ಅಜ್ಜಾವರ : ಅನಾರೋಗ್ಯದಿಂದ ಯುವಕ ಮೃತ್ಯು

ಯುವಕನೋರ್ವ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಸೆ.4 ರಂದು ವರದಿಯಾಗಿದೆ. ಅಜ್ಜಾವರ ಗ್ರಾಮದ ಇಸ್ಮಾಯಿಲ್ ಎಂಬುವವರ ಪುತ್ರ ಅಬ್ದುಲ್ ಖಾದರ್ ಮೃತಪಟ್ಟ ದುರ್ದೈವಿ. ಕೆಲ ದಿನಗಳಿಂದ ಅನಾರೋಗ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸೆ.4ರಂದು ಸುಮಾರು 3 ಗಂಟೆಗೆ ಕೊನೆಯುಸಿರೆಳೆದಿದ್ದಾರೆ ಮೃತನಾದ ಯುವಕನ ಮೃತದೇಹವು ರಾತ್ರಿಯ ವೇಳೆಗೆ ಮನೆಗೆ ತರಲಾಗುವುದು ಎಂದು ತಿಳಿದುಬಂದಿದೆ.

ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವುಗಳ ಸಹಯೋಗದಲ್ಲಿ ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರದ ಗ್ರಾಮವಾರು ಮಾಹಿತಿ ಈ ಕೆಳಗಿನಂತಿದೆ . ಸಾರ್ವಜನಿಕರು ತಮ್ಮ ಸಾಕು ನಾಯಿಗಳನ್ನು ಲಸಿಕೆ ನಡೆಯುವ ಸ್ಥಳಕ್ಕೆ ಕರೆತಂದು ಲಸಿಕೆ ಹಾಕಿಸಿಕೊಳ್ಳುವುದು. ಲಸಿಕಾ ಕೇಂದ್ರ ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಲಸಿಕೆ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ
Ad Widget

ಕುಕ್ಕುಜಡ್ಕ : ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಜಡ್ಕದಲ್ಲಿ ಅಮರ ಸಂಘಟನಾ ಸಮಿತಿ (ರಿ) ಸುಳ್ಯ ಇವರ ಆಶ್ರಯದಲ್ಲಿ ಕೆ .ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇವರ ಸಹಯೋಗದೊಂದಿಗೆ ಸೆ.3 ರಂದು ಉಚಿತ ವೈದ್ಯಕೀಯ ಶಿಬಿರ ನಡೆಯಿತು.ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ಹಿಂದಿನ ಕಾಲದ ಚಿಕಿತ್ಸೆಗೂ ಈಗಿನ ಕಾಲದ ಚಿಕಿತ್ಸೆಗೆ ಭಾರಿ...

ಸುಳ್ಯ : ಗಮನಾರ್ಹ ಸಾಧನೆ ಪರಿಗಣಿಸಿ ಯು.ಸಂ.ಮಂಡಳಿ ವತಿಯಿಂದ ಪ್ರಥಮ ಸ್ಥಾನ ಪಡೆದ ಶಾಸ್ತಾವು ಯುವಕ ಮಂಡಲ

2022-23 ನೇ ಸಾಲಿನಲ್ಲಿ ಗಮನಾರ್ಹ ಸಾಧನೆ ತೋರಿ ಯುವಕ ಮಂಡಲ ವಿಭಾಗದಲ್ಲಿ ಮರ್ಕಂಜ ಗ್ರಾಮದ ರೆಂಜಾಳದ ಶಾಸ್ತಾವು ಯುವಕ ಮಂಡಲ ಪ್ರಥಮ ಸ್ಥಾನ ಪಡೆದಿದೆ.ಯುವ ಸಂಯುಕ್ತ ಮಂಡಳಿ ಸುಳ್ಯ ಇದರ ವತಿಯಿಂದ ಕುಕ್ಕುಜಡ್ಕದ ಚೊಕ್ಕಾಡಿ ಪ್ರೌಢಶಾಲೆಯಲ್ಲಿ ನಡೆದ ಜಾನಪದ ಸಾಂಸ್ಕೃತಿಕ ವೈಭವ "ನಲಿಪು 2023" ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ...

