ಶೇಣಿ : ಶ್ರೀ ಕೃಷ್ಣಾ ಜನ್ಮಾಷ್ಠಮಿ – ರಾಮ ಹಾಗೂ ಕೃಷ್ಣ  ಇಬ್ಬರೂ ಧರ್ಮ ರಕ್ಷಣೆಗೆ ಬದ್ಧರಾಗಿದ್ದರು – ಆನೇಕಾರ್ ಗಣಪಯ್ಯ

ರಾಮ ಮತ್ತು ಕೃಷ್ಟರ ಅವತಾರ ದಲ್ಲಿ ವಿಶೇಷತೆಯಿದೆ. ಶ್ರೀ ರಾಮ ಆದರ್ಶ ವ್ಯಕ್ತಿಯಾಗಿದ್ದ ಆದರೆ ಕೃಷ್ಣ ಆದರ್ಶ ವ್ಯಕ್ತಿಯಲ್ಲ. ವ್ಯಕ್ತಿತ್ವ ದೊಡ್ಡದು. ಈ ಇಬ್ಬರೂ ವ್ಯಕ್ತಿಗಳೂ ಧರ್ಮ ರಕ್ಷಣೆಯಲ್ಲಿ ತೊಡಗಿಸಿಕೊಂಡು ಬಂದವರಾಗಿದ್ದಾರೆ. ಎಂದು ಆನೇಕಾರ್ ಗಣಪಯ್ಯ ಹೇಳಿದರು. ಇವರು ಸಾರ್ವಜನಿಕ ಶ್ರೀ ಕೃಷ್ಣ ಸೇವಾ ಸಮಿತಿ ಶೇಣಿ ಇದರ ವತಿಯಿಂದ ಶೇಣಿ ಸ.ಹಿ.ಪ್ರಾ ಶಾಲಾ ವಠಾರದಲ್ಲಿ...

ಸೇವಾಜೆ : ಶ್ರೀ ಕೃಷ್ಣ ಜನ್ಮಾಷ್ಟಮಿ

ಶ್ರೀ ಕೃಷ್ಣ ಸಂಸ್ಕೃತಿಕ ಸೇವಾ ಸಮಿತಿ ಸೇವಾಜೆ ಮತ್ತು ಊರ ಭಕ್ತಾಭಿಮಾನಿಗಳ‌ ಸಹಯೋಗದೊಂದಿಗೆ ನಡೆದ 20ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ‌ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕರಾದ ಹೊನ್ನಪ್ಪ ಗೌಡ ಹೊನ್ನೆಮೂಲೆ ಇವರು ದೀಪ ಬೇಳಗುವ ಮೂಲಕ ನೆರವೇರಿಸಿದರು. ನಂತರ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಮಾವಿನಗೊಡ್ಲು ಹೊನ್ನೆಮೂಲೆ ಇವರಿಂದ ಭಜನಾ‌ ಕಾರ್ಯಕ್ರಮ ನೆರವೇರಿತು.
Ad Widget

ಗುತ್ತಿಗಾರು : ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ

ಗುತ್ತಿಗಾರು ಶ್ರೀಕೃಷ್ಣ ಭಜನಾ ಮಂದಿರದಲ್ಲಿ 63ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮವು ಶ್ರೀಕೃಷ್ಣ ಭಜನಾ ಮಂದಿರ ಹಾಗೂ ಯುವಕ ಮಂಡಲ(ರಿ.) ಗುತ್ತಿಗಾರು ಇವರುಗಳ ಸಹಭಾಗಿತ್ವದಲ್ಲಿ ನಡೆಸಲಾಯಿತು.ಹಿರಿಯ ಭಜಕರಾದ ಮೋಹನ್ ಆಚಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಶ್ರೀರಾಮ ಭಜನಾ ಮಂಡಳಿಯ ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಪಾರೆಮಜಲು ಉಪಸ್ಥಿತರಿದ್ದರು.ಯುವಕ ಮಂಡಲದ ಅಧ್ಯಕ್ಷರಾದ ಅಜಿತ್ ಬಾಕಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಭಜನಾ ಮಂದಿರದ...

ಪಂಜ: ಸ್ಕೌಟ್ ಗೈಡ್ ವಾರ್ಷಿಕ ಮಹಾಸಭೆ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ವಾರ್ಷಿಕ ಮಹಾಸಭೆ ಮತ್ತು ಸ್ಕೌಟ್ ಗೈಡ್ ಶಿಕ್ಷಕರ ಮಾಹಿತಿ ಕಾರ್ಯಗಾರವು ಪಂಜ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಾಧವ ಬಿ ಕೆ ಅವರ ಅಧ್ಯಕ್ಷತೆಯಲ್ಲಿ 16 ಆಗಸ್ಟ್ 2025 ಶನಿವಾರದಂದು ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ಸಭಾಂಗಣದಲ್ಲಿ ಜರುಗಿತು. ವಿದ್ಯಾಬೋಧಿನೀ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ಪಿಜಿಎಸ್ ಎನ್...

