ಮಂಡೆಕೋಲು ಜುಮಾ ಮಸ್ಜಿದ್ ನಲ್ಲಿ ಎಸ್ ಕೆ ಎಸ್ ಎಸ್ ಎಫ್ ವತಿಯಿಂದ ಸ್ವಾತಂತ್ರ ದಿನಾಚರಣೆ

ಮಂಡೆಕೋಲು ಜುಮ್ಮಾ ಮಸ್ಜಿದ್ ಆವರಣದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಅನ್ವರ್ ದಾರಿಮಿ ಅಜ್ಜಾವರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಮಾತ್ ಅಧ್ಯಕ್ಷ ನಾಸಿರ್ ಸಾಲೆಕರ್, ಸುನ್ನಿ ಮಹಲ್ ಫೆಡರೇಶನ್ ಅಧ್ಯಕ್ಷ ಹಾಜಿ ಇಬ್ರಾಹಿಂ ಕತ್ತರ್, ಎಸ್ಕೆಎಸ್ಸೆಸ್ಸೆಫ್ ಮಂಡೆಕೋಲು ಶಾಖಾ ಕೋಶಾಧಿಕಾರಿ ಸಮದ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ಸಂಪಾಜೆ ವಲಯ ಅರಣ್ಯ ಕಛೇರಿಯಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ

ಸಂಪಾಜೆ ವಲಯ ಅರಣ್ಯಧಿಕಾರಿಗಳ ಕಚೇರಿ ಯಲ್ಲಿ 74ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ವಲಯ ಅರಣ್ಯ ಅಧಿಕಾರಿ ಯಾದ ಮಧುಸೂದನ್ ಧ್ವಜಾರೋಹಣ ನಡೆಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
Ad Widget

ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಪೈಚಾರ್ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ರಿ ಪೈಚಾರ್ ಇದರ ವತಿಯಿಂದ 74 ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸ್ವಚ್ಚತಾ ಕಾರ್ಯಕ್ರಮವು ಪಿಎಮ್ ಕಾಂಪ್ಲೆಕ್ಸ್ ಮುಂಭಾಗದಲ್ಲಿ ನಡೆಯಿತು. ಧ್ವಜಾರೋಹಣವನ್ನು ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಇದರ ಗೌರವಧ್ಯಕ್ಷ ಶಾಫೀ ಪ್ರಗತಿಯವರು ನೇರವೆರಿಸಿ ಶುಭ ಸಂದೇಶ ವನ್ನು ನೀಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಅಸ್ತ್ರ ಸ್ಪೋರ್ಟ್ಸ್ ಕಾರ್ಯದರ್ಶಿ ಮುಜೀಬ್ ಪೈಚಾರ್ ಉದ್ಘಾಟಿಸಿ ಮಾತನಾಡಿದರು....

ಉಬರಡ್ಕ ಗ್ರಾಮ ಪಂಚಾಯತ್ ನಲ್ಲಿ 74 ನೇ ಸ್ವಾತಂತ್ರ್ಯೋತ್ಸವ

74ನೇ ಸ್ವಾತಂತ್ರ್ಯೋತ್ಸವವನ್ನು ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ನಲ್ಲಿ ಆಚರಿಸಲಾಯಿತು. ಧ್ವಜಾರೋಹಣವನ್ನು ಗ್ರಾಮದ ಹಿರಿಯರಾದ ಜವುರ ಕೋಡಿಯಡ್ಕ ಇವರು ನೆರವೇರಿಸದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಹರೀಶ್ ಉಬರಡ್ಕ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀ ವಿಧ್ಯಾಧರ ಕೆ.ಎನ್, ಗ್ರಾಮಸ್ಥರಾದ ಗಂಗಾಧರ ಕಂಬಳಿಮೂಲೆ, ಉಬರಡ್ಕ ಅಂಗನವಾಡಿ ಸಹಾಯಕಿ ಪ್ರೇಮಲತಾ ನೆಯ್ಯೋಣಿ ಹಾಗೂ ಗ್ರಾಮ...

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಬೆಳ್ಳಾರೆ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಬೆಳ್ಳಾರೆ ಶಾಖೆಯ ವತಿಯಿಂದ ದೇಶದ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ದಾರುಲ್ ಹಿಕ್ಮ ವಠಾರದಲ್ಲಿ ಆಚರಿಸಲಾಯಿತು.ದಾರುಲ್ ಹಿಕ್ಮ ಅಧ್ಯಕ್ಷರಾದ ಹಸನ್ ಸಖಾಫಿ ಬೆಳ್ಳಾರೆ ಧ್ವಜಾರೋಹಣಗೈದು ದುಆ ನೆರೆವೇರಿಸಿದರು.ಮುಹಮ್ಮದ್ ಶಮೀರ್ ನಈಮಿ ಪೆರುವಾಜೆ ಈ ಮಣ್ಣು ನಮ್ಮದು ಪ್ರಮೇಯ ಭಾಷಣಗೈದರು. ಯೂಸುಫ್ ಮುಸ್ಲಿಯಾರ್ ಬೆಳ್ಳಾರೆ ಆಶಂಸಗೈದರು. ಇರ್ಷಾದ್ ಮುಸ್ಲಿಯಾರ್...

