- Tuesday
- April 1st, 2025

ಮಡಪ್ಪಾಡಿಯಿಂದ ಕಾಶಿ ನಡುಬೆಟ್ಟು ಮನೆಗಳಿಗೆ ಸಂಪರ್ಕಿಸುವ ರಸ್ತೆಯು ಹಲವು ವರ್ಷಗಳಿಂದ ತೀರ ಹದಗೆಟ್ಟಿದ್ದು, ಆ ರಸ್ತೆಯ ಫಲಾನುಭವಿಗಳ ಬಹು ಬೇಡಿಕೆಗೆ ಸ್ಪಂದಿಸಿ ಮಾನ್ಯ ಶಾಸಕರಿಗೆ ಮಡಪ್ಪಾಡಿ ಗ್ರಾಮ ಸಮಿತಿ ಕಡೆಯಿಂದ ಬಿಜೆಪಿ ಜಿಲ್ಲಾಕಾರ್ಯದರ್ಶಿ ವಿನಯ್ ಕುಮಾರ್ ಮುಳುಗಾಡು ನೇತೃತ್ವದಲ್ಲಿ ಮನವಿ ಸಲ್ಲಿಸಿ ಶಾಸಕರ ವಿಶೇಷ ಅನುದಾನವನ್ನು ತರಿಸಿಕೊಂಡು ಮಡಪ್ಪಾಡಿ - ಕಾಶಿ- ನಡುಬೆಟ್ಟು ರಸ್ತೆಯಲ್ಲಿ ಫಲಾನುಭವಿಗಳ...

ಕಳೆದ ಮೂರ್ನಾಲ್ಕು ವಾರಗಳಿಂದ ಐನೆಕಿದು ಗ್ರಾಮದಲ್ಲಿ ಬೀಡುಬಿಟ್ಟಿರುವ ಆನೆ ದಾಳಿಯಿಂದಾಗಿ ನಾಶವಾಗುತ್ತಿರುವ ಕೃಷಿಯನ್ನು ರಕ್ಷಿಸುವಂತೆ ಸಂಬಂಧಪಟ್ಟವರಿಗೆ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಮಾತನಾಡಿದ ಸ್ಥಳೀಯರಾದ ಜಯಪ್ರಕಾಶ್ ಕೂಜುಗೋಡು “ಒಂದು ಕಡೆಯಿಂದ ಕೋತಿ, ಕಡವೆ, ಕಾಟಿ, ಹಂದಿ ಇತ್ಯಾದಿ ಕಾಡು ಪ್ರಾಣಿಗಳು ಮಾಡುವ ದಾಳಿಯಿಂದ ಕೃಷಿ ನಾಶವಾಗುತ್ತಿದ್ದು, ಇನ್ನೊಂದು ಕಡೆಯಿಂದ ಹೊಸ ಹೊಸ...

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ಮುಖ್ಯ ಶಿಕ್ಷಕರಾಗಿದ್ದ ಯಶೋಧರ ಎನ್ ಇವರು ಮಾರ್ಚ್ 31ರಂದು ವಯೋ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ 1 ಏಪ್ರಿಲ್ 2025 ರಿಂದ ಪ್ರೌಢಶಾಲೆಯ ನೂತನ ಮುಖ್ಯಶಿಕ್ಷಕರಾಗಿ ಗಣಿತ-ವಿಜ್ಞಾನ ಸಹಶಿಕ್ಷಕರಾದ ಉದಯಕುಮಾರ್ ರೈ ಎಸ್ ಅಧಿಕಾರ ವಹಿಸಿಕೊಂಡಿದ್ದಾರೆ. 30.03.1998ರಲ್ಲಿ ಶಿಕ್ಷಕರಾಗಿ ಸೇರ್ಪಡೆಗೊಂಡು, 28.07.1998 ರಂದು ಇಲಾಖಾ ಅನುಮೋದನೆಯೊಂದಿಗೆ ಖಾಯಂ ಸಹಶಿಕ್ಷಕರಾಗಿ 27 ವರ್ಷಗಳ ಸೇವಾ...

ಮೊಹಿಯದ್ದೀನ್ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಯಿತು. ಮಸೀದಿಯ ಖತಿಬರಾದ ಅಶ್ರಫ್ ಮುಸ್ಲಿಯಾರ್ ರವರು ಕುತುಬಾ ನೆರವೇರಿಸಿ ಈದ್ ಸಂದೇಶವನ್ನು ನೀಡಿ ಮಾತನಾಡಿ ಹಬ್ಬ ಸಂಭ್ರಮದ ಹೆಸರಿನಲ್ಲಿ ಒಂದು ಕ್ಷಣ ಆಚರಿಸುವ ಅನಿಸ್ಲಾಮಿಕ ಕಾರ್ಯಕ್ರಮಗಳು ನಮ್ಮ ಶಾಶ್ವತ ಇಹ ಪರ ನಷ್ಟಕ್ಕೆ ಹೇತು ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಇಸ್ಲಾಮಿನಲ್ಲಿ ಸಂಭ್ರಮಗಳ ಆಚರಣೆಗೂ ಒಂದು...

ವಿದ್ಯಾಬೋಧಿನೀ ಅನುದಾನಿತ ಪ್ರೌಢಶಾಲೆ ಬಾಳಿಲದ ಮುಖ್ಯ ಶಿಕ್ಷಕರಾದ ಯಶೋಧರ ನಾರಾಲು ಮಾ. 31ರಂದು ನಿವೃತ್ತರಾಗಲಿದ್ದಾರೆ. ಅಜ್ಜಾವರ ಗ್ರಾಮದ ನಾರಾಲು ಮನೆತನದ ನಿವೃತ್ತ ಶಿಕ್ಷಕ ದಿವಂಗತ ವೀರಪ್ಪ ಗೌಡ ನಾರಾಲು ಮತ್ತು ದಿ|ರಾಮಕ್ಕ ದಂಪತಿಗಳ ಪುತ್ರರಾಗಿರುವ ಯಶೋಧರ ನಾರಾಲುರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಜ್ಜಾವರ, ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಅಜ್ಜಾವರದಲ್ಲಿ...

