ಕುಕ್ಕೆ ಸುಬ್ರಹ್ಮಣ್ಯ : ಸಾಲು ಸಾಲು ಹಣತೆ ದೀಪಗಳ ನಡುವೆ ಭಕ್ತಿ-ವೈಭವದ ಲಕ್ಷದೀಪೋತ್ಸವ ಹಾಗೂ ದೇವರ ಉತ್ಸವ

ಸುಬ್ರಹ್ಮಣ್ಯ ನ.19 : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ರಾತ್ರಿ ವೈಭವದ ಲಕ್ಷದೀಪೋತ್ಸವ ನೆರವೇರಿತು. ಸಾಲು ಸಾಲು ಹಣತೆ ದೀಪಗಳ ನಡುವೆ ಕುಕ್ಕೆ ಸುಬ್ರಹ್ಮಣ್ಯ ದೇವರ ಲಕ್ಷದೀಪೋತ್ಸವವು ಭಕ್ತಿ-ಸಡಗರದಿಂದ ನಡೆಯಿತು.  ಚಂದ್ರಮಂಡಲ ರಥದಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ನಡೆಯಿತು. ಶ್ರೀ ದೇವಳದ ಅರ್ಚಕರು ಉತ್ಸವದ ವಿದಿ...

ಬೆಳ್ಳಾರೆ : ಶತಾಯುಷಿ ಶ್ರೀಮತಿ ಕುಂಞಿ ನಿಧನ

ಬೆಳ್ಳಾರೆ ಗ್ರಾಮದ ಗೌರಿಹೊಳೆಯ ಹತ್ತಿರ ನಿವಾಸಿಯಾದ ಶ್ರೀಮತಿ ಕುಂಞಿಯವರು ನ 21ರಂದು ಬೆಳಿಗ್ಗೆ ನಿಧನರಾದರು.ಇವರಿಗೆ 100 ವರುಷ ಪ್ರಾಯವಾಗಿತ್ತು.ಇವರ ಪುತ್ರ ಬ್ಯಾಂಕ್ ಆಫ್ ಬರೋಡ ದೊಡ್ಡತೋಟ ಶಾಖೆಯಲ್ಲಿ ಉದ್ಯೋಗಿಯಾಗಿರುವ ಕುಶಲ ಸೇರಿದಂತೆ ಮೂರು ಗಂಡು, ಎರಡು ಹೆಣ್ಣು ಮಕ್ಕಳು ಮತ್ತು ಮೊಮ್ಮಕ್ಕಳು ಅಪಾರ ಬಂಧು ಮಿತ್ರರನ್ನು ಅಗಲಿರುತ್ತಾರೆ.
Ad Widget

ಸುಳ್ಯ ರೋಟರಿ ವಿದ್ಯಾರ್ಥಿನಿ ಕು.ಕ್ಷಮಾ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ತೃತೀಯ

ನವೆಂಬರ್ 20 ರಂದು ಹಾವೇರಿಯಲ್ಲಿ ನಡೆದ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಪದವಿಪೂರ್ವ  ಇಲಾಖೆಯು ಆಯೋಜಿಸಿದ್ದ ರಾಜ್ಯ ಮಟ್ಟದ ಪದವಿಪೂರ್ವ ಬಾಲಕ–ಬಾಲಕಿಯರ ಯೋಗಾಸನ ಸ್ಪರ್ಧೆಯಲ್ಲಿ ಸುಳ್ಯ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು. ಕ್ಷಮಾ ತೃತೀಯ ಸ್ಥಾನ ಗಳಿಸಿ ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ.ಅಜ್ಜಾವರ ಗ್ರಾಮದ ಶ್ರೀ ತೀರ್ಥರಾಮ ಮುಡೂರು ಮತ್ತು ಶ್ರೀಮತಿ ಪೂರ್ಣಿಮಾ ಎ.ಜೆ...

ಸುಬ್ರಹ್ಮಣ್ಯ : ಚಂಪಾ ಷಷ್ಠಿ ಮಹೋತ್ಸವದಲ್ಲಿ ಕಲಾ ಸಾಧಕ ಗಣೇಶ ಪರ್ವತಮುಖಿ ಅವರಿಗೆ ಸನ್ಮಾನ

ಕುಕ್ಕೆ ಸುಬ್ರಹ್ಮಣ್ಯ ಲಕ್ಷದೀಪೋತ್ಸವದಂದು ಕಳೆದ ಹಲವಾರು ವರ್ಷಗಳಿಂದ ತಬಲ, ಹಾರ್ಮೋನಿಯಂ, ಯಕ್ಷಗಾನ ತರಬೇತಿ ನೀಡುತ್ತಿರುವ ಗಣೇಶ ಪರ್ವತಮುಖಿ ಅವರನ್ನು ಸನ್ಮಾನಿಸಲಾಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಸನ್ಮಾನ ನೆರವೇರಿಸಿದರು.‌ ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸದ್ಯರು ಹಾಗೂ ಮಾಸ್ಟರ್ ಪ್ಲಾನರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೀದಿ ಉರುಳುಸೇವೆ ಆರಂಭ

ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಜಾತ್ರೋತ್ಸವದ ಅಂಗವಾಗಿ ಬುಧವಾರ ಲಕ್ಷ ದೀಪೋತ್ಸವ ನಡೆದು ತದನಂತರದಲ್ಲಿ ಬೀದಿ ಉರುಳುಸೇವೆ  ಆರಂಭವಾಯಿತು. ಕುಕ್ಕೆ ಕ್ಷೇತ್ರಕ್ಕೆ ಭಕ್ತಾದಿಗಳು ಸಲ್ಲಿಸುವ ಅತಿ ದೊಡ್ಡ ಹರಕೆಗಳಲ್ಲಿ ಬೀದಿ ಉರುಳುಸೇವೆಯು ಪ್ರಮುಖ ಸೇವೆಯಾಗಿದೆ. ಹರಕೆಯನ್ನು ಹೊತ್ತ ಭಕ್ತರು ಕುಮಾರಧಾರ ಸ್ಥಾನಗಟ್ಟದಲ್ಲಿ ಮಿಂದು ಅಲ್ಲಿಂದಲೇ ಸುಮಾರು ಎರಡುವರೆ ಕಿಲೋಮೀಟರ್...

