ಕಾಣೆಯಾಗಿದ್ದಾರೆ : ಯಶವಂತ.ಕೆ.   ಸದ್ರಿ ವ್ಯಕ್ತಿ ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಪ್ರಕಟಣೆ ಹೊರಡಿಸಿದ ಸುಬ್ರಹ್ಮಣ್ಯ ಪೋಲಿಸ್ ಠಾಣೆ

ಸುಳ್ಯ ತಾಲೂಕು ಕಲ್ಮಕಾರು ಗ್ರಾಮದ ಕಾಜಿಮಡ್ಕ ಲಿಂಗಪ್ಪ ಗೌಡ ರವರ ಪುತ್ರ ಯಶವಂತ.ಕೆ(50 ವರ್ಷ) ಎಂಬುವವರು ಜುಲೈ 14 ರಂದು ಐನೆಕಿದು ಗ್ರಾಮದ ಪಾದೆಮೂಲೆಯಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ನಾಪತ್ತೆಯಾಗಿದ್ದು, ಸದ್ರಿ ವ್ಯಕ್ತಿ ಕಂಡುಬಂದಲ್ಲಿ ಸುಬ್ರಹ್ಮಣ್ಯ ಪೋಲಿಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರೈಟ್ ಟು ಲಿವ್ ಕೋಟೆ ಫೌಂಡೇಷನ್ ವತಿಯಿಂದ ಉಚಿತ ಕಂಪ್ಯೂಟರ್ ತರಬೇತಿ

ಕೋಟೆ ಫೌಂಡೇಷನ್ ವತಿಯಿಂದ ಸುಳ್ಯದ ಯುವಕ, ಯುವತಿಯರು, ಗೃಹಿಣಿಯರು ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ಪಡೆಯಲು ಸುವರ್ಣ ಅವಕಾಶ ಒದಗಿಸಿದೆ. ಸುಳ್ಯದ ಜೂನಿಯ‌ರ್ ಕಾಲೇಜ್ ರಸ್ತೆಯ ಜೇನು ಸೊಸೈಟಿ ಹಿಂಭಾಗದಲ್ಲಿರುವ ಸಾಂದೀಪ್ ಶಾಲೆಯಲ್ಲಿ ರೈಟ್ ಟು ಲಿವ್ (ಕೋಟೆ ಫೌಂಡೇಷನ್‌), ಎಂ. ಬಿ ಫೌಂಡೇಷನ್ ಸಹಯೋಗದೊಂದಿಗೆ ಉದ್ಯೋಗ ಆಧಾರಿತ ಉಚಿತ ಕಂಪ್ಯೂಟರ್ ಮತ್ತು ಜೀವನ...
Ad Widget

ಸುಳ್ಯದ ಖ್ಯಾತ ಸಾಹಿತಿ ಶ್ರೀ ಪ್ರಭಾಕರ ಶಿಶಿಲ ಅವರು “ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ” ಗೆ ಆಯ್ಕೆ

ಖ್ಯಾತ ಕಾದಂಬರಿಕಾರ, ಹಿರಿಯ ಸಾಹಿತಿಗಳಾದ ಶ್ರೀ ಪ್ರಭಾಕರ ಶಿಶಿಲ ಅವರು ಹಲವಾರು ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಅಪಾರ ಸಾಧನೆಗಾಗಿ "ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ" ಗೆ ಆಯ್ಕೆಯಾಗಿದ್ದಾರೆ. ಆ.03 ರಂದು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಜರುಗಲಿರುವ ಚಂದನ ಸಾಹಿತ್ಯ ಸಂಗೀತ ಸಂಭ್ರಮೋತ್ಸವದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಖ್ಯಾತ ನಿವೃತ್ತ ತಾಂತ್ರಿಕ ಕೃಷಿ ಅಧಿಕಾರಿಗಳಾದ...

ಪ್ರಣೀತ್ ಎಂ ಬಿ ಹಾಗೂ ಪ್ರಾಂಜಲಿ ಮಾಲಕತ್ವದ ಮಂಗಳೂರಿನ “ಸೆರೀನೊ ಜಿಲಾಟೋ” ಗೆ ಬೆಸ್ಟ್ ನ್ಯೂಕಮರ್ – ಐಸ್ ಕ್ರೀಂ ಪಾರ್ಲರ್ ಪ್ರಶಸ್ತಿ

ದೆಹಲಿಯಲ್ಲಿ ನಡೆದ ಪ್ರತಿಷ್ಠಿತ Food connoisseurs India Awards ನಲ್ಲಿ ಸುಳ್ಯ ಮೂಲದ ಪ್ರಣೀತ್ ಎಂ.ಬಿ. ಹಾಗೂ ಪ್ರಾಂಜಲಿ ಪ್ರಣೀತ್ ಮಾಲಕತ್ವದ ಮಂಗಳೂರಿನ ಸೆರೀನೊ ಜಿಲಾಟೋ (Sereno Gelato) ಬೆಸ್ಟ್ ನ್ಯೂಕಮರ್ - ಐಸ್ ಕ್ರೀಂ ಪಾರ್ಲರ್ ರಾಷ್ಟ್ರ ಪ್ರಶಸ್ತಿ 2025ನ್ನು ಮುಡಿಗೇರಿಸಿಕೊಂಡಿದೆ. ಇವರು ಸುಳ್ಯದ ಪ್ರತಿಷ್ಟಿತ ನೆಹರೂ ಮೆಮೊರಿಯಲ್ ಕಾಲೇಜು ಇದರ ನಿವೃತ್ತ ಪ್ರಾಂಶುಪಾಲ...

