- Wednesday
- April 2nd, 2025

ಸುಳ್ಯದ ಕೆಲವು ಯುವಕರು ಮಾನವೀಯತೆ ಮೆರೆದು ಕಾಲ್ನಡಿಗೆಯಲ್ಲಿ ಹೊರಟಿದ್ದ ವ್ಯಕ್ತಿ ಅಸ್ವಸ್ಥಗೊಂಡು ಸುಳ್ಯದಲ್ಲಿ ಬಿದ್ದ ವ್ಯಕ್ತಿಯನ್ನು ಉಪಚರಿಸಿ ಸ್ವಗ್ರಾಮಕ್ಕೆ ತೆರಳಲು ವ್ಯವಸ್ಥೆ ಮಾಡಿದ ಘಟನೆ ಮೇ ೧೭ ನಡೆದಿದೆ. ಮಂಗಳೂರಿನ ಕಟೀಲು ನಿವಾಸಿ ನಾರಾಯಣ ರೈ ಯವರು ಮಡಿಕೇರಿಯಲ್ಲಿ ಕೂಲಿ ಕಾರ್ಮಿಕರಾಗಿದ್ದರು. ದೇಶದಾದ್ಯಂತ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಕೆಲಸ ಇಲ್ಲದೆ ಇತ್ತ ಊರಿಗೂ ತೆರಳಲಾಗದೆ...

ಕೂತ್ಕುಂಜ ಗ್ರಾಮದ ನಾಯರ್ ಕೆರೆ ಪಂಜ ಖಾಸಗಿ ಬಸ್ ನಿಲ್ದಾಣದಲ್ಲಿ ಅಮರ ಸುದ್ದಿ ಪತ್ರಿಕೆ ಏಜೆಂಟರಾಗಿದ್ದ ಜೆರಾಲ್ಡ್ ಡಿಸೋಜ ರ ಏಕೈಕ ಪುತ್ರ ಸಂತೋಷ್ ಡಿಸೋಜ (20) ಅಸೌಖ್ಯದಿಂದ ಮೇ.೧೭ ರಂದು ನಿಧನರಾದರು. ಅನಾರೋಗ್ಯಕ್ಕೊಳಗಾಗಿದ್ದ ಸಂತೋಷ್ ನನ್ನು ಪುತ್ತೂರಿನ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟರೆಂದು ತಿಳಿದುಬಂದಿದೆ. ತಂದೆ, ತಾಯಿ ಫಿಲೋಮಿನಾ ರನ್ನುಅಗಲಿದ್ದಾರೆ.

ಮಾವಿನಕಟ್ಟೆ ಅಚ್ರಪ್ಪಾಡಿ ಹೆಚ್ ಟಿ ವಿದ್ಯುತ್ ಲೈನ್ ಗೆ ತಾಗಿರುವ ಮರದ ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯ ಇಂದು ನಡೆಯಿತು. ಇಲಾಖೆಯ ಜತೆ ಊರವರು ಟ್ರೀಕಟ್ಟಿಂಗ್ ಗೆ ಸಾಥ್ ನೀಡಿದರು. ಇಂತಹ ಕಾರ್ಯ ಎಲ್ಲೇಡೆ ಆದ್ರೆ ನಿರಂತರ ವಿದ್ಯುತ್ ನೀಡಲು ಇಲಾಖೆಗೆ ಸಹಕಾರಿಯಾಗಲಿದೆ . ಈ ಸಂದರ್ಭದಲ್ಲಿ ಮೆಸ್ಕಾಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ದೇಶದ ಜನ ಕೊರೊನ ಹೆಮ್ಮಾರಿಯಿಂದ ಸಂಪೂರ್ಣ ಹೈರಣಾಗಿ ಹೋಗಿದ್ದಾರೆ. ಈ ಕಾಲದಲ್ಲಿ ಜನ ಸಾಮಾನ್ಯನಿಗೆ ಸಹಾಯ ಮಾಡಬೇಕಾದ ಸರಕಾರಗಳು ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಬೇಕಿತ್ತು. ಆದರೆ ಇವತ್ತು ನಮ್ಮ ದೇಶದಲ್ಲಿ ಏನಾಗಿದೆಯೆಂದರೇ ಲಾಕ್ ಡೌನ್ ಮೊದಲು ಒಂದು ಡಾಲರ್ ಕ್ರೂಡ್ ಆಯಿಲ್ ಗೆ 31.02 ಡಾಲರ್ ಇತ್ತು ಆಗ ಪೆಟ್ರೋಲ್ ಗೆ ಲೀಟರ್ ಒಂದಕ್ಕೆ...

