Ad Widget

ಕನ್ನಡ ರಾಜ್ಯೋತ್ಸವದ ಅಂಗವಾಗಿ ಉಜಿತ್ ಶ್ಯಾಮ್ ಚಿಕ್ಮುಳಿ ಹಾಗೂ ವೀಕ್ಷಿತ್ ಕುತ್ಯಾಳ ಇವರಿಂದ ಯೂಟ್ಯೂಬ್ ನಲ್ಲಿ ಗೀತೆ ಬಿಡುಗಡೆ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹೊಸದಾಗಿ ರಚಿಸಲಾದ ಗೀತೆಯನ್ನು ಯೂಟ್ಯೂಬ್ ನಲ್ಲಿ ಟಾಲೆಂಟ್ ಹಂಟರ್ಸ್ ಎಂಬ ಚಾನೆಲ್ ನಲ್ಲಿ ನವಂಬರ್ 1 ರಂದು ಬಿಡುಗಡೆ ಮಾಡಲಾಯಿತು. ನಮ್ಮ‌ ಕನ್ನಡದ ಜನಪ್ರಿಯ ಸಂಸ್ಕೃತಿಯನ್ನು ಎತ್ತಿ ತೋರಿಸುವ ಮೂಲಕ ಹೊಸ ಪ್ರಯತ್ನದಲ್ಲಿ ಗಾಯಕನಾಗಿ ಉಜಿತ್ ಶ್ಯಾಮ್ ಚಿಕ್ಮುಳಿ, ಕೊಳಲಿನಲ್ಲಿ ವೀಕ್ಷಿತ್ ಕುತ್ಯಾಳ ಇವರಿದ್ದು ಉತ್ತಮವಾಗಿ ಮೂಡಿಬಂದಿದೆ. ವೀಕ್ಷಿಸಲು ಇಲ್ಲಿ ಕ್ಲಿಕ್...

ಸುಳ್ಯದ ಇಬ್ಬರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಇಂದು ಮಂಗಳೂರಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸುಳ್ಯದ ದೈಹಿಕ ಶಿಕ್ಷಣ ಶಿಕ್ಷಕ ದೊಡ್ಡಣ್ಣ ಬರೆಮೇಲು, ಹಾಗೂ ಪ್ರಗತಿಪರ ಕೃಷಿಕ ವಿಶ್ವನಾಥ ಪೈ ಯವರಿಗೆ ಪ್ರಶಸ್ತಿ ಪ್ರಧಾನ ನಡೆಯಿತು. ಸಂಸದ ನಳೀನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರು ಮತ್ತಿತರರು ಉಪಸ್ಥಿತರಿದ್ದರು.
Ad Widget

ಸುಂಟಿಕೊಪ್ಪದಲ್ಲೊಬ್ಬ ಕನ್ನಡದ ಅಭಿಮಾನಿಯಿಂದ ಕನ್ನಡ ರಾಜ್ಯೋತ್ಸವಕ್ಕೆ ವಿಶೇಷ ಮೆರುಗು

ಕೊಡಗಿನ ಸುಂಟಿಕೊಪ್ಪ ಎಂಬಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ಥಳೀಯ ನಿವಾಸಿ ಎಂ.ಎಸ್. ರವಿ ಎಂಬುವವರು ಕನ್ನಡದ ಧ್ವಜ ಮತ್ತು ಕನ್ನಡದ ಪೇಟವನ್ನು ಧರಿಸಿ ಪೇಟೆಯಲ್ಲಿ ಸಂಚರಿಸಿ ಜನರಲ್ಲಿ ವಿಶೇಷ ಆಕರ್ಷಣೆಯನ್ನು ಮೂಡಿಸುತ್ತಿದ್ದಾರೆ. ಇವರು ಸತತ 25 ವರ್ಷಗಳಿಂದ ಕನ್ನಡದ ಕಂಪನ್ನು ಬೀರುತ್ತಿದ್ದಾರೆ. ಡಾಕ್ಟರ್ ರಾಜಕುಮಾರ್ ಅಭಿಮಾನಿ ಬಳಗದಲ್ಲಿ ಗುರುತಿಸಿಕೊಂಡು, ಪ್ರಸ್ತುತ ಸುಂಟಿಕೊಪ್ಪ ಡಾಕ್ಟರ್ ಅಂಬೇಡ್ಕರ್ ಸಂಘದ...