ಸುಳ್ಯ : ಸಂಗೀತಗಾರ್ತಿ ಸವಿತಾ ಕೋಡಂದೂರು ಅವರು “ಚಂದನ ಸ್ವರ ಸಂಗೀತ ಪ್ರಶಸ್ತಿ”ಗೆ ಆಯ್ಕೆ

ವಿಶಿಷ್ಟ ಕಂಠದ ಸಂಗೀತಗಾರ್ತಿ ಸವಿತಾ ಕೋಡಂದೂರು ಅವರು ಹಲವಾರು ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಅಪಾರ ಸಾಧನೆಗಾಗಿ "ಚಂದನ ಸ್ವರ ಸಂಗೀತ ಪ್ರಶಸ್ತಿ" ಗೆ ಆಯ್ಕೆಯಾಗಿದ್ದಾರೆ. ಆ.03 ರಂದು  ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಜರುಗಲಿರುವ ಚಂದನ ಸಾಹಿತ್ಯ ಸಂಗೀತ ಸಂಭ್ರಮೋತ್ಸವದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಖ್ಯಾತ ಸಾಹಿತಿಗಳಾದ ಪ್ರಭಾಕರ ಶಿಶಿಲ, ನಿವೃತ್ತ ತಾಂತ್ರಿಕ ಕೃಷಿ...

ಜೀವನ್.ಎ.ಎಸ್ ಭಾರತೀಯ ವಾಯುಸೇನೆಯ ಏರ್‌ಮನ್ ಹುದ್ದೆಗೆ ಅಯ್ಕೆ

ಜಾಲ್ಸೂರು ಗ್ರಾಮದ ಬೊಳುಬೈಲು ಅರ್ಭಡ್ಕ ಪಡುಮಜಲು ಜೀವನ್.ಎ.ಎಸ್‌ ಇವರು ಭಾರತೀಯ ವಾಯುಸೇನೆಯ(ಮೈನ್) ಏರ್‌ಮನ್(ಮೆಡಿಕಲ್ ಅಸಿಸ್ಟಂಟ್) ಹುದ್ದೆಗೆ ಅಯ್ಕೆಯಾಗಿದ್ದಾರೆ.ಪ್ರಸ್ತುತ ಅವರು ಬೆಳಗಾವಿ ಸೇನಾ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.ವಿವೇಕಾನಂದ ವಿದ್ಯಾಕೇಂದ್ರ ವಿನೋಬನಗರದಲ್ಲಿ ಪ್ರಾಥಮಿಕ, ಮೋರಾರ್ಜಿ ದೇಸಾಯಿ ವಸತಿ ಶಾಲೆ ಪಂಜದಲ್ಲಿ ಹೈಸ್ಕೂಲು, ಮೋರಾರ್ಜಿ ದೇಸಾಯಿ ವಸತಿ ಕಾಲೇಜು ಕಮ್ಮಾಜೆಯಲ್ಲಿ ಪಿಯುಸಿ ಹಾಗೂ ಹುಬ್ಬಳ್ಳಿ ಕೆ.ಎಮ್.ಸಿ.ಆರ್.ಐ ಯಲ್ಲಿ ಬಿ.ಎಸ್ಸಿ ನರ್ಸಿಂಗ್(1.5...

ಸುಳ್ಯ : ಮೊಸರು ಕುಡಿಕೆ ಉತ್ಸವದ ಸ್ಟಿಕ್ಕರ್ ಬಿಡುಗಡೆ

ವಿಶ್ವಹಿಂದೂ ಪರಿಷದ್ ಸ್ಥಾಪನಾ ದಿನದ ಅಂಗವಾಗಿ ಸುಳ್ಯದಲ್ಲಿ ಅದ್ದೂರಿಯಾಗಿ ಆ.19 ನಡೆಯಲಿರುವ 12ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸ್ಟಿಕ್ಕರ್ ಬಿಡುಗಡೆ ಕಾರ್ಯಕ್ರಮವು ಕಲ್ಕುಡ ದೈವಸ್ಥಾನದಲ್ಲಿ ನಡೆಯಿತು. ಪಿಕೆ ಉಮೇಶ್ ರವರು ಸ್ಟಿಕ್ಕರ್ ಬಿಡುಗಡೆ ಮಾಡಿ ಶುಭಹಾರೈಸಿದರು.‌ ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡದ ಅಧ್ಯಕ್ಷರಾದ ಶ್ರೀಕಾಂತ್ ಗೋಳ್ವಲ್ಕರ್, ಸಹ ಕಾರ್ಯದರ್ಶಿ ಭಾನುಪ್ರಕಾಶ್...

