- Tuesday
- July 7th, 2026
ಅವೈಜ್ಞಾನಿಕ ಕಾಮಗಾರಿಗಳು ಪಶ್ಚಿಮ ಘಟ್ಟಗಳಿಗೆ ಇಂದು ಅಪಾರ ಹಾನಿ ತಂದಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಕಾಡಿನ ನಾಶ ಮುಂದಿನ ದಿನಗಳ ಭೀಕರತೆಯನ್ನು ಈಗಲೇ ಸಾರುತ್ತಿದೆ. ಉಳಿದಿರುವ ಕಾಡುಗಳನ್ನಾದರೂ ಉಳಿಸುವ ನಿರ್ಧಾರ ನಾವು ಮಾಡದಿದ್ದರೆ ಪ್ರಪಂಚ ನಾಶವಾಗುವ ದಿನ ದೂರವಿಲ್ಲ. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಅಗತ್ಯದ ಬಗ್ಗೆ ಚಿಂತಿಸಬೇಕು ಎಂದು ಖ್ಯಾತ ಪರಿಸರವಾದಿ ದಿನೇಶ್ ಹೊಳ್ಳ ಹೇಳಿದರು....
ಆಟಿ ಅಮಾವಾಸ್ಯೆ ಪ್ರಯುಕ್ತ ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಾಳೆ ಜು.24 ರಂದು ಮುಂಜಾನೆ ಶ್ರೀ ದೇವರಿಗೆ ಪೂಜೆ ನಡೆದ ಬಳಿಕ ಮುಂಜಾನೆ ಗಂಟೆ 8 ರಿಂದ ಭಕ್ತರಿಗೆ ವಿಶೇಷ ತೀರ್ಥವಾಗಿ ಹಾಲೆ ಮರದ ಕಷಾಯ ವಿತರಣೆ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರ ಸಂಘದ ಸುಬ್ರಹ್ಮಣ್ಯ ಘಟಕದ ವತಿಯಿಂದ ಭಾರತೀಯ ಮಜ್ದೂರ್ ಸಂಘದ ಸಂಸ್ಥಾಪನಾ ದಿನಾಚರಣೆಯು ಇಂದು ನಡೆಯಿತು.ಭಾರತಾಂಬೆಯ ಭಾವಚಿತ್ರಕ್ಕೆ ಫಲಪುಷ್ಪ ಅರ್ಪಿಸಲಾಯಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸುಬ್ಬಪ್ಪ ಕುಲ್ಕುಂದ, ಗೌರವಾಧ್ಯಕ್ಷರಾದ ಗಿರಿಧರ ಹೊಸೊಳಿಕೆ, ಕಾರ್ಯದರ್ಶಿ ಅಜಿತ್ ಕಲ್ಲಾಜೆ, ಸಂಘಟನಾ ಕಾರ್ಯದರ್ಶಿ ದಿವಾಕರ ಪರ್ವತಮುಖಿ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಪ್ರಾಂತದ ಪೂರ್ಣಾವಧಿ ಕಾರ್ಯಕರ್ತರಾಗಿ ಮೈಸೂರು ಮಹಾನಗರ ಸಂಘಟನಾ ಕಾರ್ಯದರ್ಶಿಯಾಗಿ ಮಂದಾರ ಬಾಳುಗೋಡು ಆಯ್ಕೆಯಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾಕುಪ್ರಾಣಿಗಳನ್ನು ರಸ್ತೆ ಬದಿಯಲ್ಲಿ ತಂದು ಬಿಡುವ ಪ್ರಕರಣಗಳು ಹೆಚ್ಚುತ್ತಲೇ ಹೋಗುತ್ತಿವೆ. ಈಗೀಗ ನಮಗೆ ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ನಾಯಿಗಳು, ಬೆಕ್ಕುಗಳು, ಚಿಕ್ಕಚಿಕ್ಕ ಮರಿಗಳು ಹಾಗೂ ಕೆಲವೊಮ್ಮೆ ದನ-ಕರುಗಳು ಕೂಡ ಕಾಣಸಿಗುತ್ತವೆ. ಅದರಲ್ಲಿ ಕೆಲವು ದನ-ಕರುಗಳು ಮೇಯಲು ಬಿಟ್ಟಿದ್ದೂ ಇರಬಹುದು, ಹಾಗೆಂದು ಎಲ್ಲಾ ದನ-ಕರುಗಳನ್ನು ಮೇಯಲು ಬಿಟ್ಟಿದ್ದು ಎಂದು ಹೇಳಲಾಗುವುದಿಲ್ಲ...ಈ ನಾಯಿ, ಬೆಕ್ಕು, ದನ-ಕರುಗಳನ್ನು...