ಬೆಳ್ಳಾರೆ : ಮಾನವ ಬಂಧುತ್ವ ವೇದಿಕೆಯ ಸಭೆ

ಮಾನವ ಬಂಧುತ್ವ ವೇದಿಕೆ ಸುಳ್ಯ ತಾಲೂಕು ಇದರ ಸಭೆಯು ಬೆಳ್ಳಾರೆಯ ರಾಜೀವ್ ಗಾಂಧಿ ಸೇವಾ ಕಟ್ಟಡದಲ್ಲಿ ಆ 16 ರಂದು ನಡೆಯಿತು.ಮಾನವ ಬಂಧುತ್ವ ವೇದಿಕೆಯ ಕರಾವಳಿ ವಿಭಾಗೀಯ ಸಂಚಾಲಕರಾದ ಸತೀಶ್ ಕುಮಾರ್ ಕೆ.ಎಸ್ ತಮ್ಮ ಭಾಷಣದಲ್ಲಿ ಸ್ವರಾಜ್ಯ ಭಾರತದ ನೈಜ ಘಟನಾವಳಿಗಳ ಬಗ್ಗೆ ವಿವರಿಸಿ ಹೇಳಿದರು. ಪಹಲ್ಗಾಂನಲ್ಲಿ ಉಗ್ರರ  ದಾಳಿಯ ನೋವುಗಳನ್ನು ವಿವರಿಸಿದರು. ಮಾನವ ಬಂಧುತ್ವ...

ಶೇಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆಚರಣೆ

ಶೇಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು 15 ಆಗಸ್ಟ್‌ ರಂದು ಅದ್ದೂರಿಯಾಗಿ ಆಚರಿಸಲಾಯಿತು. ಬೆಳಿಗ್ಗೆ 9 ಗಂಟೆಗೆ ಎಸ್‌.ಡಿ.ಎಂ.ಸಿ. ಅಧ್ಯಕ್ಷರಾದ ಪ್ರಶಾಂತ್ ಪಾಡಾಜೆ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ವಿದ್ಯಾರ್ಥಿಗಳಿಂದ ಜಾಥಾ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಪೋಷಕರು ಹಾಗೂ ಊರಿನ ಅನೇಕ ಮಂದಿ ಭಾಗವಹಿಸಿದರು.ಬೆಳಿಗ್ಗೆ 10:30ಕ್ಕೆ ಸಭಾ ಕಾರ್ಯಕ್ರಮ ನಡೆಯಿತು. ಸಭೆಯ...

ಜನ-ಮನ ಗೆದ್ದ ವಿದ್ವತ್ ಹೊಸೊಳಿಕೆ ಅವರ ಗಾಂಧೀಜಿ ಪಾತ್ರ

ಸೈಂಟ್ ಪೌಲ್ಸ್ ಇಂಗ್ಲಿಷ್ ಮೀಡಿಯಂ ಶಾಲೆ ಕಡಬ ಇಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ವತ್.ಹೆಚ್.ವೈ ಹೊಸೊಳಿಕೆ ರವರ ಗಾಂಧೀಜಿ ಪಾತ್ರ ಜನ-ಮನ ಗೆದ್ದಿತು. ಯೋಗೀಶ್ ಹೊಸೊಳಿಕೆ ನಿರ್ದೇಶಿಸಿದರು.

ಉಬರಡ್ಕಕ್ಕೆ ಒಲಿದ ಕೇರಳ ರಾಜ್ಯ ಲಾಟರಿ – ಒಂದು ಕೋಟಿ ವಿಜೇತರಾದ ವಿನಯ ಯಾವಟೆ

ಕೇರಳ ರಾಜ್ಯ ಲಾಟರಿಯ ಆ.16 ರಂದು ನಡೆದ ಡ್ರಾ ದಲ್ಲಿ KZ 445643 ನಂಬರ್ ಗೆ ಒಂದು ಕೋಟಿಯ ಬಂಪರ್ ಬಹುಮಾನ ಬಂದಿದೆ. ಈ ನಂಬರನ್ನು ಉಬರಡ್ಕ ಗ್ರಾಮದ ವಿನಯ ಯಾವಟೆ ಎಂಬವರಿಗೆ ಖರೀದಿಸಿದ್ದರು. ಇವರು ಉಬರಡ್ಕದಲ್ಲಿ ವಿನಯ ಕೆಟರಿಂಗ್ ನಡೆಸುತ್ತಿದ್ದಾರೆ.

ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸ್ವಾತಂತ್ರೋತ್ಸವ ಹಾಗೂ ಸನ್ಮಾನ

ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಪೈಚಾರ್ ಇದರ ವತಿಯಿಂದ ಸ್ವಾತಂತ್ರೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮವು ಆ.15 ರಂದು ಪೈಚಾರ್ ಜಂಕ್ಷನ್ ನಲ್ಲಿ‌ ಬಹಳ ವಿಜೃಂಭಣೆಯಿಂದ ನಡೆಯಿತು.  ಕ್ಲಬ್ ನ ಅಧ್ಯಕ್ಷರಾದ ರಿಫಾಯಿ ಧ್ವಜಾರೋಹಣ ನೆರೆವೆರಿಸಿದರು. ಮಧ್ಯ ನಡೆದ ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಹಮೀದ್ ಕುತ್ತಮೊಟ್ಟೆ...

ಮರ್ಕಂಜ : ಸರ್ಕಾರಿ ಪ್ರೌಢಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

ಮರ್ಕಂಜ ಸರ್ಕಾರಿ ಪ್ರೌಢಶಾಲೆಯಲ್ಲಿ ಆ.15 ರಂದು 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಭೀಮಗುಳಿ ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹರೀಶ್ ಕಂಜಿಪಿಲಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಿಕ್ಷಕವೃಂದದವರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಭೀಮಗುಳಿ ವಹಿಸಿದ್ದರು.ವೇದಿಕೆಯಲ್ಲಿ...
Loading posts...

All posts loaded

No more posts

error: Content is protected !!