Ad Widget

ಶಾಲಾ ಪ್ರಾರಂಭೋತ್ಸವ ಸಂತೋಷದ ಹುಮ್ಮಸ್ಸಿನಲ್ಲಿ, ಈ ದಿನ ಬೇಸರ ಆವರಿಸಿಕೊಂಡಾಗ…

ಜೂನ್01 ಬಂದರೆ  ಸಾಕು ಪ್ರತಿ ವರ್ಷವೂ  ಎಂದಿನಂತೆ ಶಾಲಾ ಮಕ್ಕಳು ಉಲ್ಲಾಸ, ಉತ್ಸಾಹದ ಜೊತೆಗೆ ಹೊಸ ಹುರುಪಿನಿಂದ ಶಾಲೆಯ ಅಂಗಳಕ್ಕೆ ಬರುತ್ತಿರುತ್ತಾರೆ…

. . . . . . .

*ಆಹಾ!!* ಬೇಸಿಗೆ ರಜೆಯಲ್ಲಿ ಅವ್ವನ ಮನೆಗೋ,ಮಾವನ ಮನೆಯೋ ಹೀಗೇ ಸಂಸಾರದ ಸಂಬಂಧಿಗಳ ಮನೆಗೆ ಪ್ರಯಾಣ ಮಾಡಿ ಏಳೆಂಟು ದಿನ ಅಲ್ಲೇ ತಮ್ಮಂತಹ ಜೊತೆಗಾರೊಂದಿಗೆ ಆಟ ತುಂಟಾಟ ಜೊತೆಗೆ ಖುಷಿ ಖುಷಿಯಾಗಿ ದಿನಕಳೆಯುತ್ತಾ ಮತ್ತೆ ಮನೆಗೆ ಹಿಂತಿರುವಾಗ ಬೇಸರದ ಸಪ್ಪೆಮುಖ ಎದ್ದುಕಾಣುತ್ತಿತ್ತು…!

*ಅಂತು ಇಂತು,* ಮೇ ಕೊನೆಯ ದಿನ ಕಳೆದು ಜೂನ್ ತಿಂಗಳ ಮೊದಲ ದಿನ ಉದಯಿಸುತ್ತಾಲೇ ಪ್ರೈಮರಿ ಹೈಸ್ಕೂಲ್ ನ ತರಗತಿಗಳು ಆರಂಭವಾಗುವುದು ಕಣ್ಣಮುಂದೆ ಹುಮ್ಮಸ್ಸಿನ ಭಾವನೆ ಎದ್ದಕಾಣುತ್ತಿತ್ತು..
ಬೆಳಿಗ್ಗೆ ಎಂದಿಗಿಂತಲೂ ಬೇಗನೇ ಎದ್ದು ವಾಶ್ ಮುಗಿಸಿ ಅಮ್ಮ ಮಾಡಿಟ್ಟ ಬಿಸಿಬಿಸಿ ಚಾ ತಿಂಡಿಗಳನ್ನು ಅಲ್ಪಸ್ವಲ್ಪ ಸೇವಿಸಿ ,ಹೆಣ್ಣು ಮಕ್ಕಳಿಗೆ ಆ ಕಡೆ ಈ ಕಡೆ ಜುಟ್ಟು ಗಳನ್ನು ಕಟ್ಟಿ ನೀಲಿ ಸಮವಸ್ತ್ರ ವನ್ನು ಹಾಕಿಕೊಂಡು ಕೈಯಲ್ಲಿ ಒಂದು ಬಣ್ಣದ ಕೊಡೆಯನ್ನು ತಿರುಗಿಸಿಕೊಂಡು ,ಅಪ್ಪ ಅಮ್ಮನನ್ನು ಪೀಡಿಸಿ ಹುಳಿಮಿಠಾಯಿಗಾಗಿ ಚಿಲ್ಲರೆ ದುಡ್ಡನ್ನು ಜೇಬಿನಲ್ಲಿ ಸೌಂಡ್ ಮಾಡುತ್ತಾ.., ಪಿರಿಪಿರಿ ಹನಿ ಮಳೆಗೆ ಒದ್ದೆಯಾಗಿ ಕುಣಿಯುತ್ತಾ ಕುಪ್ಪಳಿಸುತ್ತಾ..’ ಶಾಲೆಯ ಕಡೆಗೆ ಸಂತೋಷದ  ಹೆಜ್ಜೆ ಹಾಕುತ್ತಿದ್ದರು…!

