ಸರಕಾರಿ ಶಾಲೆ ಬಲವರ್ಧನೆಗೆ ಕ್ಯಾಂಪ್ಕೋ ನಿರ್ದೇಶಕರಾದ ಕೃಷ್ಣ ಪ್ರಸಾದ್ ಮಡ್ತಿಲರ ವಿಶೇಷ ಕಾಳಜಿ – ಕ್ಯಾಂಪ್ಕೋ ಸಾಮಾನ್ಯ ಉತ್ತಮ ನಿಧಿ ಯೋಜನೆಯಲ್ಲಿ ಕೋಲ್ಚಾರ್ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಒಂದು ಲಕ್ಷ ಅನುದಾನ

ಸುಳ್ಯ ತಾಲೂಕು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೋಲ್ಚಾರ್ ಇಲ್ಲಿ ಆಂಗ್ಲ ಮಾಧ್ಯಮ ತರಗತಿಯ ಮಕ್ಕಳಿಗೆ ಕುಳಿತುಕೊಳ್ಳಲು ಆಕರ್ಷಣೀಯ ಪೀಠೋಪಕರಣ ಖರೀದಿಸಲು ಕ್ಯಾಂಪ್ಕೋ ಸಂಸ್ಥೆ ಸಾಮಾನ್ಯ ಉತ್ತಮ ನಿಧಿ ಯೋಜನೆ(Camco Good Found)ಯಲ್ಲಿ ಕ್ಯಾಂಪ್ಕೋ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ ಇವರ ಮುತುವರ್ಜಿಯಲ್ಲಿ 1 ಲಕ್ಷ ಅನುದಾನವನ್ನು ನೀಡಿರುತ್ತಾರೆ.ಈ ಬಗ್ಗೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸುದರ್ಶನ್...

ಗಲ್ಫ್ ಬಾಯ್ಸ್ ಹಳೆಗೇಟು ಆಶ್ರಯ ದಲ್ಲಿ ಕ್ರಿಕೆಟ್ ಪಂದ್ಯಾಟ, ಸನ್ಮಾನ ಕಾರ್ಯಕ್ರಮ – “ಕ್ರೀಡೆಯೊಂದಿಗೆ ಸಾಧಕರಿಗೆ ಸನ್ಮಾನ ಮಾದರಿ ಕಾರ್ಯ” : ಕೆ. ಎಂ. ಮುಸ್ತಫ

ಗಲ್ಫ್ ಬಾಯ್ಸ್ ಹಳೆಗೇಟು ಇದರ ಆಶ್ರಯದಲ್ಲಿ ದಿವಂಗತ ಸತ್ಯ ನಾರಾಯಣ.ಕೆ ಇವರ ಸ್ಮರಣಾರ್ಥ ಪ್ರಥಮ ದರ್ಜೆ ಕಾಲೇಜು, ಕೊಡಿಯಾಲಬೈಲು ಕ್ರೀಡಾಂಗಣ ದಲ್ಲಿ 6ನೇ ವರ್ಷದ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿತ್ತು.ಉದ್ಘಾಟನಾ ಸಮಾರಂಭದಲ್ಲಿ ಜಯನಗರದ ಮೂವರು ಸಾಧಕರನ್ನು ಸನ್ಮಾನಿಸಲಾಯಿತು.ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷರಾಗಿ ಆಯ್ಕೆಯಾದ ಪತ್ರಕರ್ತೆ ಶ್ರೀಮತಿ ಜಯಶ್ರೀ ಕೊಯಿಂಗೋಡಿ, ಶಿಕ್ಷಣ ಕ್ಷೇತ್ರದಲ್ಲಿ...
Ad Widget

ದೇವ ಗೆಳೆಯರ ಬಳಗದಿಂದ ಉಳ್ಳಾಕುಲು ದೈವಸ್ಥಾನದ ವಠಾರ ಸ್ವಚ್ಛತೆ

ಯುವಜನ ಸಂಯುಕ್ತ ಮಂಡಳಿ ಹಮ್ಮಿಕೊಂಡಿರುವ "ಪಂಚಸಪ್ತತಿ - 2025" ಸ್ವಚ್ಚತಾ ಕಾರ್ಯಕ್ರಮದಲ್ಲಿ ದೇವ ಗೆಳೆಯರ ಬಳಗದ ವತಿಯಿಂದ ಶ್ರೀ ಉಳ್ಳಾಕುಲು ಮತ್ತು ಪರಿವಾರ ದೈವಗಳ ದೈವಸ್ಥಾನ ದೇವ ವಠಾರ ಸ್ವಚ್ಚತೆಯನ್ನು ಮಾಡಲಾಯಿತು .‌ ಈ ಸಂದರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷರಾದ ಮುಕುಂದ ಹಿರಿಯಡ್ಕ, ಗೌರವಾಧ್ಯಕ್ಷ ಯೋಗೀಶ್ ದೇವ,ಉಳ್ಳಾಕುಲು ಟ್ರಸ್ಟ್ ನ ಅಧ್ಯಕ್ಷರಾದ ಶೀನಪ್ಪ ಗೌಡ ಪಡ್ಪು,...

