Ad Widget

ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಕೊಳ್ಳಿ ಮುಹೂರ್ತ

ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.19ರಂದು ಜರುಗಲಿದ್ದು, ಇದರ ಪೂರ್ವಭಾವಿಯಾಗಿ ಕೊಳ್ಳಿ ಮುಹೂರ್ತ ಕಾರ್ಯಕ್ರಮವು ಇಂದು (ಫೆ.01ರಂದು) ನಡೆಯಿತು. ಈ ಸಂದರ್ಭದಲ್ಲಿ ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟಿನ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಭಗವದ್ಭಕ್ತರು ಉಪಸ್ಥಿತರಿದ್ದರು.

ಫೆ.01: ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಕೊಳ್ಳಿ ಮುಹೂರ್ತ

ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.19ರಂದು ಜರುಗಲಿದ್ದು, ಇದರ ಪೂರ್ವಭಾವಿಯಾಗಿ ಕೊಳ್ಳಿ ಮುಹೂರ್ತ ಕಾರ್ಯಕ್ರಮವು ಫೆ.01 ಗುರುವಾರದಂದು ನಡೆಯಲಿದೆ. ಕೊಳ್ಳಿ ಮುಹೂರ್ತ ಕಾರ್ಯಕ್ರಮವು ಬೆಳಗ್ಗೆ ಗಂಟೆ 10.00ಕ್ಕೆ ಸರಿಯಾಗಿ ನಡೆಯಲಿದ್ದು, ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಳಂಜ ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟಿನ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ವಿನಂತಿಸಿದ್ದಾರೆ.
Ad Widget

ವಿಜೃಂಭಣೆಯಿಂದ ಜರುಗಿದ ಇತಿಹಾಸ ಪ್ರಸಿದ್ಧ ಅಯ್ಯನಕಟ್ಟೆ ಜಾತ್ರೋತ್ಸವ ಸಂಪನ್ನ

ಇತಿಹಾಸ ಪ್ರಸಿದ್ಧ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿ ಜ.29ರಂದು ಸಂಪನ್ನಗೊಂಡಿತು. ಜಾತ್ರೋತ್ಸವವು ಜ.26ರಂದು ಮೊದಲ್ಗೊಂಡಿದ್ದು, ಬೆಳಿಗ್ಗೆ ಕಳಂಜ ಗ್ರಾಮದ ತಂಟೆಪ್ಪಾಡಿ ಶ್ರೀ ಶಿರಾಡಿ ದೈವದ ಸನ್ನಿಧಿಯಲ್ಲಿ ಗಣಪತಿ ಹವನ, ನಾಗತಂಬಿಲ, ವಿಶೇಷ ತಂಬಿಲ ನಡೆಯಿತು. ಬಾಳಿಲ ಗ್ರಾಮದ ಮೂರುಕಲ್ಲಡ್ಕದಲ್ಲಿ ಬೆಳಿಗ್ಗೆ ಗಂಟೆ 11 ರಿಂದ ನಾಗತಂಬಿಲ,...

ಇತಿಹಾಸ ಪ್ರಸಿದ್ಧ ಅಯ್ಯನಕಟ್ಟೆ ಜಾತ್ರೆ: ಧಾರ್ಮಿಕ ಸಭಾ ಕಾರ್ಯಕ್ರಮ

ಇತಿಹಾಸ ಪ್ರಸಿದ್ಧ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವ ಅತ್ಯಂತ ವೈಭವದಿಂದ ಜರುಗುತ್ತಿದ್ದು, ಜ.28ರಂದು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿಯ ಅಧ್ಯಕ್ಷ ಚೆನ್ನಪ್ಪ ಗೌಡ ಕಜೆಮೂಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ವಿಶ್ರಾಂತ ಅಧ್ಯಾಪಕರಾದ ಸದಾಶಿವ ಭಟ್ ಜೋಗಿಬೆಟ್ಟು ಭಾಗವಹಿಸಿದ್ದರು. ಮುಖ್ಯ ಅತಿಥಿಯಾಗಿ...

ಇತಿಹಾಸ ಪ್ರಸಿದ್ಧ ಅಯ್ಯನಕಟ್ಟೆ ಜಾತ್ರೆ: ಶ್ರೀ ಇಷ್ಟದೇವತಾ ಉಳ್ಳಾಕುಲು ದೈವದ ನೇಮೋತ್ಸವ

ಜ. 28ರಂದು ಬೆಳಗ್ಗೆ ಮೂರುಕಲ್ಲಡ್ಕ ದೈವಸ್ಥಾನದಿಂದ ಸಪರಿವಾರ ಶ್ರೀ ಇಷ್ಟದೇವತಾ ಉಳ್ಳಾಕುಲು ದೈವಗಳ ಕಿರುವಾಲು, ತೋಟದ ಮೂಲೆ ಸ್ಥಾನದಿಂದ ರುದ್ರಚಾಮುಂಡಿ ದೈವದ ಕಿರುವಾಲು ಹೊರಡುವ ಕಾರ್ಯಕ್ರಮ ನೆರವೇರಿತು. ಬಳಿಕ ಕಳಂಜ ಗ್ರಾಮದ ಕಲ್ಲಮಾಡದಲ್ಲಿ ಶ್ರೀ ಉಳ್ಳಾಕುಲು ದೈವದ ಸಿರಿಮುಡಿ ಏರುವುದು, ನರ್ತನ ಸೇವೆ, ಬಟ್ಟಲು ಕಾಣಿಕೆ, ಸಿರಿಮುಡಿ ಗಂಧಪ್ರಸಾದ ವಿತರಣೆ ನಡೆಯಿತು. ಬಳಿಕ ಪರಿವಾರ ದೈವಗಳಾದ...