ಹಿರಿಯರ ಪರಿಶ್ರಮ ತ್ಯಾಗ ಬಲಿದಾನದಿಂದ ಭಾರತೀಯ ಜನತಾ ಪಾರ್ಟಿ ಇಂದು ಈ ಮಟ್ಟಕ್ಕೆ ಬೆಳೆದಿದೆ. ಹಿರಿಯರು ಕಟ್ಟಿ ಬೆಳೆಸಿದ ಈ ಪಕ್ಷವನ್ನು ನಿರಂತರ ಕಾರ್ಯ ಚಟುವಟಿಕೆಯಿಂದ ಮುನ್ನಡೆಸೋಣ. ಹುದ್ದೆ ಯಾವತ್ತು ಶಾಶ್ವತವಲ್ಲ ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ದುಡಿಯೋಣ. ಹಿರಿಯರು ಆಚರಿಸುತಿದ್ದ ಆಚರಣೆಗಳನ್ನು ಉಳಿಸುವ ಕಾರ್ಯದಲ್ಲಿ ತೊಡಗಿಕೊಳ್ಳೋಣ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಭಾರತೀಯ ಜನತಾ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು ಇದರ ವತಿಯಿಂದ ಪರಿಸರ ಜಾಗೃತಿ ಕಾಯ೯ಕ್ರಮ ಅಂಗವಾಗಿ ಸ. ಹಿ ಪ್ರಾ ಶಾಲೆ ವಳಲಂಬೆ ಇಲ್ಲಿ ಪರಿಸರ ಜಾಗೃತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶಾಲೆಯ ಎಲ್ಲಾ ತರಗತಿವಾರು ವಿದ್ಯಾರ್ಥಿಗಳಿಗೆ ಪರಿಸರಕ್ಕೆ ಸಂಬಂಧಪಟ್ಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಿದರು.ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ...
ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ ಬಿ ಎಂ ಎಸ್ ಸಂಯೋಜಿತ ಇದರ ವತಿಯಿಂದ ಭಾರತೀಯ ಮಜ್ದೂರ್ ಸಂಘದ ಸಂಸ್ಥಾಪನ ದಿನಾಚರಣೆಯು ಸಂಘದ ಕಛೇರಿ ತಿಲಕ ಭವನ ಹಳೆಗೆಟು ಇಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಪ್ರಕಾಶ್ ಎಂ ಎಸ್ ದೀಪಬೆಳಗಿಸಿ ಉದ್ಘಾಟಿಸಿದರು. ಪಿ ಗೋಪಾಲ ಕೃಷ್ಣ ಭಟ್ ಬಿಎಂಸ್ ನ ಧ್ವಜಾರೋಹಣಗೈದರು. ಮುಖ್ಯ ಅಭ್ಯಾಗತರಾಗಿ...
ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಮೇರಾ ಯುವ ಭಾರತ್ ಮೈ ಭಾರತ್ ದಕ್ಷಿಣ ಕನ್ನಡ ಮಂಗಳೂರು ಮತ್ತು ಮಾನಸ ಮಹಿಳಾ ಮಂಡಲ (ರಿ )ಜಟ್ಟಿಪಳ್ಳ ಇವುಗಳ ಜಂಟಿ ಆಶ್ರಯ ದಲ್ಲಿ ಏಕ್ ಪೇಡ್ ಮಾ ಕೆ ನಾಮ್ ಅಭಿಯಾನ 2025-26 ಕಾರ್ಯಕ್ರಮ ಜಟ್ಟಿಪಳ್ಳದ ಯುವಸದನದ ವಠಾರ ದಲ್ಲಿ ನಡೆಯಿತು. ಮಹಿಳಾ ಮಂಡಲದ...
Loading posts...
All posts loaded
No more posts
