Ad Widget

ಫೆ.12- ಫೆ.18: ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ

ಎಡಮಂಗಲ ಗ್ರಾಮದ ಕಾರಣೀಕ ಕ್ಷೇತ್ರ ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿಪೂರ್ವಾಶಿಷ್ಟ ಸಂಪ್ರದಾಯ ಪ್ರಕಾರ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿಐದು ದಿವಸಗಳ ಉತ್ಸವಾದಿಗಳು ಸೇರಿದಂತೆ ವಾರ್ಷಿಕ ಜಾತ್ರೋತ್ಸವವು ಫೆ.12ರಿಂದ ಫೆ.18ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಜಾತ್ರೋತ್ಸವದ ಪ್ರಯುಕ್ತ ಫೆ.12 ಶನಿವಾರದಂದು ರಾತ್ರಿ 8.00ಕ್ಕೆ ಧ್ವಜಾರೋಹಣ ನಡೆಯಲಿದ್ದು ನಂತರ ಬಲಿ ಹೊರಟು ಉತ್ಸವ,...

ಪಂಜ: ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ದೇವಳದಲ್ಲಿ ದೀಪೋತ್ಸವ, ದೈವಗಳ ನರ್ತನ ಸೇವೆ, ಯಕ್ಷಗಾನ ಬಯಲಾಟ

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದ್ದು ಇಂದು(ಫೆ.05) ಬೆಳಗ್ಗೆ ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆದು ರಾತ್ರಿ ದೇವಳದಲ್ಲಿ ದೀಪೋತ್ಸವ, ಮಹಾಪೂಜೆ ನಡೆಯಿತು. ಬಳಿಕ ಶ್ರೀ ದೇವರ ಬಲಿ ಹೊರಟು ವಸಂತಕಟ್ಟೆ ಪೂಜೆ, ಕಾಜುಕುಜುಂಬ ಹಾಗೂ ಶಿರಾಡಿ ದೈವಗಳ ನರ್ತನ ಸೇವೆ ನಡೆದು ಶ್ರೀ ದೇವರ ಉತ್ಸವ...
Ad Widget

ಕಾಂಚೋಡು ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಟಾ ವಾರ್ಷಿಕೋತ್ಸವ ಹಾಗೂ ಅಣ್ಣಪ್ಪಾದಿ ದೈವಗಳ ನೇಮೋತ್ಸವವು ಫೆ.11ರಿಂದ ಫೆ.14ರ ತನಕ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಇಂದು (ಫೆ.04) ದೇವಾಲಯದಲ್ಲಿ ಪೂರ್ವಾಹ್ನ ದೇವತಾ ಪ್ರಾರ್ಥನೆ ನಡೆಸಿ ನಂತರ ಗೊನೆ ಮುಹೂರ್ತ ಕಾರ್ಯಕ್ರಮ ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ದೇವಾಲಯದ ಧರ್ಮದರ್ಶಿಗಳಾದ ಪರಮೇಶ್ವರಯ್ಯ ಕಾಂಚೋಡು, ಪರಶುರಾಮ ಕಾಯಾರ ದೊಡ್ಡಮನೆ, ಶ್ರೀ ಕ್ಷೇತ್ರದ ಅರ್ಚಕರಾದ...

ನೆಟ್ಟಾರು ಕಿನ್ನಿಮಜಲು ಶ್ರೀ ಸ್ವಾಮಿ ಕೊರಗಜ್ಜ ಸಾನ್ನಿಧ್ಯದಲ್ಲಿ ವಾರ್ಷಿಕ ಕೋಲೋತ್ಸವ, ಸಾಧಕರಿಗೆ ಸನ್ಮಾನ

ನೆಟ್ಟಾರು ಕಿನ್ನಿಮಜಲು ಶ್ರೀ ಸ್ವಾಮಿ ಕೊರಗಜ್ಜ ಸಾನಿಧ್ಯದಲ್ಲಿ ಘಂಟೆ ತೆಂಬೆರೆಯಲ್ಲಿ ಶ್ರೀ ಕೊರಗಜ್ಜ ದೈವದ ಕೋಲೋತ್ಸವವು ಫೆ.03 ಗುರುವಾರದಂದು ನಡೆಯಿತು. ವಾರ್ಷಿಕ ಕೋಲೋತ್ಸವದ ಅಂಗವಾಗಿ ಸಂಜೆ ಭಜನಾ ಸಂಕೀರ್ತಣೆ ನಡೆದು ನಂತರ ಕಲ್ಲುರ್ಟಿ-ಮಂತ್ರದೇವತೆ ಹಾಗೂ ಗುಳಿಗನಿಗೆ ಪರ್ವ ಮತ್ತು ಕಲ್ಲುರ್ಟಿ ದರ್ಶನ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಿನ್ನಿಮಜಲು ಹೇಮಂತ್...

