- Wednesday
- April 30th, 2025

ವಿದ್ಯಾನಿಕೇತನ ಶಿಶು ಮಂದಿರ ಕಳಂಜ ಇಲ್ಲಿ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಕಾರ್ಯಕ್ರಮ ಎ.09ರಂದು ನಡೆಯಿತು. ಮಕ್ಕಳು ಮತ್ತು ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಹೇಮಚಂದ್ರ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ವಿಭಾಗ ಸಹ ಕಾರ್ಯವಾಹಕ ಸುಭಾಶ್ಚಂದ್ರ ಕಳಂಜ, ಸಂಚಾಲಕಿ ಶ್ರೀಮತಿ ಮಾಲಿನಿ ಪ್ರಸಾದ್, ಮಾತಾಜಿ ಶ್ರೀಮತಿ ಅಕ್ಷತಾ...
ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿಗೆ ಏ.10 ಗುರುವಾರ ಜಿಲ್ಲಾ ರಾಜ್ಯಪಾಲರಾದ ರೋ .ವಿಕ್ರಮ ದತ್ತ ಅವರು ಅಧಿಕೃತ ಭೇಟಿ ನೀಡಲಿದ್ದು ವಿವಿಧ ಸೇವಾ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಲಿದ್ದಾರೆ.ಗುರುವಾರ ಬೆಳಿಗ್ಗೆ 9:00ಗೆ ಪಂಜದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಹಾಗೂ ಎಲ್ಲಾ ಪದಾಧಿಕಾರಿ ಸದಸ್ಯರು ರಾಜಪಾಲರನ್ನು ಬರಮಾಡಿಕೊಳ್ಳ ಇರುವರು. ಅಲ್ಲಿಂದ ಪಲ್ಲೋಡಿ ಎಂಬಲ್ಲಿ ವಿಕಲಚೇತನ ಮಹಿಳೆ...

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರಶ್ಮಿ ವಿದ್ಯಾಲಯ ಸವಣೂರು ಇಲ್ಲಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಅಪೇಕ್ಷಾ.ಜಿ ಬಾರೆಂಗಳ 575 ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಚಾರ್ವಾಕ ಬಾರೆಂಗಳ ಗೋಪಾಲಕೃಷ್ಣ.ಜಿ ಹಾಗೂ ಶ್ರೀಮತಿ ಲೀಲಾವತಿ ದಂಪತಿಗಳ ಪುತ್ರಿ. ಇವರು ಸರಕಾರಿ ಪ್ರಾಥಮಿಕ ಶಾಲೆ ಚಾರ್ವಾಕ, ಸರಕಾರಿ ಪ್ರೌಢ ಶಾಲೆ ಕಾಣಿಯೂರು ಇಲ್ಲಿಯ ಹಿರಿಯ...

ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಸಂತ ಫಿಲೋಮಿನ ಕಾಲೇಜಿನ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕೊಲ್ಲಮೊಗ್ರದ ನೀತಿ.ಎನ್.ಬಿ591(98.5%) ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಒಂಬತ್ತನೇ ರ‌್ಯಾಂಕ್ ಪಡೆದುಕೊಂಡಿದ್ದಾರೆ. ಇವರು ಕೆ.ವಿ.ಜಿ ಪ್ರೌಢಶಾಲೆ ಕೊಲ್ಲಮೊಗ್ರು ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ಗೌಡ ಎನ್ ಮತ್ತು ಶ್ರೀಮತಿ ಶಾರದಾ ದಂಪತಿಗಳ...

ಗುತ್ತಿಗಾರು ಲಯನ್ಸ್ ಕ್ಲಬ್ ಗೆ ಲಯನ್ಸ್ ಪ್ರಾಂತೀಯ ಅಧ್ಯಕ್ಷರ ಭೇಟಿ ಕಾರ್ಯಕ್ರಮವು ಇತ್ತೀಚೆಗೆ ಗುತ್ತಿಗಾರು ಲಯನ್ಸ್ ಸಭಾಭವನದಲ್ಲಿ ನಡೆಯಿತು.ಗುತ್ತಿಗಾರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ| ಕುಶಾಲಪ್ಪ ತುಂಬತ್ತಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಪ್ರಾಂತೀಯ ಅಧ್ಯಕ್ಷರಾದ ಲ| ಗಂಗಾಧರ ರೈ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಲ| ಸನತ್ ಮುಳುಗಾಡು ಹಾಗೂ ಸರೋಜಿನಿ ಗಂಗಯ್ಯ ಮುಳುಗಾಡು ಇವರಿಂದ ನೆರಳಾಡಿ...

