ಬೊಳುಬೈಲು : ವಿದ್ಯುತ್ ಕಂಬಕ್ಕೆ ಪಿಕಪ್ ಡಿಕ್ಕಿ

ಬೊಳುಬೈಲು ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ರಸ್ತೆ ಬದಿಯಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ಜು.17 ರಂದು ನಡೆದಿದೆ. ಪರಿಣಾಮ ಪಿಕಪ್ ಜಖಂ ಗೊಂಡಿದ್ದು ವಿದ್ಯುತ್ ಕಂಬ ಮುರಿದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಪೇರಾಲಿನ ವಕ್ರತುಂಡ ಪಿಕಪ್ ಎಂದು ತಿಳಿದುಬಂದಿದೆ.

ನಾಳೆ ದಕ ಸಂಪೂರ್ಣ ಲಾಕ್ಡೌನ್! ಅಗತ್ಯ ವಸ್ತುಗಳು ಕೂಡ ಸಿಗೋದಿಲ್ಲ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಪೂರ್ತಿ ಲಾಕ್ ಡೌನ್ ಇರಲಿದೆ. ಪ್ರತಿ ದಿನ ಬೆಳಿಗ್ಗೆ 8 ರಿಂದ 11 ಗಂಟೆಯ ಲಾಕ್ ಡೌನ್ ರಿಯಾಯಿತಿ ನಾಳೆ ಇರುವುದಿಲ್ಲ. ನಾಳೆ ಕಟ್ಟುನಿಟ್ಟಿನ ಲಾಕ್ಡೌನ್ ಹೇರಿರುವ ಡಿಸಿ, ಲಾಕ್ಡೌನ್ ನಿಯಮಗಳನ್ನು ಮೀರಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಖಡಕ್...
Ad Widget

ಸುಳ್ಯ ಓಡಬಾಯಿ ಬಳಿ ಕಾರು ಅಪಘಾತ- ಗಂಭೀರ ಗಾಯ – ಆಸ್ಪತ್ರೆಗೆ ದಾಖಲು

ಸುಳ್ಯ ಓಡಬಾಯಿ ಬಳಿ ಅಗ್ನಿಶಾಮಕ ಠಾಣೆ ಮುಂಭಾಗದಲ್ಲಿ ಸುಳ್ಯ ಕಡೆಯಿಂದ ಪುತ್ತೂರಿಗೆ ಚಲಿಸುತ್ತಿದ್ದ ಅಲ್ಟೋ ಕಾರ್ ಡ್ರೈವರ್ ನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಆಗಿದೆ. ಡಿಕ್ಕಿಯ ರಭಸಕ್ಕೆ ಕಾರು ರೋಡಿನಲ್ಲಿ ಮಗುಚಿ ಬಿದ್ದು ಕಾರಿನಲ್ಲಿದ್ದ ಒಬ್ಬ ಮಹಿಳೆಯ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ , ಸ್ಥಳೀಯರು ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ....

ಸುಳ್ಯ ಪೊಲೀಸ್ ಠಾಣೆ ಎರಡು ದಿನ ಸೀಲ್ ಡೌನ್

ಜು.14ರಂದು ಸುಳ್ಯದಲ್ಲಿ ಅಕ್ರಮ ದನ ಸಾಗಾಟ ಪ್ರಕರಣದಲ್ಲಿ ಬಂಧಿತನಾದ ಕರಿಕೆಯ ಅಬ್ದುಲ್ ಫಾರೂಕ್ ಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನಲೆಯಲ್ಲಿ ಸುಳ್ಯ ಪೋಲೀಸ್ ಠಾಣೆ ಎರಡು ಸೀಲ್ ಡೌನ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಆರೋಪಿ ಬಂಧಿಸುವ ವೇಳೆ ಕರ್ತವ್ಯ ದಲ್ಲಿದ್ದ ಎಸ್.ಐ. ಹರೀಶ್ ಸೇರಿದಂತೆ ಮೂವರು ಪೋಲೀಸ್ ಸಿಬ್ಬಂದಿಗಳು ಹೋಂ ಕ್ವಾರೆಂಟೇನ್ ಗೆ ಈಗಾಗಲೇ ತೆರಳಿದ್ದಾರೆ....

