- Saturday
- March 14th, 2026
ಶಾಲಾ ಕಾಲೇಜುಗಳ ತರಗತಿಗಳು ಆನ್ಲೈನ್ ಮುಖಾಂತರ ನಡೆಯುತ್ತಿದ್ದು, ಸುಳ್ಯದ ಹಲವು ಗ್ರಾಮೀಣ ಪ್ರದೇಶಗಳಲ್ಲಿ (ಬಾಳುಗೋಡು, ಪೆರುವಾಜೆ) ನೆಟ್ವರ್ಕ್ ಸಮಸ್ಯೆಯಾಗುತ್ತಿದ್ದು, ಇದನ್ನು ಶೀಘ್ರ ಪರಿಹರಿಸುವಂತೆ ಕ್ಯಾಂಪಸ್ ಫ್ರಂಟ್ ಆಫ್ ಸುಳ್ಯ ಏರಿಯಾ ಸಮಿತಿ ನಿಯೋಗವು ತಹಶಿಲ್ದಾರರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಪ್ರತಿಯೊಬ್ಬರೂ ಕಡ್ಡಾಯವಾಗಿ ಆನ್ಲೈನ್ ತರಗತಿಗಳಿಗೆ ಹಾಜರಾಗಬೇಕು. ಇಲ್ಲದಿದ್ದರೆ ಪರೀಕ್ಷಾ ಸಮಯದಲ್ಲಿ...
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಮಣ್ಯ ಘಟಕದ ವತಿಯಿಂದ ನಗರ ಅಭ್ಯಾಸ ವರ್ಗ ಅ.27 ರಂದು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಬಳ್ಪ ಮುಖ್ಯ ರಸ್ತೆಯಲ್ಲಿರುವ ಅಜಿತ್ ರಿಂಗ್ ವರ್ಕ್ಸ್ ಹತ್ತಿರ ಪ್ರವೀಣ್ ಮಾವಿನಗೊಡ್ಲುರವರ ಮಾಲಕತ್ವದ ತ್ರಿಶೂಲಿನಿ ಎಲೆಕ್ಟ್ರಿಕಲ್ಸ್ ಅ.23 ರಂದು ಶುಭಾರಂಭಗೊಳ್ಳಲಿದೆ.ಇಲ್ಲಿ ಎಲೆಕ್ಟ್ರಿಕಲ್ ವಯರಿಂಗ್, ಎಲೆಕ್ಟ್ರಿಕಲ್ ಉಪಕರಣಗಳ ದುರಸ್ತಿ ಮತ್ತು ರಿವೈಂಡಿಂಗ್ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಹಾಗೂ ಇನ್ ವರ್ಟರ್ ಅಳವಡಿಸಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.
ಶಾರದಾಂಬಾ ದಸರಾ ಸೇವಾ ಟ್ರಸ್ಟ್ ಸುಳ್ಯ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ವತಿಯಿಂದ ಸರಳ ಶಾರದೋತ್ಸವ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ಶಾರದಾ ದೇವಿಯ ಮೆರವಣಿಗೆ ಹಾಗೂ ಪ್ರತಿಷ್ಟಾಪನೆ ಕಾರ್ಯಕ್ರಮ ಇಂದು ನಡೆಯಿತು. ಒಂದು ದಿನಕ್ಕೆ ಸೀಮಿತಗೊಂಡಿರುವ ಈ ಬಾರಿಯ ಶಾರದೋತ್ಸವ ಇಂದು ಸಂಜೆ ಶಾರದ ವಿಸರ್ಜನೆ ಯೊಂದಿಗೆ ಸಮಾಪನಗೊಳ್ಳಲಿದೆ.
ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ನಡೆಯುತ್ತಿದೆ. 2021 ಫೆಬ್ರವರಿ 24 ರಿಂದ 26 ತನಕ ನಡೆಯುವ ಶುಭಮುಹೂರ್ತದಲ್ಲಿ ಪುನರ್ ಪ್ರತಿಷ್ಠಾ- ಬ್ರಹ್ಮಕಲಶೋತ್ಸವದ ಕಾರ್ಯಕ್ರಮ ಜರುಗಲಿದೆ. ಇದರ ಸಲುವಾಗಿ ಆಯಾ ವಿಭಾಗದ ನೂತನ ಸಮಿತಿ ರಚನೆಯ ಪೂರ್ವಭಾವಿ ಸಭೆಯನ್ನು ಇದೇ ಬರುವ ಅ.31 ರಂದು ನಡೆಯಲಿದೆ. ಈ ಸಭೆಯಲ್ಲಿ ಊರ-ಪರವೂರ ಭಕ್ತಾಭಿಮಾನಿಗಳು ಹಾಗೂ...
ಕಳಂಜದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ತೆನೆ (ಕದಿರು) ತುಂಬಿಸುವ ಕಾರ್ಯಕ್ರಮವು ಅ. 23 ರ ಶುಕ್ರವಾರ ಬೆಳಗ್ಗೆ 8 ಗಂಟೆಗೆ ನಡೆಯಲಿದೆ. ಭಗವದ್ಭಕ್ತರು ಈ ಕಾರ್ಯಕ್ರಮದಲ್ಲಿ ಸರ್ಕಾರಿ ನಿಯಮದನ್ವಯ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿಕೊಂಡು ಭಾಗವಹಿಸಬೇಕಾಗಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಕೊಲ್ಲಮೊಗ್ರ ಇತ್ತೀಚೆಗೆ ಸುರಿದ ಭಾರಿಗೆ ಮಳೆ ಹರಿಹರಪಲ್ಲತ್ತಡ್ಕ, ಕೊಲ್ಲಮೊಗ್ರ,ಕಲ್ಮಕಾರು ಭಾಗದ ರಸ್ತೆ ಹಾಗೂ ಸೇತುವೆಗಳಿಗೆ ಹಾನಿಯಾಗಿತ್ತು. ಕೆಲವೆಡೆ ಸಂಚಾರ ಸ್ಥಗಿತಗೊಂಡಿತ್ತು. ಕಡಂಬಳ, ಕೊಲ್ಲಮೊಗ್ರ, ಜಾಲುಮನೆ ಯಲ್ಲಿ ಹಾನಿಗೊಂಡ ಸೇತುವೆಗಳನ್ನು ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ತಾ.ಪಂ.ಸ್ಥಾನೀಯ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು ಭೇಟಿ ಮಾಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಉದಯ ಕೊಪ್ಪಡ್ಕ, ಗ್ರಾಮಸ್ಥರಾದ ಉದಯ...
ಕರಿಕ್ಕಳದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಾಯಿಕೃಪಾ ಸಂಕೀರ್ಣದಲ್ಲಿ, ಶ್ರೀ ರಾಮಚಂದ್ರ ಮಡಪ್ಪಾಡಿಯವರ ಮಾಲಕತ್ವದ ಪ್ರಗತಿ ಎಂಟರ್ ಪ್ರೈಸಸ್ ಅ.19ರಂದು ಗಣಹೋಮದೊಂದಿಗೆ ಶುಭಾರಂಭಗೊಂಡಿತು. ಯಾವುದೇ ಮಿಶ್ರಣವಿಲ್ಲದ ಪರಿಶುದ್ಧ ಕೊಬ್ಬರಿ ಎಣ್ಣೆ, ಶೇಂಗಾ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಎಳ್ಳೆಣ್ಣೆ, ಕುಸುಬಿ ಎಣ್ಣೆ, ಸಾಸಿವೆ ಎಣ್ಣೆ, ತಾಳೆ ಎಣ್ಣೆ ಸೇರಿದಂತೆ ವಿವಿಧ ತೆರನಾದ ಎಣ್ಣೆಯನ್ನು ಕ್ಲಪ್ತ ಸಮಯದಲ್ಲಿ ತಯಾರಿಸಲಾಗುವುದೆಂದು ಮಾಲಕರು ತಿಳಿಸಿದ್ದಾರೆ.
ಪಂಜದ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಹತ್ತಿರ ಇರುವ ಶ್ರೀಕೃಷ್ಣ ಕಾಂಪ್ಲೆಕ್ಸ್ ನಲ್ಲಿ ಪುರುಷೋತ್ತಮ ಎರ್ಮಾಯಿಲ್ ಮಾಲಕತ್ವದ ಸ್ಪರ್ಶ ಎಲೆಕ್ಟ್ರಾನಿಕ್ಸ್ & ಹೋಮ್ ಅಪ್ಲಾಯೆನ್ಸಸ್ ಮಾರಾಟ ಮಳಿಗೆಯು ಅ.23 ರ ಶುಕ್ರವಾರದಂದು ಶುಭಾರಂಭಗೊಳ್ಳಲಿದೆ. ಬೆಳಗ್ಗೆ 10.30 ಕ್ಕೆ ಮಳಿಗೆಯು ಶುಭಾರಂಭಗೊಳ್ಳಲಿದ್ದು , ಹಿರಿಯ ಧಾರ್ಮಿಕ ಮುಂದಾಳು ಶ್ರೀ ತಿಮ್ಮಪ್ಪ ಗೌಡ ಪುತ್ಯ ಉದ್ಘಾಟನೆಗೈಯಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಂಜ ಗ್ರಾ.ಪಂ.ಮಾಜಿ...
ಕೊಲ್ಲಮೊಗ್ರ ದಿಂದ ಜಾಲುಮನೆ ಸಂಚರಿಸುವ ಕಿರುಸೇತುವೆ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಸೇತುವೆಯ ಒಂದು ಬದಿಯ ಮಣ್ಣು ಕುಸಿತಗೊಂಡು ಸಂಚಾರಕ್ಕೆ ತಡೆಯಾಗಿತ್ತು. ಕೂಡಲೇ ಸಮಸ್ಯೆಗೆ ಸ್ಪಂದಿಸಿದ ಕೊಲ್ಲಮೊಗ್ರು ಬಿ.ಜೆ.ಪಿಯ ಕಾರ್ಯಕರ್ತರು ಮತ್ತು ಮುಖಂಡರು ತಾಲೂಕು ಪಂಚಾಯತ್ ಸದಸ್ಯ ಉದಯ ಕೊಪ್ಪಡ್ಕರವರಿಗೆ ತಿಳಿಸಿ ಶೀಘ್ರ ದುರಸ್ತಿ ಗೆ ಮನವಿ ಮಾಡಿದ್ದರು. ಕೂಡಲೇ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿದ...
Loading posts...
All posts loaded
No more posts