ಸುಳ್ಯದ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲಾ 76 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.100 ಫಲಿತಾಂಶ ದಾಖಲಾಗಿದೆ. ಕಲಾವಿಭಾಗದಲ್ಲಿ ಹರ್ಷಿತಾ ಕುದ್ಕುಳಿ ಮನೆ (ಜಯಂತಿ ಹಾಗೂ ಬಾಲಕೃಷ್ಣ ಕುದ್ಕುಳಿ ದಂಪತಿಗಳ ಪುತ್ರಿ) ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಕಲಾವಿಭಾಗದಲ್ಲಿ 23 ವಿದ್ಯಾರ್ಥಿಗಳಿದ್ದು ಎಲ್ಲರು ಪಾಸಾಗಿದ್ದು ಹರ್ಷಿತಾ ಕುದ್ಕುಳಿ ಮನೆ 587, ಭಾಗ್ಯಶ್ರೀ...
ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 7ನೇ ವಾರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪುತ್ತೂರಿನ ಭಾರತ್ ಸಿನೇಮಾಸ್ ನಲ್ಲಿ ಏ.09ರಂದು ಬುಧವಾರ ಸಂಜೆ 4.30 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ.

ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಐವರ್ನಾಡು ಸರಕಾರಿ ಪದವಿಪೂರ್ವ ಕಾಲೇಜಿಗೆ ಶೇ.76.19 ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ 10 ವಿದ್ಯಾರ್ಥಿ ಗಳು ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.100 ಫಲಿತಾಂಶ ಬಂದಿದೆ.ಐವರ್ನಾಡಿನ ಕಟ್ಟತ್ತಾರು ವಿಶ್ವನಾಥ ಕೆ ಮತ್ತು ನಳಿನಿ ದಂಪತಿ ಪುತ್ರ ಹವೀನ ಕೆ.ವಿ.539 ಅಂಕ,ಐವರ್ನಾಡು ಬಾಂಜಿಕೋಡಿ ರೊಜಾರಿಯೋ ಮಚಾದೋ ಮತ್ತು ಶೋಭಾ ಮೊಂತೆರೊ ದಂಪತಿ...

2024-25 ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದಲ್ಲಿರುವ ಎಸ್.ಎಸ್.ಪಿ.ಯು. ನಲ್ಲಿ ಶೇ.97 ಫಲಿತಾಂಶ ಬಂದಿದೆ. ಒಟ್ಟು ಪರೀಕ್ಷೆಗೆ ಹಾಜರಾದ 415 ವಿದ್ಯಾರ್ಥಿಗಳಲ್ಲಿ 402 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇದರಲ್ಲಿ 68 ಡಿಸ್ಟಿಂಕ್ಷನ್, 264 ಪ್ರಥಮ, 59 ದ್ವಿತೀಯ, 11 ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ 99 ವಿದ್ಯಾರ್ಥಿಗಳು...

ಪ್ರಥಮ ಪಿಯುಸಿ ಅನುತ್ತೀರ್ಣರಾಗಿ ಅಥವಾ ಎಸ್ ಎಸ್ ಎಲ್ ಸಿ ಯಿಂದ ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕಾಲೇಜು ಮಾದರಿಯಲ್ಲೇ ತರಗತಿಗಳನ್ನು ನಡೆಸುತ್ತಿರುವ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಿಂದ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 15 ವಿದ್ಯಾರ್ಥಿಗಳ ಪೈಕಿ 14 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ. 93 ಫಲಿತಾಂಶ ದಾಖಲಾಗಿದೆ. ಒಬ್ಬ...

All posts loaded
No more posts