“ಅಡಿಕೆ ಕೃಷಿಕರ ಹಿತ ಕಾಯಲು ಕೇಂದ್ರ ಸರಕಾರ ಬದ್ಧವಾಗಿದೆ” – ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ

“ಅಡಿಕೆ ಕೃಷಿಕರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರು ಗಮನ ಹರಿಸಿದ್ದು, ಬೆಳೆಗಾರರ ಹಿತ ಕಾಯಲು ಕೇಂದ್ರ ಸರಕಾರ ಬದ್ಧವಾಗಿದ್ದು, ಜತೆಗಿದ್ದೇವೆ” ಎಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.ಅವರು ಬಾಳುಗೋಡಿನಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. “ಈಗಾಗಲೇ ಕೇಂದ್ರ ಕೃಷಿ ಸಚಿವರ ನೇತೃತ್ವದಲ್ಲಿ ಅಡಿಕೆ ಬೆಳೆಯುವ ಭಾಗದ ಸಂಸದರ...

ಜಟ್ಟಿಪಳ್ಳ : ಕುಡಿಯುವ ನೀರು ಮಾಲಿನ್ಯ – ಬಾವಿ ಸ್ವಚ್ಚಗೊಳಿಸಲು ನಾಗರಿಕರ ಮನವಿ

ಜಟ್ಟಿಪ್ಪಳ್ಳದ ಭಾಗದ ನಾಗರಿಕರು ಹಲವು ವರ್ಷಗಳಿಂದ ಶುದ್ಧ ಕುಡಿಯುವ ನೀರಿಗಾಗಿ ಸರಕಾರಿ ಬಾವಿಯನ್ನು ಉಪಯೋಗಿಸುತ್ತಿದ್ದು, ಇದೀಗ ಕಲುಷಿತಗೊಂಡು ಕುಡಿಯಲು ಆಯೋಗ್ಯವಾಗಿದೆ. ಮರದ ಎಲೆಗಳು ಬಿದ್ದು, ಹಲವು ವರ್ಷಗಳಿಂದ ಹೂಳು ತೆಗೆಯದೇ ನೀರು ಸಂಪೂರ್ಣ ಕಲುಷಿತಗೊಂಡಿದೆ. ಈ ಬಗ್ಗೆ ಸ್ಥಳೀಯಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.  ಇನ್ನಾದರೂ ಜನರಿಗೆ ಶುದ್ಧ...

ಬೆಳ್ಳಾರೆ : ಕನ್ನಡ ರಾಜ್ಯೋತ್ಸವ ಸಂಭ್ರಮ 2025 – ಉಚಿತ ಕಣ್ಣಿನ ತಪಾಸಣಾ ಶಿಬಿರ – ಸಾಧಕರಿಗೆ ಸನ್ಮಾನ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಬೆಳ್ಳಾರೆ ಇದರ ಆಶ್ರಯದಲ್ಲಿ ಆರ್ ಪಿ ಕಲಾ ಸೇವಾ ಟ್ರಸ್ಟ್ ( ರಿ ) ಪಾಂಬಾರು ನೇತೃತ್ವದಲ್ಲಿ ಜ್ಞಾನ ದೀಪ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ( ರಿ ) ಬೆಳ್ಳಾರೆ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮ 2025 ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರ ಸಾಧಕರಿಗೆ ಸನ್ಮಾನ...

ಲಕ್ಷ್ಮೀ ಮುಳ್ಳುಬಾಗಿಲು ನಿಧನ

ಕೊಲ್ಲಮೊಗ್ರ ಗ್ರಾಮದ ಮುಳ್ಳುಗಾಗಿಲು ಕುಕ್ಕುಜೆ ಪೈಲೂರು ಲಕ್ಷ್ಮೀ ಎಂಬವರು ನ.11 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರ ಯೋಗೀಶ್, ಸೊಸೆಯಂದಿರಾದ ರೋಹಿಣಿ ಯೋಗೀಶ್, ಮೀನಾಕ್ಷಿ ಪದ್ಮಯ್ಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಬಾಳುಗೋಡು : ಯುವ ಪತ್ರಕರ್ತ ಉಲ್ಲಾಸ್ ಕಜ್ಜೋಡಿ ಅವರನ್ನು ಸನ್ಮಾನಿಸಿದ ದ.ಕ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ

ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು “ಸಂಸದರ ನಡೆ-ಗ್ರಾಮದ ಕಡೆ” ಕಾರ್ಯಕ್ರಮ ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸುವ ಸಲುವಾಗಿ ಇಂದು(ನ.20) ಬಾಳುಗೋಡು ಗ್ರಾಮಕ್ಕೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಯುವ ಪತ್ರಕರ್ತ, ಬರಹಗಾರ ಹಾಗೂ ಅಮರ ಸುದ್ದಿ ವಾರಪತ್ರಿಕೆಯ ವರದಿಗಾರರಾದ ಉಲ್ಲಾಸ್ ಕಜ್ಜೋಡಿ ಅವರನ್ನು ಸಂಸದರು ಶಾಲು ಹೊದಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಸುಳ್ಯ...
Loading posts...

All posts loaded

No more posts

error: Content is protected !!