- Saturday
- March 14th, 2026
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯ ಮೇಲೆ ದೇವಸ್ಥಾನದ ಆಭರಣಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸುಬ್ರಹ್ಮಣ್ಯ ನಿವಾಸಿಯಾದ ಶ್ರೀನಾಥ್ ಟಿ.ಎಸ್. ಅವರು ಮಂಗಳೂರು ಪಶ್ಚಿಮ ವಲಯ ಭ್ರಷ್ಟಾಚಾರ ನಿಗ್ರಹದಳದ ಪೊಲೀಸ್ ಅಧೀಕ್ಷರಲ್ಲಿ ದೂರು ದಾಖಲಿಸಿ, ತನಿಖೆಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.ದೇವಾಲಯದ ಆಡಳಿತಾಧಿಕಾರಿ ಶ್ರೀಮತಿ ರೂಪಾ ಎಂ.ಜೆ. ಹಾಗೂ ದೇಗುಲದ ಮಾಜಿ ಮುಖ್ಯ...
ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ದಿನಸಿ ವ್ಯಾಪಾರ ಮಳಿಗೆ *ಸುವರ್ಣ ಸಹಕಾರ ಮಾರ್ಟ್* ಅ.25 ರಂದು ಶುಭಾರಂಭಗೊಳ್ಳಲಿದೆ. ಸಂಘದ ಸದಸ್ಯರು ಕೊವಿಡ್ ನಿಯಮಗಳನ್ನು ಪಾಲಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ತಿಳಿಸಿದ್ದಾರೆ.
ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯಕಾರಿಣಿ ಸಭೆ ಮತ್ತು ಕಸ್ತೂರಿ ರಂಗನ್ ವರದಿ ಅನುಷ್ಠಾನದ ವಿರುದ್ಧ ಸಮಾಲೋಚನ ಸಭೆ ಅ.23ರಂದು ಕಡಬ ತಾಲೂಕಿನ ಬಿಳಿನೆಲೆಯಲ್ಲಿ ಪೂರ್ವಾಹ್ನ 10 ಗಂಟೆ ಗೆ ನಡೆಯಲಿದೆ. ಈ ಭಾಗದ ಗ್ರಾಮಸ್ಥರು ಹೆಚ್ಚಿನ ಭಾಗವಹಿಸುವಂತೆ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುಳ್ಯ ನಗರ ಪಂಚಾಯತ್ ನಲ್ಲಿ ಕಳೆದ ಎರಡು ವರ್ಷಗಳಿಂದ ಮುಖ್ಯಾಧಿಕಾರಿಯಾಗಿದ್ದ ಮತ್ತಡಿಯವರಿಗೆ ವರ್ಗಾವಣೆ ಆದೇಶವಾಗಿದ್ದು, ಸುಳ್ಯಕ್ಕೆ ಎಂ.ಆರ್.ಸ್ವಾಮಿ ಆಗಮಿಸಲಿದ್ದಾರೆ. ಇವರು ಮೈಸೂರು ಮಹಾನಗರಪಾಲಿಕೆಯ ಸಹಾಯಕ ಕಂದಾಯ ಆಧಿಕಾರಿಯಾಗಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆ ಎಮ್.ಆರ್. ಸ್ವಾಮಿಯವರು ಸುಳ್ಯ ನಗರ ಪಂಚಾಯತ್ ಮುಖ್ಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು
ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ,ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಪುತ್ತೂರು,ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ,ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಪುತ್ತೂರು, ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇವುಗಳ ಸಹಯೋಗದೊಂದಿಗೆ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಅ.28 ರಿಂದ ನ 03 ರವರೆಗೆ ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್...
ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ ಮತ್ತು ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ 49 ನೇ ವರ್ಷದ ದಸರಾ ಕಾರ್ಯಕ್ರಮದಲ್ಲಿ ಅ.21 ರಂದು ಸುಳ್ಯ ದ ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ (ರಿ) ಸುಳ್ಯ ಇದರ ವತಿಯಿಂದ ಕೊರೋನಾ ಜಾಗೃತಿ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಲಾಯಿತು. ಆರೋಗ್ಯ ವಾರಿಯರ್ಸ್...