ಮೇನಾಲ ಕಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಅನುದಾನಕ್ಕೆ ಮನವಿ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಜ್ಜಾವರ ಮೇನಾಲ ಶಾಲೆಗೆ ಹೆಚ್ಚುವರಿ ಕೊಣೆಗಳ ನಿರ್ಮಾನಕ್ಕೆ ಅನುದಾನ ಮತ್ತು ಶಾಲಾ ಆಸ್ತಿಯನ್ನು ಕಾಪಾಡುವ ದೃಷ್ಟಿಯಿಂದ ಶಾಲೆಗೆ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ಕೋರಿ ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಇವರಿಗೆ ಶಾಲೆಯ ಎಸ್‌ಡಿ ಎಂಸಿ ಅಧ್ಯಕ್ಷರಾದ ಶೌಕತ್ ಅಲಿ ಮೇನಾಲ ಮತ್ತು ವಿಷ್ಣು ಯುವಕ ಮಂಡಲ ಅಧ್ಯಕ್ಷರು ರಂಜಿತ್...

ಅನಾರೋಗ್ಯದಿಂದ ಬಳಲುತ್ತಿರುವ ಕೊಲ್ಲಮೊಗ್ರದ ಯುವಕನಿಗೆ ತುರ್ತು ಚಿಕಿತ್ಸೆಗೆ ಬೇಕಿದೆ ನೆರವು

ಕೊಲ್ಲಮೊಗ್ರ ಗ್ರಾಮದ ಶಿವಾಲ ಚಿನ್ನಪ್ಪ ಎಸ್‌.ಆರ್. ಅವರ ಪುತ್ರ ಕೊಲ್ಲಮೊಗ್ರದಲ್ಲಿ ಗ್ರಾಮ ಒನ್ ಕೇಂದ್ರ ನಡೆಸುತ್ತಿರುವ ಸಚಿತ್ ಶಿವಾಲ ಎಂಬವರು ಸುಮಾರು ಎರಡು ವರುಷಗಳಿಂದ IGA nephropathy ಎಂಬ chronic kidney disease ನಿಂದ ಬಳಲುತ್ತಿದ್ದು ಈಗಾಗಲೇ 2 ಕಿಡ್ನಿಗಳು ಸುಮಾರು 80% ಅಷ್ಟು ನಿಷ್ಕ್ರಿಯಗೊಂಡಿದ್ದು, ಕೋಯಿಕ್ಕೋಡ್ ಅಸ್ಟೆರ್ ಮಿಮ್ಸ್ ಆಸ್ಪತ್ರೆಯಲ್ಲಿ ಡಯಲೆಸಿಸ್ ಪಡೆಯುತ್ತಿದ್ದಾರೆ. ಅತೀ...

ಗುತ್ತಿಗಾರು : ನವೋದಯ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರವೇಶ ಪರೀಕ್ಷಾ ತರಬೇತಿ ಪ್ರಾರಂಭ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸುಳ್ಯ ತಾಲೂಕು ಪಂಚಾಯತ್, ಗುತ್ತಿಗಾರು ಗ್ರಾಮ ಪಂಚಾಯತ್, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಗುತ್ತಿಗಾರು, ಶ್ರೀ ದುರ್ಗಾ ಕಂಪ್ಯೂಟರ್ ತರಬೇತಿ ಕೇಂದ್ರ ಗುತ್ತಿಗಾರು ಇವುಗಳ ಆಶ್ರಯದಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಸೆ.03 ರಂದು ನವೋದಯ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರವೇಶ ಪರೀಕ್ಷಾ ತರಬೇತಿ ಪ್ರಾರಂಭಗೊಂಡಿತು. ಗ್ರಂಥಾಲಯ...

ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ‌ಪದಾಧಿಕಾರಿಗಳ ಆಯ್ಕೆ :
ಅಧ್ಯಕ್ಷರಾಗಿ ಸೋಮಶೇಖರ ಪೈಕ, ಕಾರ್ಯದರ್ಶಿಯಾಗಿ ಹರಿಶ್ಚಂದ್ರ ಕೇಪಳಕಜೆ, ಖಜಾಂಜಿಯಾಗಿ ಮಧು ಕಿರಣ್

ಸುಳ್ಯ : ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವಾರ್ಷಿಕ ಮಹಾಸಭೆ ಹಾಗೂ 2023- 2026 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಸೆ.2 ರಂದು ಸುಳ್ಯದ ಸಂಘದ ಕಛೇರಿಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಮಾಯಿಲಪ್ಪ ಸಂಕೇಶ, ನಿಕಟ ಪೂರ್ವ ಅಧ್ಯಕ್ಷ ಶ್ರೀಧರ ಕೆ.ಎಸ್ ಉಪಸ್ಥಿತರಿದ್ದರು. ನೂತನ ಅಧ್ಯಕ್ಷರಾಗಿ ಸೋಮಶೇಖರ್ ಪೈಕ...

ಸುಬ್ರಹ್ಮಣ್ಯ: ಸರ ಕಳ್ಳತನ- ದೂರು ದಾಖಲು

ಸುಬ್ರಹ್ಮಣ್ಯ : ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದು ವಾಪಾಸ್ ಬಸ್ ಹತ್ತುವ ವೇಳೆ ಕೊಡಗು ಜಿಲ್ಲೆಯ ಯಾತ್ರಾರ್ಥಿಯೊಬ್ಬರ ಕರಿಮಣಿ ಸರ ಕಳ್ಳತನವಾದ ಬಗ್ಗೆ ವರದಿಯಾಗಿದೆ. ಕೊಡಗು ಜಿಲ್ಲೆಯ ಸೋಮವಾರ ಸಂತೆ ನಿವಾಸಿಯಾದ ಶ್ರೀಮತಿ ಲೀಲಾ (55) ಎಂಬವರು ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸರಿಗೆ ನೀಡಿದ್ದು, ಸೆ.3ರಂದು ಬೆಳಿಗ್ಗೆ ಊರಿನ ಇತರರೊಂದಿಗೆ ಕುಕ್ಕೇ ಶ್ರೀ ಸುಬ್ರಹ್ಮಣ್ಯ...

ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಗೆ ಕರ್ನಾಟಕ ಎಜ್ಯುಕೇಶನಲ್ ಅವಾರ್ಡ್-2023

ಕರ್ನಾಟಕ ಎಜ್ಯುಕೇಶನಲ್ ಅವಾರ್ಡ್ ಕೊಡಲಾಗುವ ಬೆಸ್ಟ್ ಕಾಂಪಿಟೇಟಿವ್ ಕೋಚಿಂಗ್ ಇನ್ಸ್ಟಿಟ್ಯೂಟ್ ಪ್ರಶಸ್ತಿಯನ್ನು ಬೆಂಗಳೂರಿನ ನಿಮಾನ್ಸ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಪ್ರಫುಲ್ಲ ಗಣೇಶ್ ಅವರಿಗೆ ನೀಡಿ ಗೌರವಿಸಲಾಯಿತು.2010ರಲ್ಲಿ ಸ್ಥಾಪನೆಗೊಂಡು ಪುತ್ತೂರು ಮತ್ತು ಸುಳ್ಯದಲ್ಲಿ ಕಾರ್ಯಾಚರಿಸುತ್ತಿರುವ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಣ ಸಂಸ್ಥೆಯಾಗಿರುವ ಐ.ಆರ್.ಸಿ.ಎಂ.ಡಿ ಕಂಪ್ಯೂಟರ್ ಮತ್ತು...
Loading posts...

All posts loaded

No more posts

error: Content is protected !!