ಜ್ಞಾನಗಂಗಾ ನಮ್ಮೂರಿನ ಮಾದರಿ ಜ್ಞಾನದೇಗುಲ – ✒️ಪೂರ್ಣಿಮಾ ಚೊಕ್ಕಾಡಿ

ಬೆಳ್ಳಾರೆಯ ಹಚ್ಚ ಹಸಿರಿನ ಪರಿಸರ ಮಧ್ಯದಲ್ಲಿ ಶಿಸ್ತು  ಚೆಂದ   ಸ್ವಚ್ಛತೆಗೆ ಮಾದರಿಯಾಗಿ  ಎಲ್ಲರನ್ನು ಆಕರ್ಷಿಸುವ‌ ನಮ್ಮ ಶಾಲೆ ಜ್ಞಾನಗಂಗಾ ಬೆಳ್ಳಾರೆ.  1998 ರಲ್ಲಿ ಪ್ರಾರಂಭವಾದ ಸಿಬಿಎಸ್ಇ ಶಿಕ್ಷಣವು ಪ್ಲೇ ಗ್ರೂಪಿನಿಂದ ಹತ್ತನೇ ತರಗತಿಯವರೆಗೆ ಶಿಕ್ಷಣ ನೀಡುತ್ತದೆ. ಈ ಶಾಲೆಯು ಅದರದೇ ಆದಂತಹ ಘನತೆಯನ್ನು ಎತ್ತಿ ತೋರಿಸುತ್ತಾ ವಿದ್ಯಾರ್ಥಿಗಳಿಗೆ ಜ್ಞಾನ ದೇಗುಲ, ಪೋಷಕರಿಗೆ ಅಮ್ಮನ ಮಡಿಲು, ಶಿಕ್ಷಕ...

ಕುಕ್ಕುಜಡ್ಕ : ಪಂಚ ಸಪ್ತತಿ ಸ್ವಚ್ಛತಾ ಅಭಿಯಾನದ ಅಂಗವಾಗಿ ಬಸ್ ನಿಲ್ದಾಣ ಸ್ವಚ್ಛತೆ

ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಹಾಗೂ ಮಯೂರಿ ಯುವತಿ ಮಂಡಲ (ರಿ.) ಚೊಕ್ಕಾಡಿ ಇದರ ವತಿಯಿಂದ ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ 2025  ಕಾರ್ಯಕ್ರಮದ ಅಂಗವಾಗಿ ಐದನೆಯ ಸ್ವಚ್ಛತಾ  ಕಾರ್ಯಕ್ರಮವನ್ನು  ಕುಕ್ಕುಜಡ್ಕ ಬಸ್ಸು ತಂಗುದಾಣವನ್ನು ಶುಚಿಗೊಳಿಸಿ, ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವುದರ ಮೂಲಕ ನಡೆಸಲಾಯಿತು. ಯುವತಿ ಮಂಡಲದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯೆಯರು ಭಾಗವಹಿಸಿದ್ದರು.

ಸುಳ್ಯ ನಗರ ಯೋಜನಾ ಪ್ರಾಧಿಕಾರದಲ್ಲಿ 9&11 ಏಕ ವಿನ್ಯಾಸ ಅನುಮೋದಯ ಅರ್ಜಿಗಳ ಶೀಘ್ರವಿಲೇವಾರಿಗೆ ಅದಾಲತ್ ಮಾದರಿ ಕ್ರಮ :  ಸೂಡ ಅಧ್ಯಕ್ಷ ಕೆ.ಎಂ ಮುಸ್ತಫ

ಸುಳ್ಯ ಯೋಜನಾ ಪ್ರಾಧಿಕಾರದಲ್ಲಿ ಸದಸ್ಯ ಕಾರ್ಯದರ್ಶಿ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕರು ಸ್ವಾತಿ ಎನ್ ಸ್ವಾಮಿ ಮತ್ತು ಟೌನ್ ಪ್ಲಾನರ್ ಫೈರೋಜ್ ರವರ ಉಪಸ್ಥಿತಿಯಲ್ಲಿ, ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫ ಮಾರ್ಗದರ್ಶನ ದಲ್ಲಿ 9&11 ಏಕ ನಿವೇಶನ ವಿನ್ಯಾಸ ಅನುಮೋದನೆ, ಪರವಾನಿಗೆ ಮೊದಲಾದ ಪ್ರಸ್ತಾವನೆಗಳನ್ನು ಅರ್ಜಿದಾರರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ...

