- Friday
- July 3rd, 2026
ಮಂಡೆಕೋಲು ಗ್ರಾಮದ ಮುರೂರು - ದೇವರಗುಂಡ ದ್ವಾರಕಾನಗರದ ಶ್ರೀಕೃಷ್ಣ ಭಜನಾ ಮಂದಿರದ ಆಡಳಿತ ಮಂಡಳಿ ಪದಾಧಿಕಾರಿಗಳ ಆಯ್ಕೆ ಸೆ. 14ರಂದು ನಡೆಯಿತು. ಅಧ್ಯಕ್ಷರಾಗಿ ಮುಕುಂದ ದೇವರಗುಂಡ, ಉಪಾಧ್ಯಕ್ಷರಾಗಿ ವಿಶ್ವನಾಥ ಮುರೂರು, ಕಾರ್ಯದರ್ಶಿ ಯಾಗಿ ನವೀನ್ ಮುರೂರು, ಖಜಾಂಜಿ ನವೀನ್ ಡಿ ಆರ್, ಜೊತೆ ಕಾರ್ಯದರ್ಶಿ ಯಾಗಿ ಶಿವಪ್ರಸಾದ್ ಕೊಳಂಬೆ, ಸದಸ್ಯರುಗಳಾಗಿ ಶ್ರವಣ್, ಗೋಪಿನಾಥ್ ನಾಯರ್, ಹರ್ಷಲ್...
ಅಂಬೇಡ್ಕರ್ ರಕ್ಷಣಾ ವೇದಿಕೆ ಅರಂತೋಡು ಘಟಕದ ವತಿಯಿಂದ ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಕು. ಸುಶ್ಮಿತಾ ಬೆದ್ರುಪಣೆ ಅವರಿಗೆ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. ಅರಂತೋಡು ಘಟಕದ ಅಧ್ಯಕ್ಷರಾದ ನವೀನ ಕಲ್ಲುಗುಡ್ಡೆ ಶಾಲು ಹೊದಿಸಿ ಹಣ್ಣು ಹಂಪಲು ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಸದಸ್ಯರು, ವೇದಿಕೆಯ ಪ್ರ.ಕಾರ್ಯದರ್ಶಿ. ತಾ.ಕಾರ್ಯದರ್ಶಿ, ತಾಲೂಕು ಮಾಜಿ ಕಾರ್ಯದರ್ಶಿಯವರು ಉಪಸ್ಥಿತರಿದ್ದರು....
ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.14 ರಂದು ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಹೆಚ್.ಎಲ್ ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಕಾಶ್.ಕೆ.ಎಸ್ ರವರು ವಾರ್ಷಿಕ ವರದಿ ವಾಚಿಸುತ್ತಾ “ಸಂಘವು ವಾರ್ಷಿಕ 118 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದು, 40,02,524 ರೂಪಾಯಿ...
ಫ್ರೆಂಡ್ಸ್ ಸಮಾಹಾದಿ ಮುರುಳ್ಯ ಇದರ ಆಶ್ರಯದಲ್ಲಿ ಸೆ.21ರಂದು ನಡೆಯುವ ವಾಲಿಬಾಲ್ ಪಂದ್ಯಾಟದ ಆಮಂತ್ರಣ ಪತ್ರಿಕೆಯನ್ನು ಸುಳ್ಯ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಅವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಫ್ರೆಂಡ್ಸ್ ಸಮಾಹಾದಿ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕರ್ನಾಟಕ ಭಾವೈಕ್ಯ ಪರಿಷತ್ ಹಾಗೂ ಭಾರತೀಯ ಮಾದಕ ದ್ರವ್ಯ ವಿರೋಧಿ ಮಂಡಳಿ ಜೊತೆಯಾಗಿ ಸೆ-14 ರಂದು ಮಂಗಳೂರಿನ ದೇರಳಕಟ್ಟೆಯ ನವಾಝ್ ಬಿಲ್ಡಿಂಗ್ನ ಸಭಾಂಗಣದಲ್ಲಿ ಆಯೋಜಿಸಿದ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ಅರ್ಥಗರ್ಭಿತ ಮೂರು ಚುಟುಕುಗಳನ್ನು ವಾಚಿಸಿದ ಖ್ಯಾತ ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರಿಗೆ ಭಾವೈಕ್ಯತಾ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಗಣ್ಯ ಅತಿಥಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೈಸೂರಿನ ಚಿನ್ನು ಪಿಚ್ಚರ್ಸ್ ಪ್ರೊಡಕ್ಷನ್ ಹೌಸ್ ತಂಡದಿಂದ ಮಂಡೆಕೋಲು ಗ್ರಾಮ ಪಂಚಾಯತ್ ನ ಗ್ರಂಥಾಲಯದ ಯಕ್ಷಗಾನ ತಂಡದ ಎಲ್ಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು. ಈ ತಂಡದ ಸದಸ್ಯರಾದ ಪ್ರೋಪಸರ್ ಪುರುಷೋತ್ತಮ್ ಅಗ್ನಿ, ಚಿನ್ನೂ ಪಿಚ್ಚರ್ಸ್ ತಂಡದ ನಿರ್ದೇಶಕರಾದ ರಾಘುನಾಯಕ್ , ತಂಡದ ಸದಸ್ಯರಾದ ಶ್ರೀವತ್ಸಾ, ಡಾ ಸ್ವಾತಿ, ಡಾ ತನ್ಮಯಿಯವರು ಮಕ್ಕಳಿಗೆ ಸಮವಸ್ತ್ರ ವಿತರಿಸಿದರು. ತಂಡದ...
