲಾ ಕೌನ್ಸಿಲ್ ಸದಸ್ಯ ಶಹೀದ್ ಪಾರೆ,ಸುಳ್ಯ ವಲಯ ವಿಖಾಯ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ಸಹಚಾರಿ ಕಾರ್ಯದರ್ಶಿ ಅಬ್ದುಲ್ ಕುಂಞಿ ಅರಂಬೂರ್, ಹಾಷಿಂ ಕೆ.ಹೆಚ್, ನವಾಜ್ ಸುಪ್ರೀಂ, ಫಾಹಿಂ ಪಾಷ, ಮನಾಝ್, ಮಹ್ರೂಫ್ ಉಪಸ್ತಿತರಿದ್ದರು.
ಪ್ರ.ಕಾರ್ಯದರ್ಶಿ ಅಕ್ಬರ್ ಕರಾವಳಿ ಸ್ವಾಗತಿಸಿ, ವಂದಿಸಿದರು.