ಸುಳ್ಯದಲ್ಲೂ ಪ್ರತಿಷ್ಠಿತ ಕಾರ್ಖಾನೆಗಳು ಲಾಕ್ ಡೌನ್ ನಿಯಮ ಮೀರಿ ಕೆಲಸ ಮಾಡುತ್ತಿರುವುದು ನ್ಯಾಯವೇ – ಧರ್ಮಪಾಲ ಕೊಯಿಂಗಾಜೆ ಹೇಳಿಕೆ

ಸರಕಾರವು ಲಾಕ್ ಡೌನ್ ನಿಯಮ ಜಾರಿಗೆ ತಂದಿರುವುದು ಒಳ್ಳೆಯದಾಗಿದೆ . ಆದರೆ ಈ ನಿಯಮ ಸರಿಯಾಗಿ ಜಾರಿಯಾಗುತ್ತಿದೆಯೇ ಎಂಬುದು ಬಹುದೊಡ್ಡ ಪ್ರಶ್ನೆಯಾಗಿದೆ . ಖಂಡಿತವಾಗಿಯೂ ತಾಲೂಕು ಆಡಳಿತ , ಮಾನ್ಯ ಶಾಸಕರು ಲಾಕ್ ಡೌನ್ ನಿಯಮ ಪಾಲಿಸುವಲ್ಲಿ ತೆಗೆದುಕೊಂಡಿರುವ ಕ್ರಮ ಯಶಸ್ವಿಯಾಗಿಲ್ಲ . ತಾಲೂಕಿನ ಪ್ರತಿಷ್ಠಿತ ಕಾರ್ಖಾನೆಗಳು ತನ್ನ ರಾಜಕೀಯ ಪ್ರಭಾವ ಬಳಸಿ ಬೆಳಿಗ್ಗೆಯಿಂದ ಸಂಜೆ...

ನಾಳೆ.(ಜು.18) ಸರ್ಕಾರಿ ಕಚೇರಿಗಳಿಗೆ ರಜೆ

ಕೊರೊನ ಹಿನ್ನೆಲೆಯಲ್ಲಿ ಪ್ರತಿ ಶನಿವಾರ ಸರ್ಕಾರಿ ರಜೆ ಘೋಷಿಸಿರುವುದರಿಂದ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳಿಗೆ ನಾಳೆ ರಜೆ ಇರಲಿದೆ. ಗ್ರಾಮ ಪಂಚಾಯತ್, ಕಂದಾಯ ಇಲಾಖೆ, ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳು ರಜೆ ಇದ್ದು, ಸರಕಾರಿ ಕಾರ್ಯಗಳು ಸೋಮವಾರ ಮುಂದುವರಿಯಲಿವೆ. ಕೊರೊನ ಲಾಕ್ ಡೌನ್ ಮತ್ತು ಅಗತ್ಯ ಸೇವೆಗಳು ಎಂದಿನಂತೆ ಮುಂದುವರಿಯಲಿವೆ.

