- Saturday
- May 9th, 2026
ಸುಬ್ರಹ್ಮಣ್ಯ ಜೂನ್ 6: ಸುಬ್ರಹ್ಮಣ್ಯದ ದೋಣಿಮಕ್ಕಿಯಲ್ಲಿ ಇತ್ತೀಚೆಗೆ ನಡೆದ ಎಣ್ಣೆಮಜಲ್ ಪಟೇಲ್ ಪುಟ್ಟಣ್ಣ ಗೌಡ ವಿಶಾಲಾಕ್ಷಿ ದಂಪತಿಯ ವಿವಾಹ ಸುವರ್ಣ ಸಂಭ್ರಮದಲ್ಲಿ ಕಾಯಕರತ್ನ ಪ್ರಶಸ್ತಿ ಪಡೆದ ಡಾ. ರವಿ ಕಕ್ಕೆಪದವು, ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾದ ಭರತ್ ನೆಕ್ರಾಜೆ ಅವರುಗಳನ್ನ ಸುವರ್ಣ ವೇದಿಕೆಯಲ್ಲಿ ಗೌರವಿಸಲಾಯಿತು. ಪಟೇಲ್ ಪುಟ್ಟಣ್ಣಗೌಡರು ಶಾಲುಹೊದಿಸಿ...
ಅರಣ್ಯ ಇಲಾಖೆ ಮಂಗಳೂರು ವಿಭಾಗ, ಸುಬ್ರಹ್ಮಣ್ಯ ಉಪವಿಭಾಗ, ಪಂಜ ವಲಯ, ಬಳ್ಪ ಶಾಖೆ ಏನೆಕಲ್ಲು ಗ್ರಾಮದ ಕಲ್ಲಾಜೆ ದೇವರಹಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ.06 ರಂದು ವನಮಹೋತ್ಸವ ಆಚರಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಜಾತ, ಬಳ್ಪ ಶಾಖೆ ಉಪ ವಲಯ ಅರಣ್ಯಾಧಿಕಾರಿ ಮಹಮ್ಮದ್ ಮೆಹೆಬೂಬೆಇಲಾ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಾಣಿ, ಶಾಲಾಭಿವೃದ್ಧಿ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸುಳ್ಯ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾಲೂಕು ವತಿಯಿಂದ"ವಿಶ್ವ ತಂಬಾಕು ವಿರೋಧಿ ದಿನಾಚರಣೆ" ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಸುಳ್ಯ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀಯುತ ಲೋಕನಾಥ್ ಅಮೆಚೂರ್ ರವರು ದೀಪ ಪ್ರಜ್ವಲಿಸಿ ಮಾತನಾಡಿದರು. ಇಂದು ಪ್ರಜ್ವಲಿಸಿದ...
ವಿದ್ಯಾಬೋಧಿನೀ ವಿದ್ಯಾಸಂಸ್ಥೆಯಲ್ಲಿ ಜೂ.5 ಗುರುವಾರದಂದು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಶಾಲಾ ತೋಟದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಿದರು. ಬಳಿಕ ವಿದ್ಯಾಬೋಧಿನೀ ಪ್ರೌಢಶಾಲಾ ಸಭಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ರಾಮನ್ ಇಕೋ ಕ್ಲಬ್ ನ ವಾರ್ಷಿಕ ಚಟುವಟಿಕೆಗಳಿಗೆ ಚಾಲನೆಯ ಕಾರ್ಯಕ್ರಮ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿ...
ಜಾನುವಾರುಗಳ ಅಕ್ರಮ ಸಾಗಾಟ, ಶೇಖರಣೆ ಮತ್ತು ಹತ್ಯೆಯನ್ನು ತಡೆಯುವಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ಕಾರ್ಯಕರ್ತರು ಸುಳ್ಯ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಮುಖರಾದ ಸೋಮಶೇಖರ್ ಪೈಕ, ನವೀನ್ ಎಲಿಮಲೆ, ಹರಿಪ್ರಸಾದ್ ಎಲಿಮಲೆ, ಭಾನುಪ್ರಕಾಶ್ ಪೆರುಮುಂಡ, ಉಪೇಂದ್ರ ನಾಯಕ್, ವರ್ಷಿತ್ ಚೊಕ್ಕಾಡಿ, ಅಭಿಜಿತ್ ಸುಳ್ಯ, ಕಿರಣ್...
ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಖ್ಯಾತ ಪರಿಸರ ತಜ್ಞ, ಪರಿಸರ ಪ್ರೇಮಿ ,ಪ್ರಸ್ತುತ ವೈಲ್ಡ್ ಲೈಫ್ ಕ್ರೈಂ ಕಂಸರ್ವೇಶನ್ ನ ಸದಸ್ಯರಾದ ಭುವನೇಶ್ ಕೈಕಂಬ ಆಗಮಿಸಿ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಕೂಡ ಆಗಮಿಸಿದ್ದರು. ಇಬ್ಬರನ್ನು ಕೂಡ ಶಾಲವತಿಯಿಂದ ಸನ್ಮಾನಿಸಲಾಯಿತು...