ಫೆ.11- ಫೆ.14: ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ, ಅಣ್ಣಪ್ಪಾದಿ ದೈವಗಳ ನೇಮ
ಮಾ.01ರಂದು ಮಹಾಶಿವರಾತ್ರಿ ಉತ್ಸವ

ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಕಾರ್ಯಕ್ರಮವು ಫೆ.11 ಶುಕ್ರವಾರದಂದು ಆರಂಭಗೊಳ್ಳಲಿದ್ದು, ಫೆ.14 ಸೋಮವಾರದ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಫೆ.11 ಶುಕ್ರವಾರದಂದು ಸಂಜೆ ಗಂಟೆ 4.30ಕ್ಕೆ ತಂತ್ರಿಗಳವರ ಆಗಮನ, ಸಂಜೆ ಗಂಟೆ 5.00ಕ್ಕೆ ಊರ ಭಕ್ತಾದಿಗಳಿಂದ ಬಾಳಿಲದಿಂದ ಮೆರವಣಿಗೆ ಮೂಲಕ ಶ್ರೀ ದೇವಳಕ್ಕೆ ಹಸಿರು...

ಐವರ್ನಾಡು: ಶ್ರೀ ಪಂಚಲಿಂಗೇಶ್ವರ ದೇವಾಲಯದ ಜಾತ್ರೋತ್ಸವದ ಪ್ರಯುಕ್ತ ಗೊನೆ ಮೂಹೂರ್ತ

ಐವರ್ನಾಡಿನ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರತಿಷ್ಟಾ ವಾರ್ಷಿಕೋತ್ಸವವು ಫೆ.8 ರಿಂದ ಫೆ.10 ರವರೆಗೆ ನಡೆಯಲಿದೆ. ಆ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮವು ಫೆ.2 ರಂದು ಬೆಳಗ್ಗೆ ಗಂಟೆ 10.00ಕ್ಕೆ ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ ಮಡ್ತಿಲ, ವೈದಿಕ ಮುಖ್ಯಸ್ಥರಾದ ರಾಜಾರಾಮ ರಾವ್ ಉದ್ದಂಪ್ಪಾಡಿ, ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಸ್.ಎನ್ ಮನ್ಮಥ, ದೇವಸ್ಥಾನದ...

ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಕೊಳ್ಳಿ ಮುಹೂರ್ತ

ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.19ರಂದು ಜರುಗಲಿದ್ದು, ಇದರ ಪೂರ್ವಭಾವಿಯಾಗಿ ಕೊಳ್ಳಿ ಮುಹೂರ್ತ ಕಾರ್ಯಕ್ರಮವು ಫೆ.01ರಂದು ನಡೆಯಿತು. ಈ ಸಂದರ್ಭದಲ್ಲಿ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಗವದ್ಭಕ್ತರು ಉಪಸ್ಥಿತರಿದ್ದರು.

ಇಂದಿನಿಂದ ಕುಕ್ಕೆಸುಬ್ರಹ್ಮಣ್ಯದಲ್ಲಿ ಸೇವೆಗಳು ಪುನರಾರಂಭ

ದ.ಕ.ಜಿಲ್ಲಾಧಿಕಾರಿಗಳ ಆದೇಶದಂತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲಾ ಪೂಜೆ,ಹಾಗೂ ಸೇವೆಗಳಿಗೆ ಅನುಮತಿ ನೀಡಿದೆ. ಭಕ್ತಾದಿಗಳು ಕೋವಿಡ್ ನಿಯಮ ಪಾಲನೆಯೊಂದಿಗೆ ದೇವರ ಸೇವೆಗಳಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.01(ನಾಳೆ): ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಕೊಳ್ಳಿ ಮುಹೂರ್ತ

ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.19ರಂದು ಜರುಗಲಿದ್ದು, ಇದರ ಪೂರ್ವಭಾವಿಯಾಗಿ ಕೊಳ್ಳಿ ಮುಹೂರ್ತ ಕಾರ್ಯಕ್ರಮವು ಫೆ.01(ನಾಳೆ) ರಂದು ನಡೆಯಲಿದೆ. ಕೊಳ್ಳಿ ಮುಹೂರ್ತ ಕಾರ್ಯಕ್ರಮವು ಬೆಳಗ್ಗೆ ಗಂಟೆ 10.00ಕ್ಕೆ ಸರಿಯಾಗಿ ನಡೆಯಲಿದ್ದು ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಳಂಜ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷರಾದ ಲಕ್ಷ್ಮೀಶ ರೈ ಗುರಿಕ್ಕಾನ ವಿನಂತಿಸಿದ್ದಾರೆ.

ಕುಲ್ಕುಂದ : ಶ್ರೀ ಮಹಾವಿಷ್ಣುಮೂರ್ತಿ ಒತ್ತೆಕೋಲದ ಆಮಂತ್ರಣ ಬಿಡುಗಡೆ

ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಕುಲ್ಕುಂದ ಇದರ 53ನೇ ವರ್ಷದ ಒತ್ತೆಕೋಲದ ಆಮಂತ್ರಣ ಪತ್ರಿಕೆಯನ್ನು ಜ.29 ರಂದು ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಕುಲ್ಕುಂದ ಇದರ ಅದ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಹಾಗೂ ಜೀರ್ಣೋದ್ಧಾರ ಸಮಿತಿಯ ಸದಸ್ಯರು ಸೇರಿದಂತೆ ಊರ ಪರವೂರ ಭಕ್ತರು ಉಪಸ್ಥಿತರಿದ್ದರು.ವರದಿ :- ಉಲ್ಲಾಸ್ ಕಜ್ಜೋಡಿ
Loading posts...

All posts loaded

No more posts

error: Content is protected !!