ಸುಳ್ಯ ಮೆಸ್ಕಾಂ ಕಛೇರಿಯಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ

ಸುಳ್ಯ ಮೆಸ್ಕಾಂ ಕಛೇರಿಯಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಹಿರಿಯರಾದ ಆನೆಕಾರು ಗಣಪಯ್ಯ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ನವೀನ್ ರೈ, ಶೀಲಾವತಿ ಕುರುಂಜಿ, ಶೇಖರ ಮಣಿಯಾಣಿ, ರೋಹನ್ ಪೀಟರ್, ದಾಸಪ್ಪ , ಎಇಇ ಹರೀಶ್ ನಾಯ್ಕ್, ಜೆಇ ಸುರೇಶ್ ಭಟ್, ಜೆಇ ಬೋರಯ್ಯ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಎಸ್ ಡಿಪಿಐ ಸುಳ್ಯ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ನಗರ ಸಮಿತಿ ವತಿಯಿಂದ 74ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ದ್ವಜರೋಹಣ ಕಾರ್ಯಕ್ರಮವು ಪಕ್ಷದ ಕಛೇರಿ ಮುಂಭಾಗದಲ್ಲಿ ನಡೆಯಿತು.ಪಕ್ಷದ ಸುಳ್ಯ ವಿಧಾನಸಭಾದ್ಯಕ್ಷರಾದ ಅಬ್ದುಲ್ ಕಲಾಂ ಸುಳ್ಯ ದ್ವಜರೋಹಣ ನೆರವೇರಿಸಿದರು .ಈ ಸಂದರ್ಭದಲ್ಲಿ ಸುಳ್ಯ ವಿಧಾನಸಭಾ ಕಾರ್ಯದರ್ಶಿ ಮುಸ್ತಫ ಎಮ್ ಕೆ , ಪಾಪ್ಯೂಲರ್ ಫ್ರಂಟ್ ಸುಳ್ಯ ಡಿವಿಝನ್ ಅದ್ಯಕ್ಷರಾದ...

ಬೂಡು: ಪ್ರಕೃತಿ ಯುವ ಸೇವಾ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಸುಳ್ಯ ಹಾಗೂ ಪ್ರಕೃತಿ ಮಹಿಳಾ ಘಟಕ ಬೂಡು,ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ಪ್ರಪ್ರಥಮ ಭಾರಿಗೆ 74ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಧ್ವಜಾರೋಹಣವನ್ನು ಖ್ಯಾತ ನ್ಯಾಯವಾದಿ ಹಾಗೂ ಸಿಎ ಬ್ಯಾಂಕ್ ಇದರ ಅಧ್ಯಕ್ಷ ಹರೀಶ್ ಪನ್ನೆಬೀಡು ನೆರೆವೇರಿಸಿದರು. ಅತಿಥಿಗಳಾಗಿ ಧರ್ಮಸ್ಥಳ ಸ್ವಸಹಾಯ ಸಂಘದ ಕೇರ್ಪಳ ಒಕ್ಕೂಟ ಹಾಗೂ ಭಗವತಿ ಯುವ ಸೇವಾ ಸಂಘ...

ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ 74 ನೇ ಸ್ವಾತಂತ್ರೋತ್ಸವ

ಸಂಪಾಜೆ ಗ್ರಾಮ ಪಂಚಾಯತ್ ವಠಾರದಲ್ಲಿ 74 ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ನಾಗರಾಜ್ ನೆರವೇರಿಸಿದರು. ಕಲ್ಲುಗುಂಡಿ ಶಾಲಾ ದೈಹಿಕ ಶಿಕ್ಷಕ ಧನಂಜಯ ಮಾಸ್ಟರ್ ಪ್ರತಿಜ್ಞಾ ವಿಧಿ ಬೋಧಿಸಿದರು. ಭರತ್ ಸ್ವಾಗತಿಸಿ ಮಾಜಿ ಅಧ್ಯಕ್ಷ ಹಮೀದ್ ಜಿ. ಕೆ.ವಂದಿಸಿದರು ಕಾರ್ಯಕ್ರಮದಲ್ಲಿ ಉಮೇಶ್,ಹನೀಫ್ ಎಸ್.ಕೆ. ಮಧುರ. ಹಸೈನಾರ್, ಮೊಹಮದ್ ಕಾನಕೋಡ್ ರಾಜೇಶ್ ಉಪಸ್ಥಿತರಿದ್ದರು. ಈ...

ಮೆಸ್ಕಾಂ ಸುಬ್ರಹ್ಮಣ್ಯ ಶಾಖಾ ಕಛೇರಿಯಲ್ಲಿ 74ನೇ ಸ್ವಾತಂತ್ರೋತ್ಸವ

ಮೆಸ್ಕಾಂ ಸುಬ್ರಹ್ಮಣ್ಯ ಶಾಖಾ ಕಛೇರಿಯಲ್ಲಿ 74ನೇ ಸ್ವಾತಂತ್ರೋತ್ಸವ ಆಚರಿಸಲಾಯಿತು. ಇದರ ಅಂಗವಾಗಿ ಕಛೇರಿಯಲ್ಲಿ ದ್ವಜಾರೋಹಣವನ್ನು ಹಿರಿಯ ಪವರ್ ಮ್ಯಾನ್ ಪಾಲಾಕ್ಷಯ್ಯ ರವರು ನೆರವೇರಿಸಿದರು. ಶಾಖಾಧಿಕಾರಿ ಚಿದಾನಂದರವರು ಮತ್ತು ಎಲ್ಲಾ ಸಿಬ್ಬಂದಿಯವರು ಬಾಗವಹಿಸಿದರು..
Loading posts...

All posts loaded

No more posts

error: Content is protected !!