Ad Widget

ಧರ್ಮಪಾಲ ಕೊಯಿಂಗಾಜೆಯವರಿಗೆ ಕೊರೋನಾ ಪಾಸಿಟಿವ್

ವಕೀಲರು ಹಾಗು ನೋಟರಿ ಮತ್ತು ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆ ಯವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ತಲೆನೋವಿನ ಕಾರಣಕ್ಕೆ ಸುಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ತೆರಳಿದಾಗ ವೈದ್ಯರ ಸಲಹೆ ಮೇರೆಗೆ ಕೊರೋನಾ ಪರೀಕ್ಷೆಗೆ ಒಳಗಾದರು. ಈ ವೇಳೆ ಅವರಿಗೆ ಕೊರೋನಾ ಪಾಸಿಟಿವ್ ಇರುವುದು ಗೊತ್ತಾಗಿದೆ.  ಈ ಬಗ್ಗೆ ಪತ್ರಿಕೆಗೆ ಹೇಳಿಕೆ...

ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಗುರುತಿನ ಚೀಟಿ, ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮ

ಸುಳ್ಯ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಂಘದ ಸದಸ್ಯರಿಗೆ ಗುರುತಿನ ಚೀಟಿ, ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸೆ.2 ರಂದು ನಡೆಯಿತು. ಮಂಗಳೂರಿನಲ್ಲಿ ನಡೆದ ಪತ್ರಕರ್ತರ ರಾಜ್ಯ ಸಮ್ಮೇಳನದ ಯಶಸ್ವಿನ ಸವಿ ನೆನಪಿಗಾಗಿ ಸಂಘದ ಸದಸ್ಯರಿಗೆ ಕಿಟ್ ಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ...
Ad Widget

ಮಂಗಳೂರಿನ ಪೊಂಪೈ ಕಾಲೇಜಿನ ಪ್ರಾಂಶುಪಾಲರಾಗಿ ಡಾ.ಪುರುಷೋತ್ತಮ ಕೆ.ವಿ. ಅಧಿಕಾರ ಸ್ವೀಕಾರ

ಮಂಗಳೂರಿನಲ್ಲಿ ನೆಲೆಸಿರುವ ಮೂಲತಃ ದೇವಚಳ್ಳ ಗ್ರಾಮದ ಕರಂಗಲ್ಲು ಡಾ.ಪುರುಷೋತ್ತಮ ಕೆ.ವಿ.ಯವರು ಮಂಗಳೂರಿನ ಐಕಳ ಪೊಂಪೈ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿದ್ದಾರೆ. ಸುಮಾರು 15 ವರ್ಷಗಳಿಂದ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು.‌ ಅರೆಬಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಸದಸ್ಯರಾಗಿ ಕೂಡ ಆಯ್ಕೆಯಾಗಿದ್ದಾರೆ. ಇವರು ದೇವಚಳ್ಳ ಗ್ರಾಮದ ಕರಂಗಲ್ಲು ದಿ. ವೆಂಕಪ್ಪ ಗೌಡ ಮತ್ತು ದಿ. ದುಗ್ಗಮ್ಮ...

ಸೆಪ್ಟೆಂಬರ್ 6 : ವಾಲ್ಮೀಕಿ ಶಾಖೆ ಬೆಳ್ಳಾರೆ ವತಿಯಿಂದ ಆಯುಷ್ಮಾನ್ ನೋಂದಣಿ ಶಿಬಿರ

ವಿಶ್ವ ಹಿಂದೂ ಪರಿಷದ್ ಭಜರಂಗದಳ, ವಾಲ್ಮೀಕಿ ಶಾಖೆ ಬೆಳ್ಳಾರೆ ಇದರ ವತಿಯಿಂದ ಸೆಪ್ಟೆಂಬರ್ 6 ರ ಭಾನುವಾರ ಬೆಳ್ಳಾರೆಯ ರಾಜೀವ್ ಗಾಂಧಿ ಸಭಾಂಗಣದಲ್ಲಿ ಕೇಂದ್ರ ಸರ್ಕಾರದಿಂದ ಕೊಡಮಾಡುವ ಆಯುಷ್ಮಾನ್ ಕಾರ್ಡ್ ನೋಂದಣಿ ಶಿಬಿರ ನಡೆಯಲಿದೆ. ಶಿಬಿರವು ಬೆಳಗ್ಗೆ 9 ರಿಂದ ಸಂಜೆ 5 ರ ತನಕ ಜರುಗಲಿದ್ದು ಸಾರ್ವಜನಿಕರು ಆಧಾರ್ ಕಾರ್ಡ್, ಪಡಿತರ ಚೀಟಿ, ಮೊಬೈಲ್...