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭ

ಇಂದು ಸಂಜೆ ಜಾತ್ರೋತ್ಸವಕ್ಕೆ ವೈಭವದ ಹಸಿರುವಾಣಿ ಸಮರ್ಪಣೆ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಮೂರುಕಲ್ಲಡ್ಕ ಮತ್ತು ಅಯ್ಯನಕಟ್ಟೆ ಜಾತ್ರೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವ ಇಂದು ಆರಂಭಗೊಂಡಿದ್ದು, ಜ. 29ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ. ಇಂದು(ಜ. 26) ಬೆಳಿಗ್ಗೆ ಕಳಂಜ...

ಹೂವುಗಳ ರಾಶಿಯಲ್ಲಿ ಕಂಗೊಳಿಸಿದ ಜಲದುರ್ಗಾದೇವಿ – ಪ್ರತಿ ವರ್ಷ ಹೂವಿನ ಅಲಂಕಾರ ಮಾಡುತ್ತಿರುವ ಪೆರುವಾಜೆಯ ಭಕ್ತ ಉಮೇಶ್‌ ಕೊಟ್ಟೆಕಾೖ

ಪೆರುವಾಜೆ : ವಾರ್ಷಿಕ ಜಾತ್ರೆ ಮತ್ತು ಬ್ರಹ್ಮರಥೋತ್ಸವದ ಸಂಭ್ರಮದ ವೇಳೆ ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯ ಹೂವಿನ ರಾಶಿ ಹೊದ್ದು ಭಕ್ತ ಸಮೂಹದ ಗಮನ ಸೆಳೆಯಿತು..! ಗರ್ಭಗುಡಿ, ಗಣಪತಿ ಗುಡಿ, ಒಳಾಂಗಣ, ಹೊರಾಂಗಣ ಗೋಡೆಗಳು, ಛಾವಣಿ ಹೀಗೆ ದೇವಾಲಯದ ಎಲ್ಲ ಭಾಗಗಳೂ ಬಣ್ಣ- ಬಣ್ಣದ, ಬಗೆ-ಬಗೆ ಹೂವುಗಳು ನಳನಳಿಸಿ ಅಬ್ಬಾ..ಅಬ್ಬಾ....

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಪ್ರಯುಕ್ತ ಕೋಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಪ್ರಯುಕ್ತ ಕಳಂಜ ಗ್ರಾಮದ ಕೋಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಅಯೋಧ್ಯೆ ಕರಸೇವಕರಾದ ವಾರಣಾಶಿ ಗೋಪಾಲಕೃಷ್ಣ ಹಾಗೂ ಅಶೋಕ್ ಕೆದಿಲ ಅಯೋಧ್ಯೆಯಲ್ಲಿ ತಮ್ಮ ಕರಸೇವೆಯ ಅನುಭವದ ಸಿಹಿ ನೆನಪುಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಪ್ರಮುಖರು, ಅರ್ಚಕರು ಹಾಗೂ ಭಕ್ತರು...

ಕಳಂಜ : ರಾಮಲಲ್ಲಾ ಪ್ರಾಣಪ್ರತಿಷ್ಠೆ ಅಂಗವಾಗಿ ಭಜನಾ ಕಾರ್ಯಕ್ರಮ

ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ಹಾಗೂ ಮಂದಿರ ಲೋಕಾರ್ಪಣೆ ಪ್ರಯುಕ್ತ ಇಂದು ಕಳಂಜ ವಿಷ್ಣುನಗರದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಭ್ರಾಮರಿ ಭಜನಾ ತಂಡ ತಂಟೆಪ್ಪಾಡಿ ಇವರಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. ಎಲ್.ಇ.ಡಿ. ಪರದೆಯ ಮೂಲಕ ಅಯೋಧ್ಯೆಯ ಕಾರ್ಯಕ್ರಮದ ನೇರಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ನೂರಾರು ಮಂದಿ ಭಾಗವಹಿಸಿದ್ದರು.

ಅಯ್ಯನಕಟ್ಟೆ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ ಹಾಗೂ ಉಗ್ರಾಣ ಮುಹೂರ್ತ

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಮೂರುಕಲ್ಲಡ್ಕ ಮತ್ತು ಅಯ್ಯನಕಟ್ಟೆ ಜಾತ್ರೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವ ಜ.26ರಿಂದ ಜ.29ರ ವರೆಗೆ ವಿಜೃಂಭಣೆಯಿಂದ ಜರಗಲಿದ್ದು, ಇದರ ಪೂರ್ವಭಾವಿಯಾಗಿ ಜ. 20ರಂದು ಮೂರುಕಲ್ಲಡ್ಕದಲ್ಲಿ ಉಗ್ರಾಣ ಮುಹೂರ್ತ ಮತ್ತು ಗೊನೆ ಮುಹೂರ್ತ ನಡೆಯಿತು. ಪ್ರಧಾನ ದೈವದ ಪಾತ್ರಿ ಲಕ್ಷ್ಮಣ ಗೌಡ...
Loading posts...

All posts loaded

No more posts

error: Content is protected !!