- Saturday
- May 3rd, 2025
ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 7ನೇ ವಾರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪುತ್ತೂರಿನ ಭಾರತ್ ಸಿನೇಮಾಸ್ ನಲ್ಲಿ ಏ.07ರಂದು ಸೋಮವಾರ ಸಂಜೆ 4.30 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ.

ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ನಡೆಯುವ ಮಾಸಿಕ ಸ್ವಚ್ಛತಾ ಕಾರ್ಯಕ್ರಮವು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ದ ವ್ಯವಸ್ಥಾಪನ ಸಮಿತಿಯ ಸಹಯೋಗದೊಂದಿಗೆ ಐವರ್ನಾಡು ಗ್ರಾಮ ಪಂಚಾಯತ್ ವಠಾರ ಹಾಗೂ ಮುಖ್ಯ ರಸ್ತೆ ಯ ಬದಿಯಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ವಠಾರದಿಂದ ಮರ್ವತ್ತಡ್ಕದವರೆಗೆ ನಡೆಯಿತು. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ನ ಅಧ್ಯಕ್ಷರು, ಸದಸ್ಯರು,...

ಸುಳ್ಯ:ಗೌಡರ ಯುವ ಸೇವಾ ಸಂಘದ ತಾಲೂಕು ಮಹಿಳಾ ಘಟಕದ ವತಿಯಿಂದ ಸುಳ್ಯ ತಾಲೂಕು ಮಟ್ಟದ ಮಕ್ಕಳ ಚೆಸ್ ಸ್ಪರ್ಧೆ ಎ.22ರಂದು ಕೊಡಿಯಾಲಬೈಲಿನ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ ಎಂದುವತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ಪಾತಿಕಲ್ಲು ತಿಳಿಸಿದ್ದಾರೆ. ಅವರು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸ್ಪರ್ಧೆಯ ವಿವರ ನೀಡಿದರು. ಅವರು 1ರಿಂದ 10ನೇ ತರಗತಿಯವರೆಗಿನ...

ಮಿತ್ತಮಜಲು ಸಮೀಪ ವಿದ್ಯುತ್ ಕಂಬಕ್ಕೆ ಕಾರೊಂದು ಗುದ್ದಿದ ಘಟನೆ ಕಳೆದ ರಾತ್ರಿ ನಡೆದಿದೆ. ಕಾರು ಗುದ್ದಿದ ರಭಸಕ್ಕೆ ಕಂಬ ಮುರಿದಿದೆ. ಚಾಲಕ ಕಾರಿನೊಂದಿಗೆ ಪರಾರಿಯಾಗಿದ್ದು ನಂಬರ್ ಪ್ಲೇಟ್ ಬಿದ್ದು ಸಿಕ್ಕಿದೆ ಎನ್ನಲಾಗಿದೆ.

ಭಾರತೀಯ ಜನತಾ ಪಕ್ಷದ ಸ್ಥಾಪನಾ ದಿನಾಚರಣೆ ಅಂಗವಾಗಿ ಪ್ರತಿ ಬೂತ್ ಮಟ್ಟದಲ್ಲಿ ಪಕ್ಷದ ಧ್ವಜರೋಹಣ ಕಾರ್ಯಕ್ರಮ ಹಮ್ನಿಕೊಳ್ಳಲಾಗಿದ್ದು ಅದರ ಅಂಗವಾಗಿ ದೇವಚಳ್ಳ ಗ್ರಾಮದ ದೇವ ಬೂತ್ ನಲ್ಲಿ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ದೇವ ಬೂತ್ ಅಧ್ಯಕ್ಷರಾದ ಲಕ್ಷ್ಮೀಶ ಅಡ್ಡನಪಾರೆ ಯವರ ಮನೆಯಲ್ಲಿ ಪಕ್ಷದ ಧ್ವಜರೋಹಣ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ರಮೇಶ್ ಪಡ್ಪು, ಬೂತ್...

ಸುಳ್ಯ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಸಭೆ ಎ. 5ರಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆಯಿತು.ಸುಳ್ಯ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಜಯಪ್ರಕಾಶ್ ನೆಕ್ರಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ದ.ಕ ಜಿಲ್ಲಾ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷರಾದ ಶುಭಾಶ್ಚಂದ್ರ ಕೊಳ್ನಾಡು ಮಾತನಾಡಿ ಪಂಚಾಯತ್ ರಾಜ್ ಸಂಘಟನೆಯನ್ನು...

ಸುಳ್ಯ: ಹಳೆಗೇಟು ವಿದ್ಯಾನಗರದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ 'ಸಂಸ್ಕಾರ ವಾಹಿನಿ' ಮಕ್ಕಳ ಬೇಸಿಗೆ ಶಿಬಿರ ಎ.11ರಿಂದ 15ರ ತನಕ ನಡೆಯಲಿದೆ ಎಂದು ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಸಂಚಾಲಕಿ ಶ್ರೀದೇವಿ ನಾಗರಾಜ್ ಭಟ್ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ...

ಸುಳ್ಯದ ಡಾ. ಹರಿಕೃಷ್ಣ ರೈ ಯವರು ಬೆಂಗಳೂರಿನ ಜಿ.ಇ ಹೆಲ್ತ್ ಕೇರ್ ಸಂಸ್ಥೆಯಲ್ಲಿ ಸೀನಿಯರ್ ಪ್ರಾಡಕ್ಟ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದು, ನಿನ್ನೆ ಎ.4 ರಂದು ಅಮೇರಿಕಾದ ವಿಸ್ಕಾನ್ಸಿನ್ ರಾಜ್ಯದ ಮಿಲ್ವಾಕೀ ನಗರದಲ್ಲಿ ನಡೆದ ಜಿ ಇ ಹೆಲ್ತ್ ಕೇರ್ ವಿಶ್ವ ಸಂಶೋಧನಾ ಸ್ಪರ್ಧೆ 2025 ರಲ್ಲಿ ಭಾಗವಹಿಸಿ, ಅವರು ಪ್ರದರ್ಶಿಸಿದ " ಎಂ.ಆರ್.ಐ ಸ್ಕ್ಯಾನರ್...

ಹರಿಹರ ಪಳ್ಳತ್ತಡ್ಕ ಗ್ರಾಮದ ಮುಂಡಾಜೆ ಲಿಂಗಪ್ಪ ಗೌಡ ರವರು ಏ.05 ರಂದು ರಾತ್ರಿ 10:00 ಗಂಟೆ ಸುಮಾರಿಗೆ ನಿಧನರಾದರು.ಮೃತರಿಗೆ 95 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಭಾಗೀರಥಿ, ಪುತ್ರ ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ಪೃಥ್ವಿಚಂದ್ರ ಮುಂಡಾಜೆ, ಪುತ್ರಿ ಶ್ರೀಮತಿ ಪ್ರತಿಮಾ ವಾಸುದೇವ ಗಬ್ಲಡ್ಕ, ಸೊಸೆ ಚಂದ್ರಲತಾ ದಿವಾಕರ ಮುಂಡಾಜೆ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು-ಮಿತ್ರರನ್ನು...

All posts loaded
No more posts