ಎಸ್ಸೆಸ್ಸೆಫ್ ಬೆಳ್ಳಾರೆ ಶಾಖಾ ವತಿಯಿಂದ ಉಚಿತ ಆಯುಷ್ಮಾನ್ ಶಿಬಿರ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೀಯ ಯೋಜನೆಯಲ್ಲಿ ಒಂದಾದ ಅರ್ಹ ಕುಟುಂಬಸ್ಥರಿಗೆ ಉಚಿತ ಆಯುಷ್ಮಾನ್ ಕಾರ್ಡ್ ಯೋಜನೆಯನ್ನು ಎಸ್ಸೆಸ್ಸೆಫ್ ಬೆಳ್ಳಾರೆ ಶಾಖಾ ವತಿಯಿಂದ, ಸುನ್ನೀ ಸೆಂಟರ್ ನಲ್ಲಿ ನಡೆಸಲಾಯಿತು, ಹಲವಾರು ಜನರು ಇದರ ಸದುಪಯೋಗವನ್ನು ಪಡೆದುಕೊಂಡರು ,ಯೋಜನೆಯ ಸಂಪೂರ್ಣ ಮಾಹಿತಿಯನ್ನು ಅರ್ಹ ವ್ಯಕ್ತಿಗಳಿಗೆ ನೀಡಲಾಯಿತು ..ಪ್ರಸ್ತುತ ಕಾರ್ಯಕ್ರಮದಲ್ಲಿ ದಾರುಲ್ ಹಿಕ್ಮಾ ಅಧ್ಯಕ್ಷರಾದ ಹಸ್ಸನ್ ಸಖಾಫಿ ಬೆಳ್ಳಾರೆ, SYS ಬ್ರಾಂಚ್...

ಅಜಪಿಲ ದೇವಸ್ಥಾನಕ್ಕೆ ಪುಡ್ಕಜೆ ಮಂಜುನಾಥ ಆಳ್ವರಿಂದ ರೂ.1 ಲಕ್ಷ ದೇಣಿಗೆ

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೂಮಿ ಖರೀದಿಸುವ ಪ್ರಯುಕ್ತವಾಗಿ ದೇವಸ್ಥಾನದ ಮಾಜಿ ಟ್ರಸ್ಟಿಯಾಗಿರುವ ಪುಡ್ಕಜೆ ಮಂಜುನಾಥ ಆಳ್ವರವರು ರೂ. 1 ಲಕ್ಷದ ಚೆಕ್ ಅನ್ನು ದೇಣಿಗೆಯಾಗಿ ಸೆ.1 ರಂದು ನೀಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್ ರೈ ಪುಡ್ಕಜೆಯವರು ಚೆಕ್ ನ್ನು ಸ್ವೀಕರಿಸಿದರು.

ಬಿಜೆಪಿಯ ದಾವಣಗೆರೆ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಮುಳುಗಾಡು

ಭಾರತೀಯ ಜನತಾ ಪಾರ್ಟಿ ದಾವಣಗೆರೆ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾಗಿ ಜಯಪ್ರಕಾಶ್ ಮುಳುಗಾಡು ನಿಯುಕ್ತಿಗೊಂಡಿರುತ್ತಾರೆ. ಇವರು ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಮುಳುಗಾಡು ಚಂದ್ರಶೇಖರ ಹಾಗೂ ಪದ್ಮಾವತಿ ದಂಪತಿಗಳ ಪುತ್ರ. ಇವರು ಸುಳ್ಯದಲ್ಲಿ ಎಬಿವಿಪಿ ಯಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ಗಾಳಿಪಟದೊಂದಿಗೆ ಹಾರಿದ ಮಗು

