- Monday
- August 3rd, 2026
ವಿಶ್ವ ಯುವಕ ಮಂಡಲ ಬಾಳುಗೋಡು ಇದರ ವತಿಯಿಂದ ಆ.13 ರಂದು ಸುಳ್ಯ ಹಾಗೂ ಕಡಬ ತಾಲೂಕುಗಳ ಮುಕ್ತ ಕೆಸರುಗದ್ದೆಯ ಪುರುಷರ ಮತ್ತು ಮಹಿಳೆಯರ ಹಗ್ಗಜಗ್ಗಾಟ ಹಾಗೂ ಸೀಮಿತ ಗ್ರಾಮಗಳ(ಬಾಳುಗೋಡು, ಐನೆಕಿದು,ಹರಿಹರ, ಕೊಲ್ಲಮೊಗ್ರ,ಕಲ್ಮಕಾರು) ಕೆಸರುಗದ್ದೆ ವಾಲಿಬಾಲ್ ಮತ್ತು ತ್ರೋಬಾಲ್ ಪಂದ್ಯಾಟ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9663904093 9480599828 ನಂಬರ್ ಗೆ...
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸುಮಾರು ೩೮ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಭೀಮ ಭಟ್ ಮಾನಾಡು ಮತ್ತು ರುಕ್ಮಿಣಿ ದೇವರಗದ್ದೆ ಅವರಿಗೆ ಬೀಳ್ಕೊಡುಗೆ ಸಮಾರಂಭವು ಸೋಮವಾರ ನಡೆಯಿತು.ಶ್ರೀ ದೇವಳದ ಆಡಳಿತ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ನಿವೃತ್ತರನ್ನು ಸನ್ಮಾನಿಸಿ ಗೌರವಿಸಿದರು. ...
ಸುಳ್ಯ ತಾಲೂಕಿನ ಶಾಲೆಗಳಲ್ಲೆ ಏಕೈಕ ಮಳೆ ಮಾಪನ ಇರುವ ವಿದ್ಯಾಬೋಧಿನೀ ವಿದ್ಯಾಸಂಸ್ಥೆ ಬಾಳಿಲದಲ್ಲಿ ಮಕ್ಕಳಿಗೆ ಪ್ರತಿ ದಿನ ಹವಾಮಾನ ಮಾಹಿತಿ ನೀಡಲಾಗುತ್ತದೆ. ಪ್ರತಿ ದಿನ ಮಕ್ಕಳು ಬೆಳಗ್ಗೆ 9.00ರಿಂದ ಮರುದಿನ 9.00ಗಂಟೆ ವರೆಗೆ ಬೀಳುವ ಮಳೆ ಪ್ರಮಾಣವನ್ನು ಅಳತೆ ಮಾಡಿ ದಾಖಲಿಸುತ್ತಾರೆ. ವಿದ್ಯಾಸಂಸ್ಥೆಯ ಸಂಚಾಲಕರಾದ ಶ್ರೀ ಪಿ.ಜಿ. ಎಸ್. ಎನ್ ಪ್ರಸಾದ್ ರವರು ಕಳೆದ 45ವರ್ಷಗಳಿಂದಲೂ...
ದ.ಕ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧೀಕ್ಷಕರಾಗಿದ್ದ ಮಂಜುನಾಥ್ ಕೆ.ಎಂ. ರವರಿಗೆ ಸುಳ್ಯ ತಾಲೂಕು ಕಚೇರಿಗೆ ನೂತನ ಉಪತಹಶೀಲ್ದಾರ್ ಆಗಿ ವರ್ಗಾವಣೆಯಾಗಿದೆ. ಸುಳ್ಯ ತಾಲೂಕು ಕಚೇರಿಯಲ್ಲಿ ದ್ವಿ ದ ಸಹಾಯಕರಾಗಿದ್ದ ಅವರು 2015 ರಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ವರ್ಗಾವಣೆಗೊಂಡಿದ್ದರು.
ಎಲಿಮಲೆ ಸರಕಾರಿ ಪ್ರೌಢಶಾಲೆ ಎಲಿಮಲೆಯಿಂದ ವರ್ಗಾವಣೆಗೊಂಡಿರುವ ಹಿಂದಿ ಭಾಷಾ ಶಿಕ್ಷಕರಾದ ವಿರೂಪಾಕ್ಷಪ್ಪ ಎಂಪಿ ಅವರಿಗೆ ಅಭಿನಂದನೆ ಹಾಗೂ ಬೀಳ್ಕೊಡುಗೆ ಸಮಾರಂಭ ಜು.31 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಕಾರ್ಯಾಧ್ಯಕ್ಷರಾದ ಜಯಂತ ಹರ್ಲಡ್ಕ ಇವರು ವಹಿಸಿದ್ದರು. ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಶೈಲೇಶ್ ಅಂಬೆಕಲ್ಲು ಮತ್ತು ಶ್ರೀಮತಿ ಪ್ರೇಮಲತಾ ದಿನೇಶ್ ಕೇರ,...