✍️ ಕಿಶನ್ ಎಂ. ಪೆರುವಾಜೆ ಪ್ರತಿದಿನವೂ ಪರಿಸರ ದಿನಾಚರಣೆ ಮಾಡುವಂತಹ ಕಾಯಕ ನಮ್ಮಿಂದಾಗಬೇಕಿದೆ. ಪ್ರಸ್ತುತ ಸನ್ನಿವೇಶದಲ್ಲಿ ಶುದ್ಧ ಪರಿಸರದ ಮಹತ್ವದ ಅರಿವು ಜನತೆಗೆ ನೀಡಬೇಕಾಗಿದೆ. ಇಂದಿನ ಪರಿಸರದ ವ್ಯವಸ್ಥೆ ಬಿಗಡಾಯಿಸಿದೆ. ಅಭಿವೃದ್ಧಿಯ ನೆಪದಲ್ಲಿ ದಿನೇ ದಿನೇ ಪರಿಸರ ನಾಶವಾಗುತ್ತಿದ್ದು ಇದರಿಂದ ಪರಿಸರದಲ್ಲಿ ಅಸಮತೋಲನುಂಟಾಗಿ ಅತಿವೃಷ್ಟಿ, ಅನಾವೃಷ್ಟಿಗಳು ಎದುರಾಗಿರುವುದನ್ನು ಕಾಣಬಹುದಾಗಿದೆ. ಇಂದು ಪ್ರಗತಿ ಎಷ್ಟೇ ಮುಂಚೂಣಿಯಲ್ಲಿದ್ದರೂ ಕೂಡ...
2025-26ನೇ ಸಾಲಿನ ಪ್ರಾಂತ್ಯ 8ರ ವಲಯ 1ರ ವಲಯಾಧ್ಯಕ್ಷರಾಗಿ ದಿಲೀಪ್ ಬಾಬ್ಲುಬೆಟ್ಟು ಆಯ್ಕೆಯಾಗಿದ್ದಾರೆ ಜಿಲ್ಲೆಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಪಂಜ ಲಯನ್ಸ್ ಸಂಸ್ಥೆಯ ಅತ್ಯಂತ ಕ್ರಿಯಾಶೀಲ ಸದಸ್ಯ,ಪೂರ್ವಾಧ್ಯಕ್ಷ,ನ್ಯಾಯವಾದಿ ದಿಲೀಪ್ ಬಾಬ್ಲುಬೆಟ್ಟು ಇವರನ್ನು ಜಿಲ್ಲಾ ರಾಜ್ಯಪಾಲರಾದ ಕುಡ್ಲಿ ಅರವಿಂದ ಶೆಣೈ ಇವರು ಪ್ರಾಂತ್ಯ 8ರ ವಲಯ 1ರ ವಲಯ ಅಧ್ಯಕ್ಷರಾಗಿ ಮುಂದಿನ ಲಯಸ್ಟಿಕ್ ವರ್ಷಕ್ಕೆ ನಿಯುಕ್ತಿಗೊಳಿಸಿರುತ್ತಾರೆ. ಈಗಾಗಲೇ ಮಂಗಳೂರ...
ಸಚಿನ್ ಕ್ರೀಡಾ ಸಂಘ ಹರಿಹರ ಪಳ್ಳತ್ತಡ್ಕ ಇವರ ವತಿಯಿಂದ ಜೂ.04 ರಂದು ಹರಿಹರ ಪಳ್ಳತ್ತಡ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಪೆನ್-ಪೆನ್ಸಿಲ್ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಕ್ರೀಡಾ ಸಂಘದ ಅಧ್ಯಕ್ಷರಾದ ಜಗದೀಶ್ ವಾಡ್ಯಪ್ಪನಮನೆ, ಕಾರ್ಯದರ್ಶಿ ದೀಕ್ಷಿತ್ ದೊಡ್ಡಕಜೆ, ಸದಸ್ಯರಾದ ದಯಾನಂದ ಪರಮಲೆ, ಮನೀಶ್ ಗುಂಡಿಹಿತ್ಲು, ಹರ್ಷಿತ್, ಶಾಲಾ ಮುಖ್ಯಶಿಕ್ಷಕರಾದ ದೇವಕಿ...
ಸುಬ್ರಹ್ಮಣ್ಯ ಜೂನ್ 3: ಕರ್ನಾಟಕ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಕಾರ್ಯದರ್ಶಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಶ್ರೀಮತಿ ತುಳಸಿ ಮದ್ದಿನೇನಿ ಮಂಗಳವಾರ ಸುಬ್ರಮಣ್ಯದ ಬಿ ಸಿ ಎಂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವರು.ಮಂಗಳವಾರ ಬೆಳಿಗ್ಗೆ ಬೆಂಗಳೂರಿಂದ ಸುಬ್ರಹ್ಮಣ್ಯ ರೋಡ್ ನೆಟ್ಟಣ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ...
Loading posts...
All posts loaded
No more posts