ಗಾಳಿಪಟದೊಂದಿಗೆ ಮಗುವೊಂದು ಹಾರಿದ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಥೈವಾನ್ ನಲ್ಲಿ ನಡೆದ ಘಟನೆಯಲ್ಲಿ 3 ವರ್ಷದ ಬಾಲಕಿಯೊಬ್ಬಳು ಸುಮಾರು 100 ಮೀ ಎತ್ತರಕ್ಕೆ ಗಾಳಿಪಟದೊಂದಿಗೆ ಹಾರಿದ್ದಾಳೆ. ಅದೃಷ್ಟವಶಾತ್ ಗಾಳಿಪಟ ಕೆಳಗೆ ಬಂದುದರಿಂದ ಸಾರ್ವಜನಿಕರು ಮಗುವನ್ನು ಹಿಡಿಕೊಂಡರು. ಇಲ್ಲಿದೆ ನೋಡಿ ವಿಡಿಯೋ. https://youtu.be/qz8dORfY7K0

ಪಂಜ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕಾಹಾರ ವಿತರಣೆ

ಪಂಜ ಅಂಗನವಾಡಿ ಕೇಂದ್ರದಲ್ಲಿ ಅರ್ಹ ಫಲಾನುಭವಿಗಳಾದ ಮಕ್ಕಳು ಮತ್ತು ಬಾಣಂತಿಯರಿಗೆ ಪೌಷ್ಟಿಕಾಹಾರ ವಿತರಣೆ ಇಂದು ನಡೆಯಿತು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಪ್ರಮೀಳ ಪಿ. ಪೂರಕ ಆಹಾರ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಸಮಿತಿ ಸದಸ್ಯೆ ನಳಿನಿ, ಶಾಲಾ ಮುಖ್ಯ ಶಿಕ್ಷಕ ಮುತ್ತಪ್ಪ ಗೌಡ,ಆಶಾ ಕಾರ್ಯಕರ್ತೆ ಹಾಗೂ ಪೋಷಕರು,ಫಲಾನುಭವಿಗಳು ಉಪಸ್ಥಿತರಿದ್ದರು. ಕಾರ್ಯಕರ್ತೆ ಭಾಗೀರಥಿ, ಸಹಾಯಕಿ ವಿಮಲ ಸಹಕರಿಸಿದರು.

ಸಮಸ್ಯೆಯನ್ನು ಹುಟ್ಟುಹಾಕುವವರು ಎಸ್ ವೈಎಸ್ ನವರಾಗಬಾರದು – ಮೌಲಾನಾ ಜಿ.ಎಮ್ ಉಸ್ತಾದ್

ಎಸ್ ವೈಎಸ್ ಪಂಜ ನೆಕ್ಕಿಲ ಬ್ರಾಂಚ್ ಹಮ್ಮಿಕೊಂಡ ಸಂಘಟನಾ ಕಾರ್ಯಾಗಾರದಲ್ಲಿ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಎಸ್ ವೈಎಸ್ ರಾಜ್ಯ ಸಮಿತಿಯ ಸಾಂತ್ವನ ವಿಭಾಗದ ಚೇರ್ಮೆನ್ ಜಿ ಎಮ್ ಉಸ್ತಾದರು ಸಮಾಜದಲ್ಲಿ ಯಾವುದೇ ಸಮಸ್ಯೆಗಳು ಹುಟ್ಟು ಹಾಕುವವರು ಎಸ್ ವೈಎಸ್ , ಎಸ್ಸೆಸ್ಸೆಫ್ ಕಾರ್ಯಕರ್ತರಾಗಬಾರದು ಎಂದು ಕಾರ್ಯಕರ್ತರಿಗೆ ಮನದಟ್ಟು ಮಾಡಿದರು.ಪ್ರಸ್ತುತ ಆನ್ ಲೈನ್ ಶಿಬಿರದ ಸಭಾಧ್ಯಕ್ಷತೆಯನ್ನು ನೆಕ್ಕಿಲ ಬ್ರಾಂಚ್...
Loading posts...

All posts loaded

No more posts

error: Content is protected !!