ತ್ಯಾಗ ಬಲಿದಾನ ದ ಹಬ್ಬವಾದ ಇದುಲ್ ಪಿತರ್ ಹಬ್ಬವನ್ನು ನಿಂತಿಕಲ್ಲು ಬದ್ರಿಯಾ ಜುಮಾ ಮಸೀದಿಯಲ್ಲಿ ವಿಜೃಂಭಣೆ ಯಿಂದ ಆಚರಿಸಲಾಯಿತು. ಜಮಾತ್ ಖತೀಬ್ ಜಾಪರ್ ಸಹದಿ ಯವರು ಖುತುಬಾ ಕ್ಕೆ ನೇತೃತ್ವ ನೀಡಿ ಈದ್ ಸಂದೇಶ ನೀಡಿ ದುಶ್ಚಟಗಳಿಂದ ದೂರವಿದ್ದು ವ್ಯಸನ ಮುಕ್ತ ಸಮಾಜ ನಿರ್ಮಿಸಲು ಕರೆಯಿತ್ತರು. ಮುಹದ್ದೀನ್ ಮುಸ್ತಫಾ ಜುಹುರಿ, ಜಮಾತ್ ಪದಾದಿಕಾರಿಗಳು. ಸದಸ್ಯರು ವಿದ್ಯಾರ್ಥಿಗಳು...

ಮಗುವಿಗೆ ಗುರುತಿಸಿ ಕಲಿಯಲು ಸಹಕಾರಿಯಾಗುವ ಮೊಂಟೆಸ್ಸರಿ ಕಲಿಕಾ ಪದ್ಧತಿಯಲ್ಲಿ ಶಿಕ್ಷಕಿಯರನ್ನು ರೂಪಿಸುತ್ತಿರುವ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ 2024-25ನೇ ಸಾಲಿನ ಪ್ರದರ್ಶನ ತರಗತಿ ನಡೆಯಿತು. ಪ್ರದರ್ಶನ ತರಗತಿಯಲ್ಲಿ ವಿದ್ಯಾರ್ಥಿ ಶಿಕ್ಷಕಿಯರುಗಳೇ ರಚಿಸಿದ ವಿವಿಧ ರೀತಿಯ ಅಧ್ಯಯನ ಮಾದರಿಗಳು ಹಾಗೂ ತಾವೇ ಸಂಗ್ರಹಿಸಿ ಪ್ರದರ್ಶಿಸಿದ ಅಪರೂಪದ ಹಳೆಯ ಕಾಲದ ಪಾರಂಪರಿಕ ವಸ್ತುಗಳು ಗಮನ ಸೆಳೆಯಿತು.ಭಾರತ್...

ಬ್ರಿಟಿಷರ ಆಡಳಿತದಲ್ಲಿ ತೊಂದರೆಯಿಂದ ಬೇಸತ್ತ ಕೃಷಿಕರು ರಾಜ ಪ್ರಭುತ್ವ ಪುನರ್ ಸ್ಥಾಪಿಸುವ ಉದ್ದೇಶದಿಂದ ಬಂಡಾಯ ಆರಂಭಿಸಿದರು. ಆ ವೇಳೆ ಜನರ ವಿಸ್ವಾಸಗಳಿಸಿದ್ದ ಕೆದಂಬಾಡಿ ರಾಮಯ್ಯ ಗೌಡರು ನಾಯಕರಾಗಿ ರೂಪುಗೊಂಡರು ಎಂದು ಅರವಿಂದ ಚೊಕ್ಕಾಡಿ ಹೇಳಿದರು.ಅವರು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಅಮೈಮಡಿಯಾರು ಶಾಲೆಯಲ್ಲಿ ನಡೆದ ಸಮರ ವೀರ ಕೆದಂಬಾಡಿ ರಾಮಣ್ಣ ಗೌಡರ...

ಚೇರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಗುರು ಒಗ್ಗು ಬಿಳಿನೆಲೆಯ ದಮಯಂತಿ ಅವರು ಮಾ.31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ದಮಯಂತಿ ಜಿ ಅವರು 1994 ಸೆಪ್ಟೆಂಬರ್ ನಲ್ಲಿ ತನ್ನ ಶಿಕ್ಷಣ ವೃತ್ತಿಯನ್ನು ಆರಂಭಿಸಿ, ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲೆ ಬಾಳಿಲ, ಸ....

ಪೆರುವಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿಯವರು ಮಾ.31 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. ಸುದೀರ್ಘ 37 ವರ್ಷಗಳ ಕಾಲ ವಿವಿಧ ಗ್ರಾಮ ಪಂಚಾಯತ್ ಗಳಲ್ಲಿ ಸೇವೆ ಸಲ್ಲಿಸಿ ಇವರು ನಿವೃತ್ತಿಗೊಳ್ಳಲಿದ್ದಾರೆ. ಮುರುಳ್ಯ ಗ್ರಾಮದ ಅಲೆಕ್ಕಾಡಿ ಲಿಂಗಪ್ಪ ಪೂಜಾರಿ ಮತ್ತು ಬಾಲಕ್ಕ ದಂಪತಿಗಳ ಪುತ್ರನಾಗಿ ದಿನಾಂಕ : 04-03-1965 ರಂದು ಜನಿಸಿ, ಪ್ರಾಥಮಿಕ ಶಿಕ್ಷಣವನ್ನು...

All posts loaded
No more posts