ಕಲ್ಮಕಾರು ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಅ.21 ರಂದು ಆರನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂವ ಗಣಪತಿ ಹವನ, ಶ್ರೀ ಸತ್ಯನಾರಾಯಣ ದೇವರ ಪೂಜೆ, ದುರ್ಗಾ ಪೂಜೆ ಹಾಗೂ ವಾಹನ ಪೂಜೆ ಪುರೋಹಿತರಾದ ವೆಂಕಟ್ರಮಣ ಭಟ್ ಬಳ್ಳಕ ಇದರ ನೇತೃತ್ವದಲ್ಲಿ ನಡೆಯಿತು.
ದೇವಚಳ್ಳ ಗ್ರಾಮದ ದೇವ ರಸ್ತೆಯ ಬದಿಯ ಗಿಡಗಂಟಿ ಹಾಗೂ ಹುಲ್ಲು ಬೆಳೆದು ವಾಹನ ಹಾಗೂ ಪಾದಾಚಾರಿಗಳಿಗೆ ಸಂಚಾರಕ್ಕೆ ಅಡ್ಡಿಯಾಗಿತ್ತು. ಇತ್ತೀಚೆಗೆ ಅಪಘಾತಗಳು ಸಂಭವಿಸಿತ್ತು. ಇದನ್ನು ಗಮನಿಸಿದ ಚಿದಾನಂದ ಪೇರಳಕಜೆ ಮತ್ತು ಅವರ ಬಳಗ ಶ್ರಮದಾನ ನಡೆಸಿ ರಸ್ತೆ ಬದಿ ಸ್ವಚ್ಛಗೊಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಡಬ ಪಂಜ ಮುಖ್ಯರಸ್ತೆಯಲ್ಲಿರುವ ಓಂಕಾರ ಸಂಕೀರ್ಣದಲ್ಲಿ ಪಂಚಲಿಂಗೇಶ್ವರ ಕೂಲಿಂಗ್ ಸೊಲ್ಯೂಷನ್ ಶುಭಾರಂಭಗೊಂಡಿದೆ. ಈ ಸಂದರ್ಭದಲ್ಲಿ ಸರಸ್ವತಿ ವಿದ್ಯಾಸಂಸ್ಥೆಯ ಸಂಚಾಲಕರು, ವಿದ್ಯಾಭಾರತಿ ಕರ್ನಾಟಕ ರಾಜ್ಯದ ನೈತಿಕ ಆಧ್ಯಾತ್ಮಿಕ ಶಿಕ್ಷಣ ಪ್ರಮುಖರು ಆಗಿರುವ ಎಂ. ವೆಂಕಟ್ರಮಣ ರಾವ್, ಗುರುಪ್ರಸಾದ್ ತೋಟ , ಸಂಕೀರ್ಣ ಮಾಲಕರಾದ ಕೃಷ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಇಲ್ಲಿ ಎಲ್ಲಾ ರೀತಿಯ ಎ.ಸಿ, ಎಲ್ಲಾ ಕಂಪನಿ...
ತೋಟಗಾರಿಕಾ ಇಲಾಖೆ ಸುಳ್ಯ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅರಂತೋಡು ಇದರ ಸಹಯೋಗದೊಂದಿಗೆ ಮಧುವನ ಹಾಗೂ ಜೇನು ಸಾಕಾಣಿಕಾ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಜೇನು ಕೃಷಿ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮ ಅರಂತೋಡು ಸಹಕಾರಿ ಸಂಘದ ಸಿರಿಸೌಧ ಸಭಾಭವನದಲ್ಲಿ ಅ.21 ನಡೆಯಿತು.ಕಾರ್ಯಕ್ರಮವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ...
Loading posts...
All posts loaded
No more posts
