- Saturday
- March 7th, 2026
ಸುಬ್ರಹ್ಮಣ್ಯ : ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾ ಷಷ್ಠಿ ಜಾತ್ರಾ ಮಹೋತ್ಸವದ ಸಿದ್ಧತೆಗಳ ಬಗ್ಗೆ ಪೂರ್ವಭಾವಿ ಸಭೆಯು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆಯಲ್ಲಿ ನಾಳೆ(ನ.05) ಶ್ರೀ ದೇವಳದ ಸಭಾಂಗಣದಲ್ಲಿ ನಡೆಯಲಿದೆ.ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು,...
ಅಮರ ಸುಳ್ಯದ ಶಿಲ್ಪಿ ಶಿಕ್ಷಣ ಕ್ರಾಂತಿಯ ಹರಿಕಾರ ದಿ| ಕುರುಂಜಿ ವೆಂಕಟ್ರಮಣ ಗೌಡರ ಪುತ್ರ ಡಾ| ಕೆ.ವಿ ರೇಣುಕಾ ಪ್ರಸಾದ್ ದಂಪತಿಗಳಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ನ.10 ಬೆಳ್ಳಿರಥ ಸಮರ್ಪಣೆಯಾಗಲಿದ್ದು, ಈ ಬೆಳ್ಳಿ ರಥವು ರಥಶಿಲ್ಪಿ ಜಕಣಾಚಾರಿ ಪ್ರಶಸ್ತಿ ಪುರಸ್ಕೃತರಾದ ಕೋಟೇಶ್ವರ ಬಿ.ಲಕ್ಷ್ಮಿನಾರಾಯಣ ಆಚಾರ್ಯರು ಹಾಗೂ ಅವರ ಪುತ್ರರಾದ ರಾಜಗೋಪಾಲ ಆಚಾರ್ಯರಿಂದ ನಿರ್ಮಾಣಗೊಂಡಿದ್ದು, ರಥ...
ಸುಬ್ರಹ್ಮಣ್ಯ ನವಂಬರ್ 02 : ನಾಗರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಶುದ್ಧ ಏಕಾದಶಿ ಆದರೂ ದೂರ ದೂರಗಳಿಂದ ಶ್ರೀ ದೇವರ ದರ್ಶನಕ್ಕೆ ಬಂದ ಭಕ್ತರೇ ಅಧಿಕವಾಗಿದ್ದರು. ಬೆಳಿಗ್ಗೆ ಕುಮಾರಧಾರ ಸ್ನಾನಘಟ್ಟದ ಬಳಿ ಬೆಳಗ್ಗಿನ ಜಾವ ತೀರ್ಥ ಸ್ಥಾನ ಮಾಡಲು ಭಕ್ತರ ದಂಡೆ ಇತ್ತು. ಶ್ರೀ ದೇವಳದ ವತಿಯಿಂದ ತೀರ್ಥ ಸ್ಥಾನ ಮಾಡುವ ಮಹಿಳೆಯರಿಗೆ ಶೌಚಾಲಯದ...
ಸುಬ್ರಹ್ಮಣ್ಯ ನ.02 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸುಳ್ಯದ ಕುರುಂಜಿ ಡಾ.ರೇಣುಕಾ ಪ್ರಸಾದ್ ಕುಟುಂಬದವರು ನೀಡಲಿರುವ ಬೆಳ್ಳಿ ರಥವು 05ರಂದು ಶ್ರೀ ಕ್ಷೇತ್ರಕ್ಕೆ ಆಗಮಿಸಲಿದ್ದು, ಅದನ್ನು ಸ್ವಾಗತಿಸಲು ಸುಬ್ರಹ್ಮಣ್ಯ ಒಕ್ಕಲಿಗ ಗೌಡ ಗ್ರಾಮ ಸಮಿತಿ ವತಿಯಿಂದ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನವೆಂಬರ್ 01 ರಂದು ನಡೆದ ಸಭೆಯ ಅಧ್ಯಕ್ಷತೆಯನ್ನು...
ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಜಗದೀಶ್ ಪಡ್ಪು ಆಯ್ಕೆ ಆಗಿದ್ದಾರೆ ಎಂದು ತಿಳಿದುಬಂದಿದೆ.ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಲಕ್ಷ್ಮೀಶ ಗಬ್ಲಡ್ಕ ರವರ ಉಪಸ್ಥಿತಿಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಸಮಿತಿಯ ಸದಸ್ಯರಾದ ಬೆಳ್ಯಪ್ಪ ಖಂಡಿಗೆ ರವರು ಜಗದೀಶ್ ರವರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿ ಗುಣವರ್ಧನ ಕೆದಿಲ...
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಒಳಾಂಗಣದ 4 ಸುತ್ತು ಮೇಲ್ಚಾವಣಿ ಮಾಡಲು ಇಂದು ಶ್ರೀ ದೇವರಲ್ಲಿ ಪ್ರಾರ್ಥನೆ ಮಾಡಿ ದೇವರ ಅನುಗ್ರಹ ಪಡೆದು ಮುಹೂರ್ತ ಮಾಡಲಾಯಿತು. ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ.ದೇವಿ ಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸಂತೋಷ್ ಕುಮಾರ್ ರೈ ಪಲ್ಲತಡ್ಕ, ಧರ್ಮಪಾಲ ಗೌಡ ಮರಕ್ಕಡ, ಧರ್ಮಣ್ಣ ನಾಯ್ಕ್ಕ...
ಪಂಜ ಕರಿಕಳ ಸಮೀಪದ ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಸಾಮೂಹಿಕ ಶ್ರೀ ಮಹಾವಿಷ್ಣು ಮಹಾಯಾಗವು ನವೆಂಬರ್ 05 ಬುಧವಾರದಂದು ನಡೆಯಲಿದ್ದು, ಅದರ ಆಮಂತ್ರಣ ಪತ್ರಿಕೆಯನ್ನು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಷ್ಟ್ರಾಧ್ಯಕ್ಷ ಚಿತ್ರ ಕುಮಾರ್ ಅವರು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಡಾ.ರವಿ ಕಕ್ಕೆಪದವು, ಸುಬ್ರಹ್ಮಣ್ಯ ಕುಕ್ಕೆಶ್ರೀ ಸೀನಿಯರ್ ಚೇಂಬರ್ ನ ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ, ಅಧ್ಯಕ್ಷ ವೆಂಕಟೇಶ್...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವತಿಯಿಂದ 21ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ಅಕ್ಟೋಬರ್ 26 ರಂದು ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆಯಿತು. ಯೋಜನೆಯ ಅಜ್ಜಾವರ ವಲಯಕ್ಕೆ ಸಂಬಂಧಿಸಿದ ಮಂಡೆಕೋಲು ಗ್ರಾಮದ ನಾಲ್ಕು ಒಕ್ಕೂಟಗಳಾದ ಮಂಡೆಕೋಲು, ಕಲ್ಲಡ್ಕ-ಪೆರಾಜೆ, ಪೇರಾಲು ಹಾಗೂ ಪೇರಾಲು-ಅಂಬ್ರೋಟಿ-ಎ ಒಕ್ಕೂಟಗಳ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. ...
ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನವೆಂಬರ್ 05 ಬುಧವಾರದಂದು ಬೆಳಗ್ಗೆ 8:30ರಿಂದ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀಮಹಾವಿಷ್ಣು ಮಹಾಯಾಗ ನಡೆಯಲಿದೆ.ಋಷಿ ಪರಂಪರೆಯ ಸನಾತನ ಹಿಂದೂ ಧರ್ಮದ ಉಳಿವಿಗಾಗಿ, ಲೋಕಕಲ್ಯಾಣಾರ್ಥವಾಗಿ ಹಾಗೂ 2026ನೇ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಶ್ರೀ ದೇವರ ಪುನಃಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಹಾಗೂ ನೂತನ ದೇವಾಲಯದ ಲೋಕಾರ್ಪಣೆಯ ಪೂರ್ವಭಾವಿಯಾಗಿ ಈ ಮಹಾಯಾಗ ನಡೆಯಲಿದೆ. ಪರಮಪೂಜ್ಯ...
Loading posts...
All posts loaded
No more posts
