ಉಬರಡ್ಕ ಅಮೈಮಡಿಯಾರು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

ಉಬರಡ್ಕ ಅಮೈಮಡಿಯಾರು ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಮಾಧವ ಗೌಡ ಮದಕ ಧ್ವಜರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಎಸ್ ಡಿ ಎಂ.ಸಿ ಅಧ್ಯಕ್ಷ ಲೋಕೇಶ್ ಕೊಟ್ಯಾನ್, ಗ್ರಾ.ಪಂ. ಮಾಜಿ ಅಧ್ಯಕ್ಷ ಹರೀಶ್ ರೈ ಉಬರಡ್ಕ, ಮುಖ್ಯ ಶಿಕ್ಷಕ ಪದ್ಮನಾಭ ಅತ್ಯಾಡಿ, ವಿನಾಯಕ ಮಿತ್ರ ಬಳಗದ ಅಧ್ಯಕ್ಷ ವಿದ್ಯಾಧರ ಹರ್ಲಡ್ಕ , ಎಸ್ ಡಿ ಎಂ...

ಮಿತ್ರ ಯುವಕ ಮಂಡಲ ಕೂಯಿಕುಳಿ 74 ನೇ ಸ್ವಾತಂತ್ರೋತ್ಸವ ಆಚರಣೆ

ಮಿತ್ರ ಯುವಕ ಮಂಡಲ (ರಿ) ಕೊಯಿಕುಳಿ ಮತ್ತು ಕುರಲ್ ತುಳು ಕೂಟ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಯುವಕ ಮಂಡಲ ಕಟ್ಟಡದ ಆವರಣದಲ್ಲಿ ನಡೆಯಿತು. ಕೊರೋನ ವಾರಿಯರ್ಸ್ ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ದುಗ್ಗಲಡ್ಕ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನಳಿನಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ದುಗ್ಗಲಡ್ಕ ಕಿರಿಯ ಆರೋಗ್ಯ ಸಹಾಯಕಿ ಶಶಿಕಲಾ ಭಾಗವಹಿಸಿದ್ದರು. ಯುವಕ...
Ad Widget

ಅಯ್ಯನಕಟ್ಟೆ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

ಸ.ಉ.ಹಿ.ಪ್ರಾ.ಶಾಲೆ ಅಯ್ಯನಕಟ್ಟೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಯಾಯಿತು. ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀ ಸತೀಶ್ಚಂದ್ರ ಪಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಶೀಲಾವತಿ, ಶಿಕ್ಷಕ ವೃಂದ ಹಾಗೂ ಪೋಷಕ ವೃಂದದವರು ಉಪಸ್ಥಿತರಿದ್ದರು.

ಕೋಟೆಮುಂಡುಗಾರು ಸೊಸೈಟಿಯಲ್ಲಿ ಸ್ವಾತಂತ್ರ್ಯೋತ್ಸವ, ಕೊರೊನ ವಾರಿಯರ್ ಗಳಿಗೆ ಅಭಿನಂದನೆ ಕಾರ್ಯಕ್ರಮ

ಕಳಂಜ - ಬಾಳಿಲ ಪ್ರಾ.ಕೃ.ಪತ್ತಿನ ಸಹಕಾರಿ ಸಂಘ ಕೋಟೆಮುಂಡುಗಾರು ಇದರ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಘದ ಅಧ್ಯಕ್ಷರಾದ ಶ್ರೀ ಕೂಸಪ್ಪ ಗೌಡ ಮುಗುಪ್ಪು ಧ್ವಜಾರೋಹಣಗೈದರು.ನಂತರ ಜರುಗಿದ ಸರಳ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೆಳ್ಳಾರೆ ಆರಕ್ಷಕ ಠಾಣೆಯ ಎಸ್.ಐ. ಶ್ರೀ ಆಂಜನೇಯ ರೆಡ್ಡಿ 'ಕೊರೋನಾ ವಾರಿಯರ್ಸ್' ಗಳಿಗೆ ಅಭಿನಂದನೆ...

