Ad Widget

ಮಡಪ್ಪಾಡಿ ಸೊಸೈಟಿ ಮಹಾಸಭೆ – ಸದಸ್ಯರಿಗೆ ಶೇ 8 ಡಿವಿಡೆಂಡ್ ಘೋಷಣೆ- ವಿದ್ಯಾರ್ಥಿ ವೇತನ ವಿತರಣೆ

ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ ಸಂಘದ 2019-20 ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ 13 ರಂದು ಸಂಘದ ಅಧ್ಯಕ್ಷ ಪಿ.ಸಿ.ಜಯರಾಮ ಇವರು ಅಧ್ಯಕ್ಷತೆಯಲ್ಲಿ ಯುವಕ ಮಂಡಲ ಸಭಾಭವನದಲ್ಲಿ ನಡೆಯಿತು. ವಾರ್ಷಿಕ ಕಾರ್ಯನಿರ್ವಹಣಾ ವರದಿ ಮತ್ತು ಕಾರ್ಯಸೂಚಿಗಳನ್ನು ಮಂಡಿಸಿದ ಅಧ್ಯಕ್ಷರು ನಮ್ಮ ಸಂಘವು ಈ ಆರ್ಥಿಕ ವರ್ಷದಲ್ಲಿ ವಾರ್ಷಿಕ 22,79,672.90...

ಎಲಿಮಲೆ : ಸೈಕಲ್ ಕೊಡಿಸುವ ನೆಪದಲ್ಲಿ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ – ಸುಬ್ರಹ್ಮಣ್ಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು – ಆರೋಪಿ ಅನಿಲ್ ಅಂಬೆಕಲ್ಲು ಪೋಲೀಸ್ ವಶ

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ಕಿರುಕುಳ ಆರೋಪದ ಮೇಲೆ ಖಾಸಗಿ ಶಾಲೆಯೊಂದರ ಆಡಳಿತಾಧಿಕಾರಿ ಅನಿಲ್ ಅಂಬೆಕಲ್ಲು ಮೇಲೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಂದು ಆರೋಪಿಯ ಬಂಧನವಾಗಿದೆ ಎಂದು ತಿಳಿದುಬಂದಿದೆ. ಎಂಟು ವರ್ಷದ ಬಾಲಕಿಗೆ ಸೈಕಲ್ ಕೊಡಿಸುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಮನೆಯವರಿಗೆ ಗೊತ್ತಾಗಿ ಶಾಲಾ ಆಡಳಿತ ಮಂಡಳಿಗೆ ತಿಳಿಸಿದರೆನ್ನಲಾಗಿದೆ. ಶಾಲೆಯಿಂದ ಆತನನ್ನು...
Ad Widget

ಡಿ.16 : ಅಜಪಿಲ ದೇವಸ್ಥಾನದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹಸಿರುಕಾಣಿಕೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಚಂಪಾ ಷಷ್ಠಿ ಮಹೋತ್ಸವ ಪ್ರಯುಕ್ತ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರೆಕಾಣಿಕೆಯು ಡಿ.16ರಂದು ಹೊರಡಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ನಡೆಯುವ ಹೊರೆಕಾಣಿಕೆಗೆ ಹೊರೆಕಾಣಿಕೆ ನೀಡುವವರು ಡಿ.15 ರಂದು ಅಜಪಿಲ ದೇವಸ್ಥಾನಕ್ಕೆ ತಂದೊಪ್ಪಿಸಬೇಕಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್ ರೈ ಪುಡ್ಕಜೆ ತಿಳಿಸಿದ್ದಾರೆ.

ಸುಬ್ರಹ್ಮಣ್ಯ : ಯುವ ಬ್ರಿಗೇಡ್ ವತಿಯಿಂದ ಸ್ವಚ್ಛತಾ ಕಾರ್ಯ

ಯುವ ಬ್ರಿಗೇಡ್ ಸುಬ್ರಹ್ಮಣ್ಯ ಘಟಕದ ಸದಸ್ಯರಿಂದ ಡಿ 13 ರಂದು ಕುಕ್ಕೆ ಸುಬ್ರಹ್ಮಣ್ಯದ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಕುಮಾರಧಾರ ನದಿ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ಸೂರ್ಯ ಭಟ್, ರಮೇಶ್ ಭಟ್, ಅಶ್ವಥ್ ಕೊನಡ್ಕ, ಮನೋಜ್ ದೇವರಗದ್ದೆ, ಅವನೀಶ್ ಭಟ್, ರತನ್ , ಅಭಿಷೇಕ್, ಕಾರ್ತಿಕ್ ರಾವ್, ನಾಗೇಶ್ ಮಣಿಯಾನ...

