- Wednesday
- May 6th, 2026
ಸುಳ್ಯದ ಪ್ರಸಿದ್ಧ ಗೃಹೋಪಯೋಗಿ ವಸ್ತುಗಳ ಮಳಿಗೆ ಅಡ್ಕಾರ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯು 30ನೇ ವಸಂತಕ್ಕೆ ಕಾಲಿರಿಸಿದ ಹಿನ್ನೆಲೆಯಲ್ಲಿ ಗ್ರಾಹಕರ ಪ್ರತೀ ಖರೀದಿಗೆ ಬಂಪರ್ ಬಹುಮಾನ, ವೀಕ್ಲಿ ಬಹುಮಾನ ಹಾಗೂ ಸ್ಕ್ರಾಚ್ ಕಾರ್ಡ್ ಮುಖಾಂತರ 10 ಲಕ್ಷಕ್ಕೂ ಮಿಕ್ಕಿ ಗೆಲ್ಲುವ ಅವಕಾಶ ಒದಗಿಸಿದೆ.ಅಡ್ಕಾರ್ ಮಹೋತ್ಸವವು ಆ.25 ರಂದು ಆರಂಭವಾಗಿದ್ದು, ಸೆ.07 ರವರೆಗೆ ನಡೆಯಲಿದೆ.ಆ.30 ರಂದು ಗ್ರಾಹಕರಾದ ಡಾ. ಜೋಸ್ನಾ...
ಯುವಶಕ್ತಿ ಸಂಘ ಐವರ್ನಾಡು ಇದರ ವಾರ್ಷಿಕ ಮಹಾಸಭೆಯು ಆ.23 ರಂದು ಐವರ್ನಾಡು ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು. ಸಂಘದ ವಾರ್ಷಿಕ ಲೆಕ್ಕಪತ್ರವನ್ನು ಅನುಮೋದಿಸಿದ ನಂತರ 2025-26 ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯನ್ನು ನಡೆಸಲಾಯಿತು. ಹಾಗೂ 21ನೇ ಶಾರದಾ ಪೂಜಾ ಮಹೋತ್ಸವವನ್ನು ಸೆ.27ರಂದು ನಡೆಸುವುದೆಂದು ತೀರ್ಮಾನಿಸಲಾಯಿತು.ನೂತನ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ದಿನೇಶ್ ಮಡ್ತಿಲ, ಅಧ್ಯಕ್ಷರಾಗಿ ಲೋಕೇಶ್ ಕತ್ಲಡ್ಕ, ಪ್ರಧಾನ...
ಎಸ್ಸೆಸ್ಸೆಫ್ ಬೆಳ್ಳಾರೆ ಸೆಖ್ಟರಿನ ಸಾಹಿತ್ಯೋತ್ಸವವು ನಾಳೆ ಪಳ್ಳಿಮಜಲಿನ ಸಿರಾಜುಲ್ ಹುದಾ ಸೆಸೆಂಡೊರಿ ಮದರಸದ ವಠಾರದಲ್ಲಿ ಜರುಗಲಿದೆ.ಬೆಳಿಗ್ಗೆ 8:30 ಕ್ಕೆ ಧಾರ್ಮಿಕ, ಸಂಘಟನಾ ಪ್ರಮುಖರ ಉಪಸ್ಥಿತಿಯಲ್ಲಿ ಸಮಾರಂಭವು ಉದ್ಘಾಟನೆಗೊಳ್ಳಲಿರುವುದು.ಎಸ್ಸೆಸ್ಸೆಫ್ ಬೆಳ್ಳಾರೆ ಸೆಖ್ಟರಿನ ಘಟಕಗಳಾದ ಬೆಳ್ಳಾರೆ, ತಂಬಿನಮಕ್ಕಿ, ಮಾಲೆಂಗ್ರಿ, ಪೆರುವಾಜೆ, ಇಂದ್ರಾಜೆ, ಪಳ್ಳಿಮಜಲಿನ ಪ್ರತಿಭೆಗಳು ಈ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿ ಧಾರ್ಮಿಕ ಸಂಸ್ಕೃತಿ ವೈಭವ ತುಂಬಿ ಬರಲಿದ್ದು ಆಕರ್ಷಣೆಗೆ ಕಾರಣವಾಗಿರಲಿದೆ....
ಬಾಳುಗೋಡು ಗ್ರಾಮದ ಉಪ್ಪುಕ್ಕಳ ಪರಮೇಶ್ವರ ಗೌಡ ಕೊಲೆ ಪ್ರಕರಣದ ಆರೋಪಿಗಳ ಖುಲಾಸೆಗೊಳಿಸಿ ನ್ಯಾಯಾಲಯ ಆದೇಶಿಸಿದೆ .2013 ಸೆ.16 ರಂದು ಆರೋಪಿಗಳಾದ ಚಂದ್ರಹಾಸ, ಎಂ.ಎಚ್.ಮೋಹನ. ಮೋಹನ ದಾಸ್ ಗೌಡ, ಪ್ರಕಾಶ್ ಶೆಟ್ಟಿಗಾರ್, ರಫೀಕ್, ಹಾಗೂ ಉಂಬು ಯಾನೆ ಇಬ್ರಾಹಿಂ ಉಂಬಯ್ ರವರುಗಳು ಸೇರಿಕೊಂಡು ಸಂಜೆ 7:30 ಗಂಟೆಗೆ 2ನೇ ಆರೋಪಿ ಮೋಹನ ಎಂ ಎಚ್ ರವರ ಬಾವ...
ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸಮಾಜವನ್ನು ಒಗ್ಗೂಡಿಸಲು ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೆಶೋತ್ಸವ ಪ್ರಾರಂಭ ಮಾಡಿದ್ದರು. ಅಂತಹ ಪರಂಪರೆಯ ಇತಿಹಾಸ ಹೊಂದಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ವಳಲಂಬೆಯಲ್ಲಿ ರಾತ್ರಿ10 ಗಂಟೆ ವೇಳೆಗೆ ಸರಕಾರದ ಒತ್ತಡದ ಮೂಲಕ ಆರಕ್ಷಕ ಇಲಾಖಾಧಿಕಾರಿಗಳು ಕಾರ್ಯಕ್ರಮ ನಿಲ್ಲಿಸುವಂತೆ ಸೂಚನೆ ನೀಡಿರುವುದು ಖಂಡನೀಯವೆಂದು ಬಿಜೆಪಿ ಮಂಡಲ ಸಮಿತಿ ವೆಂಕಟ್ ವಳಲಂಬೆ...
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು. ಇದೇ ಹವಾಮಾನ ಪರಿಸ್ಥಿತಿಯ ಮುಂದುವರಿಯುವ ಸೂಚನೆಯಿದ್ದು, ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ & ಪ್ರೌಢ ಶಾಲೆ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ದಿನಾಂಕ: 30-08-2025 ರಂದು ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಆಧೇಶಿಸಿದ್ದಾರೆ.
ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಪಾಲಕಿಗೆ ರಜತ ಗೊಂಡೆಯನ್ನು ಸೇವಾರೂಪದಲ್ಲಿ ಶುಕ್ರವಾರ ಉದ್ಯಮಿ ನಾಗರಾಜ ಕುಲಕರ್ಣಿ ಬೆಂಗಳೂರು ಮತ್ತು ಕುಟುಂಬಸ್ಥರು ಸಮರ್ಪಿಸಿದರು.ಕಳೆದ ಬಾರಿ ಬೆಳ್ಳಿಯ ಪಾಲಕಿ ಸಮರ್ಪಣೆ ಮಾಡಿದ್ದ ಇವರು ನೂತನ ಪಲ್ಲಕ್ಕಿಗೆ 12 ಬೆಳ್ಳಿಯ ಗೊಂಡೆ ಸಮರ್ಪಣೆ ನೀಡಿದರು.ಈ ಸಂದರ್ಭ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್.ಎಸ್. ಇಂಜಾಡಿ,ಸಹಾಯಕ...
ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಪಂಚಾಯತ್ ಡಾಟಾ ಎಂಟ್ರಿ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸದೇ ಪುನಃ ಕರ್ತವ್ಯಕ್ಕೆ ನೇಮಕ ಮಾಡಿರುವುದನ್ನು ವಿರೋಧಿಸಿ ಆ.29 ಶುಕ್ರವಾರದಂದು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. “ಪ್ರತಿಭಟನೆಯಲ್ಲಿ ಗ್ರಾಮಸ್ಥರು ಭ್ರಷ್ಟಾಚಾರ ವಿರೋಧಿ ಘೋಷಣೆಗಳನ್ನು ಕೂಗಿದರು. ಪಂಚಾಯತ್ ನಲ್ಲಿ ಜನರ ಹಿತದಾಯಕ ನಿರ್ವಹಣೆ ಬದಲಾಗಿ ಭ್ರಷ್ಟಾಚಾರ ನಡೆಯುತ್ತಿದೆ. ತನಿಖೆ...
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಧಿಕಾರಿಗಳ ಕಚೇರಿ, ಮಂಗಳೂರು ದಕ್ಷಿಣ ವಲಯ ಹಾಗೂ ಪಿ.ಎಮ್.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಚ್ಚಿಲಗುಡ್ಡೆ ಮಂಗಳೂರು ಇದರ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯದ 10ನೇ ತರಗತಿ ವಿದ್ಯಾರ್ಥಿ ಯುಗನ್ ಜೇನುಕೋಡಿ ಭಾಗವಹಿಸಿ ಪ್ರಥಮ...
ರಾಯಚೂರಿನ ಬೆಳಕು ಸಾಹಿತ್ಯಿಕ ಸಾಂಸ್ಕೃತಿಕ ಟ್ರಸ್ಟ್ ನವರು ನೀಡುವ ದ.ರಾ ಬೇಂದ್ರೆ ರಾಷ್ಟ್ರ ಪ್ರಶಸ್ತಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳಿಗಾಗಿ ಖ್ಯಾತ ಯುವಕವಿ ಎಂ.ಎ ಮುಸ್ತಫಾ ಬೆಳ್ಳಾರೆಯವರು ಆಯ್ಕೆಯಾಗಿದ್ದಾರೆ.ಸೆ.21 ರಂದು ರಾಯಚೂರಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರಾಷ್ಟ್ರಮಟ್ಟದ ಬೆಳಕು ಸಮ್ಮೇಳನ ನಡೆಯಲಿದ್ದು, ಇಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
Loading posts...
All posts loaded
No more posts