ಸುಳ್ಯ ಗೃಹ ರಕ್ಷಕ ದಳ ದಿಂದ 74 ನೇ ಸ್ವಾತಂತ್ರ್ಯ ದಿನಾಚರಣೆ

ಸುಳ್ಯ ಗೃಹ ರಕ್ಷಕ ದಳ ದ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಸುಳ್ಯ ಗೃಹ ರಕ್ಷಕ ದಳ ಕಚೇರಿ ಮುಂಭಾಗದಲ್ಲಿ ನಡೆಯಿತು. ಗೃಹ ರಕ್ಷಕ ದಳ ಯೂನಿಟ್ ಆಫೀಸರ್ ಲ. ಜಯಂತ್ ಶೆಟ್ಟಿ ಯವರು ಧ್ವಜಾರೋಹಣ ನೆರವೇರಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಗೃಹ ರಕ್ಷಕ ದಳ ಸಿಬ್ಬಂದಿಗಳು ಹಾಜರಿದ್ದರು.

ಮಡಪ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮಡಪ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ ಯವರು ದ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಸಿಬ್ಬಂದಿಗಳು ಉಪಸ್ಥಿತರಿದ್ದರು.

ದೇವಚಳ್ಳ ಪಂಚಾಯತ್ ನಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ

ದೇವಚಳ್ಳ ಗ್ರಾಮ ಪಂಚಾಯತ್ ನಲ್ಲಿ 74ನೇ ಸ್ವಾತಂತ್ರದಿನಾಚರಣೆಯ ದ್ವಜಾರೋಹಣ ಕಾರ್ಯಕ್ರಮ ವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾವ್ಯ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.

ಮುರುಳ್ಯ ಗ್ರಾಮ ಪಂಚಾಯತ್ ನಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ

ಮುರುಳ್ಯ ಗ್ರಾಮ ಪಂಚಾಯತ್ ನಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ಶ್ರೀ ಶ್ರೀಧರ್ ಕೆ ಆರ್ ರವರು ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರ ಗೀತೆಯೊಂದಿಗೆ ಆಚರಣೆಯನ್ನು ಮುಕ್ತಾಯಗೊಳಿಸಲಾಯಿತು. ಈ ಸಂದರ್ಭದಲ್ಲಿಪಂಚಾಯತ್ ನ ಮಾಜಿ ಸದಸ್ಯರು ಶ್ರೀಮತಿ ಯಶೋಧ ಇದುಂಗುಳಿ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀ ಸೀತಾರಾಮ ಎಸ್ ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಶ್ರೀ...

ಅಚ್ರಪ್ಪಾಡಿ ಶಾಲೆಯಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ

ಅಚ್ರಪ್ಪಾಡಿ ಶಾಲೆಯಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಹರೀಶ್ ಕಡಪಳ ನೆರೆವೇರಿಸಿದರು. ಶಾಲಾ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು ಬಾಬು ಗೌಡ ಅಚ್ರಪ್ಪಾಡಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ, ವಿಧ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.ಮಕ್ಕಳಿಗೆ ವಾಟ್ಸಪ್ಪ್ ಮೂಲಕ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಜೇತರಿಗೆ...

ಶಾರದಾ ಸಮೂಹ ವಿದ್ಯಾ ಸಂಸ್ಥೆ ಯಿಂದ ಸ್ವಾತಂತ್ರೋತ್ಸವ

‌ಸುಳ್ಯದ ಪ್ರತಿಷ್ಠಿತ ಶಾರದ ಸಮೂಹ ವಿದ್ಯಾ ಸಂಸ್ಥೆ ಯಿಂದ 74 ನೇ ಸ್ವಾತಂತ್ರೋತ್ಸವ ಆಚರಣೆ ಇಂದು ನಡೆಯಿತು. ಸಮೂಹ ವಿದ್ಯಾ ಸಂಸ್ಥೆ ಯ ಅಧ್ಯಕ್ಷ ರಾದ ಶ್ರೀ ಧನಂಜಯ ಅಡ್ಪಂಗಾಯ ಧ್ವಜಾರೋಹಣ ನೆರವೇರಿಸಿದರು. ಕೊರೋನ ಕಾರಣದಿಂದಾಗಿ ಸರಳವಾಗಿ ಕಾರ್ಯಕ್ರಮ ನಡೆಯಿತು.
Loading posts...

All posts loaded

No more posts

error: Content is protected !!