ಅಜ್ಜಾವರ ಗ್ರಾಮದ ದೊಡ್ಡೇರಿ ಸರಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲೆಯ ಗೊಡೆಯು ಬಿರುಕು ಬಿಟ್ಟು ಅಪಾಯದ ಸ್ಥಿತಿಯಲ್ಲಿದ್ದು, ಇಂದೋ ನಾಳೆಯೋ ಬೀಳುವಂತಿದೆ. ಈ ಹಿಂದಿನ ಸರಕಾರದ ಅವಧಿಯಲ್ಲಿ ಶಾಸಕ ಎಸ್. ಅಂಗಾರರ ಮುತುವರ್ಜಿಯಲ್ಲಿ ಮಳೆಹಾನಿ ಪರಿಹಾರ ನಿಧಿಯಲ್ಲಿ ಸುಮಾರು 7 ಲಕ್ಷ ರೂಪಾಯಿಗಳಲ್ಲಿ ದುರಸ್ತಿ ಮಾಡಲು ಹಣ ಮಂಜುರಾಗಿ, ಎಂಜಿನಿಯರಿಂಗ್ ವಿಭಾಗಕ್ಕೆ ಬಂದಿತ್ತು. ಅದು ಹಿಂದಕ್ಕೆ...
ಪಾಟಾಳಿಯಾನೆ ಗಾಣಿಗ ಸಮಾಜ ಸೇವಾ ಸಂಘದ ವತಿಯಿಂದ ಗಾಣಿಗ ಸಮ್ಮಿಲನ ಕಾರ್ಯಕ್ರಮವು ಅಕ್ಟೋಬರ್ 1 ರಂದು ಹಾಗೂ ಪೆರ್ಣೆ ಕ್ಷೇತ್ರದಲ್ಲಿ 2024 ಪೆಬ್ರವರಿ ರಲ್ಲಿ ಕಳಿಯಾಟ ಮಹೋತ್ಸವ ಹಿನ್ನಲೆಯಲ್ಲಿ ಮನೆಗೊಂದು ಸಸಿ ನೆಡುವ ಕಾರ್ಯಕ್ರಮವು ಅಗಸ್ಟ್ 20ರಂದು ನಡೆಯಲಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಸಲುವಾಗಿ ಪೂರ್ವಬಾವಿ ಸಭೆಯು ಸುಳ್ಯದ ದುರ್ಗಾಪರಮೇಶ್ವರಿ ಕಲಾ ಮಂದಿರ ಕೇರ್ಪಳದಲ್ಲಿ...
ಮಲೆನಾಡು ಜನಹಿತ ರಕ್ಷಣೆ ವೇದಿಕೆಯ ವತಿಯಿಂದ ಕಸ್ತೂರಿ ರಂಗನ್ ವರದಿಯ ವಿರುದ್ಧ ಪಕ್ಷಾತೀತವಾಗಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದ್ದು, ಆ. 08ರಂದು ಮಂಗಳವಾರ ದಂದು ಕುಕ್ಕೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕಛೇರಿ ಬಳಿ, ಪೂರ್ವಭಾವಿ ಸಭೆ ನಡೆಯಲಿದೆ. ಕಸ್ತೂರಿ ರಂಗನ್ ವರದಿ ಜಾರಿ ಮಾಡುವುದರಿಂದ ಉಂಟಾಗುವ ಸಮಸ್ಯೆಯ ಬಗ್ಗೆ 2012ರಿಂದ ಇದುವರೆಗೆ ಹೋರಾಟ ಮಾಡಿಕೊಂಡು ಬಂದಿರುವ...
ಹಣ ದ್ವಿಗುಣ ಗೊಳಿಸುವ ವಂಚನಾ ಜಾಲಕ್ಕೆ ಸಿಲುಕಿದ ಯುವಕನೋರ್ವ 34 ಸಾವಿರ ಕಳೆದುಕೊಂಡ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಪೂಜಾರಿ ಮನೆ ಲಿಖಿನ್ ಪಿ.ಟಿ. ಎಂಬ ಯುವಕ ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಜು. 17ರಂದು ಲಿಖಿನ್ ಅವರ ವಾಟ್ಸ್ ಪ್ ಗೆ ಹಣ ದ್ವಿಗುಣಗೊಳಿಸಿ ಕೊಡುತ್ತೇನೆಂದು...
Loading posts...
All posts loaded
No more posts