ಶುಭವಿವಾಹ : ದೀಪಕ್ ದೋಣಿಮನೆ – ಮಲ್ಲಿಕಾ ಪಟ್ಲಮನೆ

ಕಡಬ ತಾ. ಎಡಮಂಗಲ ಗ್ರಾಮದ ದೋಣಿಮನೆ ದಿ.ಮುತ್ತಪ್ಪ ಗೌಡರ ಪುತ್ರ ದೀಪಕ್ ರ ವಿವಾಹವು ಕಡಬ ತಾ. ಕೊಣಾಜೆ ಗ್ರಾಮದ ಪಟ್ಲ ಮನೆ ರುಕ್ಮಯ್ಯ ಗೌಡರ ಪುತ್ರಿ ಮಲ್ಲಿಕಾ ರೊಂದಿಗೆ ವರನ ಮನೆಯಲ್ಲಿ ಅ.28 ರಂದು ನಡೆಯಿತು.

ಶುಭ ವಿವಾಹ : ಪುನೀತ್ ರವಿ ಹಿರಿಯಡ್ಕ- ಕವಿತಾ ಚಿದ್ಗಲ್ಲು

ದೇವಚಳ್ಳ ಗ್ರಾಮದ ಹಿರಿಯಡ್ಕ ನಿವೃತ್ತ ಶಿಕ್ಷಕ ಬಾಲಕೃಷ್ಣ ಗೌಡ ಮತ್ತು ಶೀಲಾವತಿ ದಂಪತಿಗಳ ಪುತ್ರ ಪುನೀತ್ ರವಿ ಯವರ ವಿವಾಹವು ಗುತ್ತಿಗಾರು ಗ್ರಾಮದ ಕೊಡಂಗೊಳಿ- ಚಿದ್ಗಲ್ಲು ಧರ್ಮಾವತಿ ಮತ್ತು ನಾರಾಯಣ ಗೌಡರ ಪುತ್ರಿ ಕವಿತಾ ಳೊಂದಿಗೆ ಅ.25 ರಂದು ವಧುವಿನ ಮನೆಯಲ್ಲಿ ನಡೆಯಿತು.

ವಿವಾಹ ನಿಶ್ಚಿತಾರ್ಥ: ರಕ್ಷಿತ್ ವಾಲ್ತಾಜೆ – ಅಶ್ವಿನಿ ಕಾಳಮನೆ

ದೇವಚಳ್ಳ ಗ್ರಾಮದ ವಾಲ್ತಾಜೆ ರವೀಂದ್ರ ಹಾಗೂ ಕುಸುಮಾವತಿ ದಂಪತಿಗಳ ಪುತ್ರ ರಕ್ಷಿತ್ ವಿ.ಆರ್. (ವಿನು) ರವರ ವಿವಾಹ ನಿಶ್ಚಿತಾರ್ಥವು ಜಾಲ್ಸೂರು ಗ್ರಾಮದ ಕಾಳಮನೆ ಮಾಧವ ಗೌಡ ಮತ್ತು ಹರಿಣಾಕ್ಷಿ ದಂಪತಿಗಳ ಪುತ್ರಿ ಅಶ್ವಿನಿ ಯೊಂದಿಗೆ ಅ.31 ರಂದು ವಧುವಿನ ಮನೆಯಲ್ಲಿ ನಡೆಯಿತು.

ಗುತ್ತಿಗಾರು: ಬಿಜೆಪಿ ಬೂತ್‌ ಕಾರ್ಯಕರ್ತರ ಸಭೆ

ಗುತ್ತಿಗಾರು ಗ್ರಾಮದ ವಿವಿಧ ಬೂತ್‌ಗಳ  ಬಿಜೆಪಿ ಕಾರ್ಯಕರ್ತರ ಸಭೆಯು ಅ.30ರಂದು ಚಿಕ್ಮುಳಿಯಲ್ಲಿ ನಡೆಯಿತು. ಗುತ್ತಿಗಾರು ಗ್ರಾಮದ ಬೂತ್ ಸಂಖ್ಯೆ 121, 122ನೇ ಬೂತಿನ ಕಾರ್ಯಕರ್ತರ ಸಭೆಯು ಅ 30 ರಂದು ದೇವಿಪ್ರಸಾದ್ ಚಿಕ್ಮುಳಿ ಇವರ ಮನೆಯಲ್ಲಿ ನಡೆಯಿತು. ಸಭೆಗೆ ಮಾನ್ಯ ಶಾಸಕರಾದ ಶ್ರೀ ಎಸ್ ಅಂಗಾರ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ವೆಂಕಟ್ ವಳಲಂಬೆ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಮತ್ತು ಸುಳ್ಯ ಮಂಡಲ...