ಸುಳ್ಯ ಪೊಲೀಸ್ ಠಾಣೆ ಜು.18 ರಿಂದ ಸೀಲ್ ಡೌನ್ ಸಾಧ್ಯತೆ

ಜು.14 ರಂದು ಸುಳ್ಯದಲ್ಲಿ ಬಾರಿ ಸಾಹಸಮಯ ರೀತಿಯಲ್ಲಿ ಅಕ್ರಮ ದನ ಸಾಗಾಟ ಪ್ರಕರಣದಲ್ಲಿ ಬಂಧಿತನಾದ ಕರಿಕೆಯ ಅಬ್ದುಲ್ ಫಾರೂಕ್ ಗೆ ಕೊರೊನಾ ಪಾಸಿಟಿವ್ ಬಂದಿರುವುದಾಗಿ ತಿಳಿದು ಬಂದಿದೆ.ಈ ಹಿನ್ನಲೆಯಲ್ಲಿ ಸುಳ್ಯ ಪೋಲೀಸ್ ಠಾಣೆ ಜುಲೈ 18ರಿಂದಸೀಲ್ ಡೌನ್ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಎಸ್.ಐ. ಹರೀಶ್ ಸೇರಿದಂತೆ ಆರೋಪಿಯ ಬಂಧನದಲ್ಲಿ ತೊಡಗಿಸಿಕೊಂಡ ಮೂವರು ಪೋಲೀಸ್...

ಸೇವಾಜೆ ಶಾಲಾ ಬಳಿ ರಸ್ತೆಗೆ ಬಿದ್ದ ಮರ – ತೆರವು

ಎಲಿಮಲೆ ಮಡಪ್ಪಾಡಿ ರಸ್ತೆಗೆ ಸೇವಾಜೆ ಸಮೀಪ ಮರ ಬಿದ್ದು ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಸೇವಾಜೆ ಶ್ರೀ ಕೃಷ್ಣ ಸಾಂಸ್ಕೃತಿಕ ಸಮಿತಿ ಸದಸ್ಯರು ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕುಸುಮ ಸಾರಂಗದ ವತಿಯಿಂದ ವಾಟ್ಸಾಪ್ ಮುಖಾಂತರ ವಿವಿಧ ಸ್ಪರ್ಧೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜ್ ಸುಬ್ರಹ್ಮಣ್ಯ ದ ರಂಗ ಘಟಕ ಕುಸುಮ ಸಾರಂಗವೂ ಕಳೆದ 27 ವರ್ಷಗಳಿಂದ ಬೇರೆ ಬೇರೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಕಲಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ‌ಕೊರೋನ ಸಂಕಷ್ಟದ ಸಮಯದಲ್ಲಿ ಆಸಕ್ತ ಪ್ರತಿಭೆಗಳಿಗಾಗಿ ಸಾಮಾಜಿಕ ಜಾಲತಾಣದ ಮೂಲಕ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು ವಿಜೇತರಿಗೆ ನಗದು ಬಹುಮಾನ ಮತ್ತು...

ಆನ್ ಲೈನ್ ದಾಖಲಾತಿ ಆರಂಭಿಸಿದ ಪ್ರಥಮ ದರ್ಜೆ ಕಾಲೇಜು

ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜು 2020-21 ನೇ ಸಾಲಿನ ಪ್ರಥಮ ಪದವಿ ವಿಧ್ಯಾರ್ಥಿಗಳಿಗೆ ಆನ್‌ ಲೈನ್ ದಾಖಲಾತಿಗಾಗಿ ಆರಂಭವಾಗಿದ್ದು ಲಾಕ್ ಡೌನ್ ವೇಳೆಯಲ್ಲಿ  ಪ್ರಥಮ ಹೆಜ್ಜೆಯಿರಿಸಿದೆ. ಪ್ರವೇಶಾತಿಯನ್ನು ಬಯಸುವ ಅಭ್ಯರ್ಥಿಗಳು ಇಲ್ಲಿ ನೀಡಿರುವ ಗೂಗಲ್ ಲಿಂಕ್  ಉಪಯೋಗಿಸಿ ಆನ್ ಲೈನ್ ಅರ್ಜಿ  ಭರ್ತಿಗೊಳಿಸುವುದು.  ಭರ್ತಿಗೊಳಿಸಿದ ಮಾತ್ರಕ್ಕೆ ಪ್ರವೇಶಾತಿ ಅಂಗೀಕಾರವಾಗಿದೆ ಎಂದು ಭಾವಿಸತಕ್ಕದ್ದಲ್ಲ. ಈ ಮಾಹಿತಿಯನ್ನು...
Loading posts...

All posts loaded

No more posts

error: Content is protected !!