ಕೊರೊನ ವೈರಸ್ ಭೀತಿಯಿಂದ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ 6012 ಗ್ರಾಮ ಪಂಚಾಯತ್ ಗಳಿದ್ದು ಇದರಲ್ಲಿ ಕೆಲವು ಪಂಚಾಯತ್ ಗಳನ್ನು ಹೊರತುಪಡಿಸಿ ಉಳಿದ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರದ ಅವಧಿ ಜೂನ್ -ಜುಲೈರೊಳಗೆ ಅಂತ್ಯಗೊಳ್ಳಲಿದೆ. ಆದರೆ ಕೊರೊನ...

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಕೋವಿಡ್-19 ಪರಿಹಾರ ಪ್ಯಾಕೇಜ್ ಆಗಿ ರೂ.5000 ಘೋಷಣೆ ಮಾಡಿದ್ದರು. ಇಂತಹ ಪರಿಹಾರದ ಹಣವನ್ನು ಹೇಗೆ ಪಡೆಯಬೇಕು ಎಂಬುದೇ ರಾಜ್ಯದ ಅನೇಕ ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರ ಪ್ರಶ್ನೆಯಾಗಿತ್ತು. ಇದೀಗ ಆ ಪ್ರಶ್ನೆ, ಗೊಂದಲಕ್ಕೆ ರಾಜ್ಯ ಸರ್ಕಾರ ತೆರೆ...

ಲಾಕ್ ಡೌನ್ ಅವಧಿಯಲ್ಲಿ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಸಂಚರಿಸಿದ ಪಾಸ್ ಇಲ್ಲದ ವಾಹಗಳನ್ನು ಪೋಲೀಸ್ ಇಲಾಖೆ ವಶಪಡಿಸಿಕೊಂಡಿತ್ತು. ರಾಜ್ಯಾದ್ಯಂತ ಸುಮಾರು ೫೦ ಸಾವಿರ ವಾಹನಗಳನ್ನು ಸೀಜ್ ಮಾಡಲಾಗಿತ್ತು.ಲಾಕ್ ಡೌನ್ ಸಡಿಲಗೊಂಡ ಬಳಿಕ ಸೂಕ್ತ ದಾಖಲೆ ನೀಡಿ ವಾಹನಗಳನ್ನು ಪಡೆದುಕೊಳ್ಳಲು ಸೂಚಿಸಿತ್ತು. ಆದರೇ ಇನ್ನೂ ಸುಮಾರು ೮೦೦೦ ವಾಹನಗಳ ಮಾಲಕರು ಬಾರದೇ ಪೋಲಿಸ್ ಠಾಣೆಯಲ್ಲಿ...

14 ವರ್ಷಗಳ ಹಿಂದೆ ಆರಂಭಗೊಂಡ ಕಾಮಗಾರಿ ಪೂರ್ಣಗೊಂಡು ಮೇ ೧೬ ಪ್ರಾಯೋಗಿಕ ಚಾಲನೆ ನೀಡಲಾಯಿತು. ಶಾಸಕ ಎಸ್. ಅಂಗಾರ ಬ್ರೇಕರ್ ಆನ್ ಮಾಡಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಳಿಯ ಕೇಶವ ಭಟ್, ರಾಕೇಶ್ ರೈ ಕೆಡೆಂಜಿ, ಬಳಕೆದಾರರ ವೇದಿಕೆ ಸಂಚಾಲಕ ಜಯಪ್ರಸಾದ್ ಜೋಶಿ ಬೆಳ್ಳಾರೆ ಹಾಗೂ ಮೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.ದಶಕಗಳ ಹಿಂದಿನ ಬೇಡಿಕೆಯಾದ ಮಾಡಾವು 110...

ಕೊರೊನಾ ವೈರಸ್ ಹೋಗಲಾಡಿಸಲು ವಿಧಿಸಿದ್ದ ಲಾಕ್‍ಡೌನ್ ಅನ್ನು ಸರಕಾರ ಕೆಲ ನಿಯಮವನ್ನು ಜಾರಿಗೆ ತರುವ ಮೂಲಕ ಹಂತ ಹಂತವಾಗಿ ಸಡಿಲಗೊಳಿಸುತ್ತಿದೆ. ಇದರ ಭಾಗವಾಗಿ ಮದುವೆ ಸಮಾರಂಭಗಳಿಗೂ ಕೆಲ ನಿಯಮಗಳನ್ನು ಸರ್ಕಾರ ಜಾರಿಗೆ ತಂದಿದ್ದು, ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.ವೈರಸ್ ತಡೆಗಟ್ಟುವ ಸಲುವಾಗಿ ಮುಂಜಾಗೃತಾ ಕ್ರಮಕ್ಕಾಗಿ ಸರ್ಕಾರ...

All posts loaded
No more posts