ಬಿಜೆಪಿ ಸಾಮಾಜಿಕ ಜಾಲತಾಣದ ಪದಗ್ರಹಣ- ಸಂಚಾಲಕರಾಗಿ ಫಯಾಜ್ ಕಡಬ, ಸಹ ಸಂಚಾಲಕರಾಗಿ ಸುಪ್ರೀತ್ ಮೋಂಟಡ್ಕ

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಸಾಮಾಜಿಕ ಜಾಲತಾಣದ ಪದಗ್ರಹಣ ಸಮಾರಂಭ ಇಂದು ಸುಳ್ಯದ ಬಿಜೆಪಿ ಕಚೇರಿಯಲ್ಲಿ ನಡೆಯಿತು. ವೇದಿಕೆಯಲ್ಲಿ ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಭಾ.ಜ.ಪಾ ಸುಳ್ಯ ಮಂಡಲದ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ಜಿಲ್ಲಾ ಸಾಮಾಜಿಕ ಜಾಲತಾಣದ ಸಹ ಸಂಚಾಲಕ ಅಜಿತ್ ಉಳ್ಳಾಲ, ಜಿಲ್ಲಾ ಸಹ ಸಂಚಾಲಕ ಸಂದೀಪ್...

ವಿವಾಹ ನಿಶ್ಚಿತಾರ್ಥ – ರಮ್ಯಶ್ರೀ – ಕುಮಾರ್

ದೇವಚಳ್ಳ ಗ್ರಾಮದ ಮಾವಿನಕಟ್ಟೆ ರಾಧಾಕೃಷ್ಣ ಶ್ರೀಕಟೀಲ್ ರವರ ಪುತ್ರಿ ರಮ್ಯಶ್ರೀ ಯ ವಿವಾಹ ನಿಶ್ಚಿತಾರ್ಥವು ಮಂಡೆಕೋಲು ಗ್ರಾಮದ ಕೊಡೆಂಚಿಕಾರ್ ದಿ. ಬಾಲಕೃಷ್ಣ ಗೌಡರ ಪುತ್ರ ಕುಮಾರ್ ರೊಂದಿಗೆ ಅ.31 ರಂದು ಮಾವಿನಕಟ್ಟೆಯ ಶ್ರೀ ವಿಷ್ಣು ಕಲಾಮಂದಿರದಲ್ಲಿ ನಡೆಯಿತು.

ಕೃಷಿ ಧಾರಣೆಗಳ ಏರಿಳಿತದ ಬಗ್ಗೆ ಮಡಪ್ಪಾಡಿಯ ಎಂ.ಡಿ. ವಿಜಯಕುಮಾರ್ ರವರು ಸಂಗ್ರಹಿಸಿದ ಅಂಕಿ ಅಂಶ – 1980 ರಲ್ಲಿ ಅಡಿಕೆ ದರ ಕೆಜಿ ಗೆ ಕೇವಲ ರೂ.8

ಸುಳ್ಯ ಭಾಗದ ಹೆಚ್ಚು ಜನ ಕೃಷಿಕರಾಗಿದ್ದು ಅತೀ ಹೆಚ್ಚು ಅಡಿಕೆ ಹಾಗೂ ಜತೆಗೆ ರಬ್ಬರ್ ಬೆಳೆಗಾರರನ್ನು ಹೊಂದಿದ್ದಾರೆ. ಈ ಬಾರಿ ಕೃಷಿಕರಿಗೆ ಅಡಿಕೆ ಧಾರಣೆ ಏರಿಕೆಯಿಂದ ರೈತರ ಮೊಗದಲ್ಲಿ ಖುಷಿ ಕಂಡಿದೆ.ಅಡಿಕೆ ಹಾಗೂ ರಬ್ಬರ್ ಧಾರಣೆ ಯ ಬಗ್ಗೆ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಡಪ್ಪಾಡಿಯ ಎಂ.ಡಿ.ವಿಜಯಕುಮಾರ್ ಧಾರಣೆ ಏರಿಳಿತದ ಬಗ್ಗೆ ದಾಖಲಿಸಿದ್ದಾರೆ. 1980 ರಲ್ಲಿ...
Loading posts...

All posts loaded

No more posts

error: Content is protected !!