ಗುತ್ತಿಗಾರು : ವಿದ್ಯಾರ್ಥಿನಿ ಅನಾರೋಗ್ಯದಿಂದ ಮೃತ್ಯು

ಗುತ್ತಿಗಾರು ಗ್ರಾಮದ ಲಿಂಗಪ್ಪ ಗೌಡ ಪೈಲೂರುರವರ ಪುತ್ರಿ ಯಶಸ್ವಿನಿ ಇಂದು ಮುಂಜಾನೆ ಅನಾರೋಗ್ಯದಿಂದ ಮೃತಪಟ್ಟ ಘಟನೆ ವರದಿಯಾಗಿದೆ. ಈಕೆ ಗುತ್ತಿಗಾರಿನ ಕುರಿಯಾಕೋಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಕೆಲವು ದಿನಗಳಿಂದ ಈಕೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಳೆಂದು ತಿಳಿದುಬಂದಿದೆ. ಮೃತಳು ತಂದೆ, ತಾಯಿ ದಮಯಂತಿ, ಸಹೋದರಿವೃಂದಶ್ರೀ ಅಗಲಿದ್ದಾರೆ.

ಭಾರಿ ಸದ್ದಿಗೆ ಬೆಚ್ಚಿ ಬಿದ್ದ ಹರಿಹರಪಲ್ಲತ್ತಡ್ಕದ ಜನತೆ – ಕಾರಣ ನಿಗೂಢ

ಹರಿಹರ ಪಳ್ಳತ್ತಡ್ಕದಲ್ಲಿ ಡಿ.13ರಂದು ರಾತ್ರಿ 10 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಭಾರಿ ಶಬ್ದವೊಂದು ಕೇಳಿ ಬಂದಿರುವ ಘಟನೆ ನಡೆದಿದೆ.ಈ ಶಬ್ದ ಕೇಳಿ ಬಂದಿದ್ದು ಜನ ಭಯಭೀತರಾಗಿದ್ದಾರೆ‌. ಜನರಿಗೆ ಭೂಕಂಪ ಆಯಿತೆನ್ನುವಷ್ಟು ಶಬ್ದ ಕೇಳಿಸಿದ್ದು. ಪರಿಸರದ ಮನೆಗಳಿಂದ ಜನ ಹೊರಗೆ ಓಡಿ ಬಂದಿದ್ದಾರೆ. ಕಲ್ಲೇಮಠದ ಕಡೆಯಿಂದ ಶಬ್ದ ಕೇಳಿಸಿತು ಎಂದು ಸ್ಥಳಿಯರು ತಿಳಿಸಿದ್ದಾರೆ. ಘಟನೆ ಗ್ರಾಮದಲ್ಲಿ ಭೀತಿಯ...

ಡಿ.19 : ಸುಳ್ಯ ತಾಲೂಕು ಖಾಸಗಿ ಶಿಕ್ಷಕರ ಒಕ್ಕೂಟ ಉದ್ಘಾಟನೆ ಮತ್ತು ಸದಸ್ಯತ್ವ ನೋಂದಾವಣೆ ಕಾರ್ಯಕ್ರಮ

ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗ(ರಿ)(ಶಿಕ್ಷಕರ ಮತ್ತು ಉಪನ್ಯಾಸಕರ ಒಕ್ಕೂಟ) ಇದರ ಸುಳ್ಯ ತಾಲೂಕು ಘಟಕದ ಉದ್ಘಾಟನೆ ಮತ್ತು ಸದಸ್ಯತ್ವ ನೋಂದಣಿ ಕಾರ್ಯಕ್ರಮ ಡಿ.19 ಶನಿವಾರ ದಂದು ಅಪರಾಹ್ನ 02:00 ಗಂಟೆಗೆ ರಥಬೀದಿಯಲ್ಲಿರುವ ರೋಟರಿ ಆಂಗ್ಲ ಮಾಧ್ಯಮ ಹಿ.ಪ್ರಾ ಶಾಲೆ, ಸುಳ್ಯ ಇಲ್ಲಿ ನಡೆಯಲಿದೆ. ಖಾಸಗಿ, ಅತಿಥಿ ಹಾಗೂ ಗೌರವ ಶಿಕ್ಷಕರು ಸದಸ್ಯತನಕ್ಕಾಗಿ2 ಪಾಸ್‌ಪೋರ್ಟ್ ಸೈಜ್...

ಹಸೀನ ಸಂಪಾಜೆ ಯವರಿಗೆ ಸಜ್ಜನ ಚಂದನ ಸದ್ಭಾವನಾ ಪ್ರಶಸ್ತಿ

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಮತ್ತು ಚಂದನ ಸಾಹಿತ್ಯ ವೇದಿಕೆಯು ಡಿಸೆಂಬರ್ 13 ರಂದು ಪುತ್ತೂರಿನ ರೋಟರಿ ಟ್ರಸ್ಟ್ ನ ಸಭಾಂಗಣದಲ್ಲಿ ಜಂಟಿಯಾಗಿ ಆಯೋಜಿಸಿದ್ದ ಭಾವೈಕ್ಯತಾ ಕವಿಗೋಷ್ಠಿ ಯಲ್ಲಿ ಸಂಪಾಜೆಯ ಶ್ರೀಮತಿ ಹಸೀನಾ ರವರಿಗೆ ಸಜ್ಜನ ಚಂದನ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಸ್ತುತ ಇವರು ಬೆಳ್ಳಾರೆಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ಧಾರೆ.

ರಂಗತ್ತಮಲೆ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ – ಮತದಾನ ಬಹಿಷ್ಕಾರಕ್ಕೆ ನಿರ್ಧಾರ

ಆಲೆಟ್ಟಿ ಗ್ರಾಮದ ರಂಗತ್ತಮಲೆ ನಿವಾಸಿಗಳು ರಸ್ತೆ ಅಭಿವೃದ್ಧಿ ಮತ್ತು ಕುಡಿಯುವ ನೀರಿನ ಸಮಸ್ಯೆ ಈಡೇರಿಸುವಂತೆ ಹಾಗೂ ಕುಡಿಯುವ ನೀರಿನ ಟ್ಯಾಂಕ್ ದುರ್ಬಳಕೆ ಆಗುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಮೂಲಭೂತ ಅವಶ್ಯಕತೆಗಳನ್ನು ಅಧಿಕಾರಿಗಳು ಈಡೇರಿಸದಿದ್ದರೇ ಮತದಾನ ಬಹಿಷ್ಕಾರ ನಡೆಸುವುದೆಂದೂ ತೀರ್ಮಾನಿಸಿದ್ದಾರೆ.

ಟೈಲರ್ ಅಸೋಶಿಯೇಷನ್ ಮಹಾಸಭೆ

ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಸುಳ್ಯ ಕ್ಷೇತ್ರ ಸಮಿತಿಯ ಮಹಾಸಭೆಯು ಶಿವಕೃಪಾ ಕಲಾ ಮಂದಿರದಲ್ಲಿ ನಡೆಯಿತು. ಸ್ಥಾಪಕಾದ್ಯಕ್ಷ ನರಸಿಂಹ ಟೈಲರ್ ದೀಪ ಬೆಳಗಿಸಿ ಕಾರ್ಯ ಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಸಮಿತಿ ಪ್ರ. ಕಾರ್ಯದರ್ಶಿ ಜಯಂತ ಉರ್ಲಾಂಡಿ ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆ ಟಿ. ದಿವಾಕರ ಜಾಲ್ಸೂರು ವಹಿಸಿದ್ದರು. ಈ ಸಂದರ್ಭದಲ್ಲಿ ನರಸಿಂಹ ಟೈಲರ್, ಜಯಂತ್...
Loading posts...

All posts loaded

No more posts

error: Content is protected !!