ಕುಮಾರ್ ಪೆರ್ನಾಜೆ, ಸೌಮ್ಯ ದಂಪತಿಗಳು ಆದರ್ಶ ಜೇನು ಕೃಷಿ ದಂಪತಿಗಳು ಪ್ರಶಸ್ತಿಗೆ ಆಯ್ಕೆ

ವಿಶಿಷ್ಟ ವಿಶೇಷ ಬರಹಗಾರ, ಖ್ಯಾತ ಜೇನು ಕೃಷಿಕರಾದ ಕುಮಾರ್ ಪೆರ್ನಾಜೆ ಮತ್ತು ಶ್ರೀಮತಿ ಸೌಮ್ಯ ಆವರು ಹಲವಾರು ವರ್ಷಗಳಿಂದ ಜೇನು ಕೃಷಿಯಲ್ಲಿ ಮಾಡಿರುವ ಅಪಾರ ಸಾಧನೆಗಾಗಿ "ಆದರ್ಶ ಜೇನು ಕೃಷಿ ದಂಪತಿಗಳು ಪ್ರಶಸ್ತಿ" ಗೆ ಆಯ್ಕೆಯಾಗಿದ್ದಾರೆ. ಆ.03 ರಂದು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಜರುಗಲಿರುವ ಚಂದನ ಸಾಹಿತ್ಯ ಸಂಗೀತ ಸಂಭ್ರಮೋತ್ಸವದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು...

ಬೆಳ್ಳಾರೆ : ಸ್ನೇಹಿತರ ಕಲಾಸಂಘದವರಿಂದ ಅಟ್ಟಿ ಮಡಿಕೆ, ಮೊಸರು ಕುಡಿಕೆ ಹಾಗೂ ಶ್ರೀಕೃಷ್ಣ ಜನ್ಮಾಷ್ಠಮಿಯ ಆಮಂತ್ರಣ ಪತ್ರಿಕೆ ಬಿಡುಗಡೆ

ಸ್ನೇಹಿತರ ಕಲಾಸಂಘ  ಬೆಳ್ಳಾರೆ ಇವರ ವತಿಯಿಂದ ಆಗಸ್ಟ್ 15ರಂದು ನಡೆಯಲಿರುವ ಅಟ್ಟಿ ಮಡಿಕೆ ಮೊಸರು ಕುಡಿಕೆ ಹಾಗೂ ಆಗಸ್ಟ್ 17ರಂದು ಶ್ರೀ ಕೃಷ್ಣಜನ್ಮಾಷ್ಠಮಿಯ ಪ್ರಯುಕ್ತ ನಡೆಯಲಿರುವ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ ಕಾರ್ಯಕ್ರಮವು  ಜುಲೈ 30ರಂದು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸ್ನೇಹಿತರ ಕಲಾ ಸಂಘದ ಅಧ್ಯಕ್ಷರಾದ  ಪದ್ಮನಾಭ ಬೀಡು, ಕಾರ್ಯದರ್ಶಿ...

ರಕ್ಷಾ ನಾಗರಿಕ ಬಳಗ ಮೊಗ್ರ ಇವರಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಹಾಗೂ ಆರ್ಥಿಕ ನೆರವು

ಮೊಗ್ರ ಕಿನ್ನಿಕುಮೇರಿ ಪರಿಸರದಲ್ಲಿ ಸೇವಾ ಸಂಘಟನೆಯಾಗಿ ಕಾರ್ಯ ನಿರ್ವಹಿಸುತ್ತಿರುವ ರಕ್ಷಾ ನಾಗರಿಕ ಬಳಗದ ವತಿಯಿಂದ ಮೊಗ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ವಿತರಿಸಲಾಯಿತು.ಸಂಘಟನೆಯ ಅಧ್ಯಕ್ಷರಾದ ಲಯನ್ ನಾಗೇಶ್ ತೆಂಕಪ್ಪಾಡಿಯವರು ಸಮವಸ್ತ್ರ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.ಕಾರ್ಯದರ್ಶಿ ಜೇಸಿ ಜೀವನ್ ಮಲ್ಕಜೆ, ಕೋಶಾಧಿಕಾರಿ ದಯಾನಂದ ಕಿನ್ನಿಕುಮೇರಿ, ಪದಾಧಿಕಾರಿಗಳಾದ ಲಯನ್ ಕರುಣಾಕರ ಎಣ್ಣೆಮಜಲು, ಉಮೇಶ್ ಮಕ್ಕಿ,...
Loading posts...

All posts loaded

No more posts

error: Content is protected !!