2024-25 ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 100 ಪ್ರತಿಶತ ಫಲಿತಾಂಶ ಪಡೆದ ಸುಳ್ಯ ರೋಟರಿ ಸಂಸ್ಥೆಯ ಪ್ರಾಂಶುಪಾಲರನ್ನು ಮತ್ತು ಉಪನ್ಯಾಸಕರನ್ನು ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ(ರಿ.) ಮಂಗಳೂರು ವತಿಯಿಂದ ಸೆಪ್ಟೆಂಬರ್ 14 ರಂದು ಎಕ್ಸೆಲೆಂಟ್ ಪ.ಪೂ ಕಾಲೇಜು ಮೂಡುಬಿದಿರೆ ಇಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರನ್ನು ತಮ್ಮ ಶ್ರೇಷ್ಠ ಸಾಧನೆ...
ಹಳ್ಳಿ ಪ್ರದೇಶಗಳಲ್ಲಿ ಅಪ್ಪಟ ಹಳ್ಳಿ ಪ್ರದೇಶದ ಮಕ್ಕಳಿಗೆ ಯಾವುದೇ ಖಾಸಗಿ ವಿದ್ಯಾಸಂಸ್ಥೆಗಳಿಗೆ ಕಡಿಮೆ ಇಲ್ಲದ ರೀತಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಾ ಕ್ರೀಡಾ ಕ್ಷೇತ್ರದಲ್ಲಿ ಕೂಡ ಸಾಧನೆ ತೊರೆಯುತ್ತಿರುವ ಸರಕಾರಿ ಕಾಲೇಜು ಗುತ್ತಿಗಾರಿನ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಶಿಕ್ಷಣ ಸಂಸ್ಥೆಯು 2024-25ನೇ ಶೈಕ್ಷಣಿಕ ಸಾಲಿಗೆ ದ್ವಿತೀಯ ಪಿಯುಸಿ ಪರೀಕ್ಷೆಯ ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ...
ಶ್ರೀ ಚಾಮುಂಡಿ ನವೋದಯ ಸ್ವ ಸಹಾಯ ಸಂಘ ಅಡ್ತಲೆ, ಕಾಯರ ಮರ್ಕಂಜ ಇವರ ವತಿಯಿಂದ ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಕು.ಸುಶ್ಮಿತಾ ಎಂ.ಎ ಬೆದ್ರುಪಣೆಯವರಿಗೆ ಸನ್ಮಾನ ಕಾರ್ಯಕ್ರಮ ಸೆ. 12 ರಂದು ಬಾಲಚಂದ್ರ ಕೊಡಪಾಲ ಅಡ್ತಲೆ ಇವರ ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀಮತಿ ಬೇಬಿ ಕೆ. ಕಾರ್ಯದರ್ಶಿ ಶ್ರೀಮತಿ ಸವಿತಾ...
“ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಪಡೆದ ಕೊಲ್ಲಮೊಗ್ರದ ಬೆಂಡೋಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಲಲಿತಾ ಕುಮಾರಿ ಅವರಿಗೆ ಇಂದು(ಸೆ.14) ಕೊಲ್ಲಮೊಗ್ರದ ಮಯೂರ ಕಲಾಮಂದಿರದಲ್ಲಿ ನಡೆದ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಡಾ. ಸೋಮಶೇಖರ್ ಕಟ್ಟೆಮನೆ,...
Loading posts...
All posts loaded
No more posts