ಸುಳ್ಯದಲ್ಲಿಂದು ಸುರಿಯುತ್ತಿರುವ ಭಾರಿ ಮಳೆ – ಹಳೆಗೇಟು ಮುಖ್ಯರಸ್ತೆ ಕೆಸರುಮಯ

ಸುಳ್ಯ ಪರಿಸರದಲ್ಲಿಂದು ಬಹುದಿನಗಳ ಬಳಿಕ  ಸುರಿಯುತ್ತಿರುವ ಭಾರಿ ಮಳೆಯಿಂದ ಹಳೆಗೇಟು ಮುಖ್ಯ ರಸ್ತೆ ಕೆಸರುಮಯವಾಗಿದೆ.ಇಂದು ಸಂಜೆಯಿಂದ ಸುರಿಯುತ್ತಿರುವ ಬಾರಿ ಮಳೆಗೆ ಹಳೆಗೇಟು ಪೆಟ್ರೋಲ್ ಪಂಪ್ ಸಮೀಪ ಕಾಮಗಾರಿ ನಡೆಯುತ್ತಿದ್ದ ಸ್ಥಳ ದಿಂದ ಕೆಸರು ಮಣ್ಣು ನೀರಿನೊಂದಿಗೆ ರಸ್ತೆಗೆ ಹರಿದು ಬಂದಿದೆ. ರಸ್ತೆ ಸಂಪೂರ್ಣ ಕೆಸರು ನೀರಿನಿಂದ ತುಂಬಿದ್ದು ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಳ್ಯ ಪೇಟೆಯಲ್ಲೂ...

ಸುಬ್ರಹ್ಮಣ್ಯದ ಕೆ.ಎಸ್.ಎಸ್ ಕಾಲೇಜಿನಲ್ಲಿ ಅಂತರ್ ಕಾಲೇಜು ವಿದ್ಯಾರ್ಥಿ ವಿಚಾರ ಸಂಕಿರಣ

ಕುಲ್ಕುಂದ ಶಿವರಾಯ(ನಿರಂಜನ)ರ ಜನ್ಮಶತಮಾನೋತ್ಸವದ ಅಂಗವಾಗಿ "ನಿರಂಜನ:ಬದುಕು-ಬರಹ" ವಿಷಯದಲ್ಲಿ ಅಂತರ್ ಕಾಲೇಜು ವಿದ್ಯಾರ್ಥಿ ವಿಚಾರ ಸಂಕಿರಣ ನಡೆಯಿತು.ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಆಶ್ರಯದಲ್ಲಿ ಕಾಲೇಜಿನ 'ಭಾಷಾ ಸಂಘ'ವು 'ಜಲಶ್ರೀ ಪ್ರತಿಷ್ಠಾನ ಕಡ್ಲಾರು' ಇದರ ಸಹಯೋಗದೊಂದಿಗೆ ವಿಚಾರ ಸಂಕಿರಣವನ್ನು ಕಾಲೇಜಿನ ಸಭಾಂಗಣದಲ್ಲಿ  ಆಯೋಜಿಸಿತ್ತು.ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿಯ...

ಬಿಳಿನೆಲೆ : ಜಂಟಿ ಸರ್ವೆ ಕುರಿತಂತೆ ಗ್ರಾಮಸ್ಥರ ಸಭೆ

ಕಡಬ ತಾಲೂಕಿನ ಬಿಳಿನೆಲೆ ಭಾಗದ ಪ್ರಮುಖ ಸಮಸ್ಯೆಯಾಗಿದ್ದ ಜಂಟಿ ಸರ್ವೆಯ ಕುರಿತು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಗ್ರಾಮಸ್ಥರ ಸಭೆ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು  ಬಿಳಿನೆಲೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಾರದ ದಿನೇಶ್ ರವರು ವಹಿಸಿ, ಜಂಟಿ ಸರ್ವೆಯ ವಿಚಾರವಾಗಿ ಪ್ರಾಸ್ತಾವಿಕ ಮಾಹಿತಿಯನ್ನು ನೀಡಿದರು.  ಈ ಬಗ್ಗೆ ಹೋರಾಟದ ಪ್ರಮುಖರಾದ ಅಭಿಲಾಷ್ ಪಿ.ಕೆ...

ನ.16ರಂದು ವಳಲಂಬೆಯಲ್ಲಿ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ – ಹಿರಿಯ ಸಾಹಿತಿ ಎ.ಕೆ ಹಿಮಕರ ಸಮ್ಮೇಳನಾಧ್ಯಕ್ಷತೆ – ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಕನ್ನಡ ಸಾಹಿತ್ಯ ಪರಿಷತ್ ಪಂಜ ಹೋಬಳಿ ಘಟಕದ ಆಶ್ರಯದಲ್ಲಿ ಪಂಜ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ ನವಂಬರ್ 16ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು, ಅಭಿಮಾನಿಗಳು ಆಮಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಪಂಜ ಹೋಬಳಿ ಘಟಕದ ಅಧ್ಯಕ್ಷರಾದ ಬಾಬು ಅಚ್ರಪ್ಪಾಡಿ, ಸಂಘಟನಾ ಸಮಿತಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ...
Loading posts...

All posts loaded

No more posts

error: Content is protected !!