*ಶಾಲೆಯಲ್ಲಿ,* ಹಳೆಯ ಹಾಗೂ ಹೊಸ ಸ್ನೇಹಿತರ ಪರಿಚಯ ,ಪರಸ್ಪರ ಖುಷಿ ಹಂಚಿಕೊಳ್ಳುತ್ತಾ ತರಗತಿಗೆ ಪ್ರವೇಶ ಮಾಡಿ ಬೂಸ್ಟು ಹಿಡಿದ ಬೆಂಚ್ ಡೆಸ್ಕ್ ಯನ್ನು ತಮ್ಮ ತಮ್ಮ ಪುಸ್ತಕದ ಹಾಳೆಯನ್ನು ಹರಿದು ಮನಾರ ಮಾಡುತ್ತಿದ್ದರು ….,

*ಶಿಕ್ಷಕರ ಪ್ರವೇಶ ವಾದಾಗ,* ತರಗತಿಗೆ ಶಿಕ್ಷಕರ ಒಳ ಪ್ರವೇಶವಾದಾಗ ಎಲ್ಲರೂ ಎದ್ದು ನಿಂತು ಎರಡೂ ಕೈಜೋಡಿಸಿ ಸಮಸ್ತೇ ಸಾರ್ (ಮೇಡಂ)ಅಂತ ಗೌರವ ಕೊಟ್ಟು ಗಟ್ಟಿ ಧ್ವನಿಯಿಂದ  ಹಂಚುಹಾರುವ ರೀತಿಯಲ್ಲಿ ಪ್ರೀತಿಯ ಶಿಕ್ಷಕರನ್ನು ಬರ ಮಾಡಿಕೊಳ್ಳುತ್ತಿದ್ದರು…

ಹಾಜರಾತಿ ಮತ್ತು ಆಟ -ಅಧ್ಯಾಪಕರು ವಿದ್ಯಾರ್ಥಿಗಳೊಡನೆ ರಜಾ ದಿನಗಳ ಮಜಗಳನ್ನು ಕೇಳುತ್ತಾ ಹರುಷದಿಂದ ಹಾಜರಾತಿ ಕರೆದು ಕಳೆದ ಸಲ ಬರಿಯಲು ಕೊಟ್ಟಿದ್ದ ಮಗ್ಗಿಯನ್ನು ಪ್ರತೀಯೊಬ್ಬರಲ್ಲಿ ಕೇಳುತ್ತಾ ನಂತರ ತರಗಳಿಂದ ಅವರ ಆಫೀಸ್ ಕಡೆಗೆ ಹೋಗುವರು …ಆ ಸಮಯಕ್ಕೆ ಕಾಯುತ್ತಿದ್ದ ವಿದ್ಯಾರ್ಥಿಗಳು ಮಿತ್ರರೆಲ್ಲೂ ಸೇರಿ ಒಳಗಡೆಯೇ ಆಟ ಆಡಿಕೊಂಡು ಗಲಾಟೆ ಮಾಡಿ ಆ ದಿನ ಮುಗಿಸಿ ಗಂಟೆ ಭಾರಿಸಿ ಅದೇ ಸಂತೋಷದಿಂದ ಮತ್ತೆ ಮನೆಗೆ ವಾಪಸ್ಸಾಗುವರು…;

ಕೊನೆಯದಾಗಿ ಭಾರತವು ಇತಿಹಾಸದ ಮಹಾನ್ ಸಮಸ್ಯೆಗಳಿಗೆ ಇತ್ತಿಚೆಗಷ್ಟೇ ತಾರ್ಕಿಕವಾದ ಅಂತ್ಯ ವನ್ನು ಹಾಡುತ್ತಿರುವಾಗ ಈ ಮಾರಿಯೂ ಒಕ್ಕರಿಸಿಕೊಂಡಿರುವುದು ಮನುಕುಲಕ್ಕೆ ಹೇಳತೀರದ ಬಹುದೊಡ್ಡ ನೋವಿನ ಜೊತೆ ಸಮಸ್ಯೆಯೇ ಸರಿ….
ಇನ್ನಾದರೂ ಈ ಮಾರಿಯಿಂದ ಆದಷ್ಟೂ ಬೇಗ ಮುಕ್ತಿ ಹೊಂದಿ ಪ್ರಮುಖವಾಗಿ ವಿದ್ಯಾರ್ಥಿಗಳ ಹೊಸ ಬಾಳನ್ನು ರೂಪಿಸುವಲ್ಲಿ ಯಶಸ್ವಿಯಾಗಲಿ ….
                  
✍️ ನೋಹಿತ್ ಗೌಡ ನಿಡ್ಯಮಲೆ

ನೋಹಿತ್ ಗೌಡ ನಿಡ್ಯಮಲೆ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!