Ad Widget

ಕೊಲ್ಲಮೊಗ್ರ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಕೊಲ್ಲಮೊಗ್ರ ಗ್ರಾ.ಪಂ.ನ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಳಾಗಿ ಐವರು ನಾಮಪತ್ರ ಸಲ್ಲಿಸಿದ್ದು, 1 ನೇ ವಾರ್ಡ್ ನಿಂದ ತಾ.ಪಂ.ಸದಸ್ಯ ಉದಯ ಕೊಪ್ಪಡ್ಕ , ಉದಯ ಶಿವಾಲ, ಮೋಹಿನಿ ಕಟ್ಟಮೈಲ, ಶುಭಲತ ಕಟ್ಟ ಗೋವಿಂದನಗರ, 2 ನೇ ವಾರ್ಡ್ ನಿಂದ ಜಯಶ್ರೀ ಎಸ್. ಚಾಂತಾಳ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಕೊಲ್ಲಮೊಗ್ರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಕೊಲ್ಲಮೊಗ್ರು ಗ್ರಾ.ಪಂ. ಗೆ ಕಾಂಗ್ರೆಸ್ ಬೆಂಬಲಿತ 12 ಅಭ್ಯರ್ಥಿಗಳು ಡಿ.12 ರಂದು ನಾಮಪತ್ರ ಸಲ್ಲಿಸಿದ್ದಾರೆ.ಕೊಲ್ಲಮೊಗ್ರು ವಾರ್ಡ್ 1 ರಿಂದ ಹಿಂದುಳಿದ ವರ್ಗ ಎ ಮಹಿಳೆ ಸ್ಥಾನದಿಂದ ಕಾಂಗ್ರೆಸ್‌ನ ಶಶಿಕಲಾ ಚಾಳೆಪ್ಪಾಡಿ, ಅ.ಜಾ.ಮಹಿಳೆಗೆ ಕಾಂಗ್ರೆಸ್‌ನ ಕುಮುದಾ ಕೊಳಗೆ, ಸಾಮಾನ್ಯದಿಂದ ಕಾಂಗ್ರೆಸ್‌ನ ಶೇಖರ ಅಂಬೆಕಲ್ಲು ಹಾಗೂ ಕಮಲಾಕ್ಷ ಪೆರ್ನಾಜೆ, ವಾರ್ಡ್ 2 ರಿಂದ ಹಿ.ವ. ಎ ಯಿಂದ ಕಾಂಗ್ರೆಸ್‌ನ...
Ad Widget

ಕೊಲ್ಲಮೊಗ್ರ : ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಶ್ರೀ ನಾಮಪತ್ರ ಸಲ್ಲಿಕೆ

ಕೊಲ್ಲಮೊಗ್ರ 2 ನೇ ವಾರ್ಡ್ ನ ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಚಾಂತಾಳ ಶಿವರಾಮ ರವರ ಪತ್ನಿ ಶ್ರೀಮತಿ ಜಯಶ್ರೀ ಎಸ್. ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಪೈಂಬೆಚ್ಚಾಲು ಎಸ್ಸೆಸ್ಸೆಫ್ ವಾರ್ಷಿಕ ಮಹಾಸಭೆ; ಅಧ್ಯಕ್ಷರಾಗಿ ಆಸಿಫ್ ಕೆ.ಎಂ.ಪುನರಾಯ್ಕೆ

ಎಸ್ಸೆಸ್ಸೆಫ್ ಪೈಂಬೆಚ್ಚಾಲು ಶಾಖೆ ಯ ವಾರ್ಷಿಕ ಮಹಾಸಭೆ ಯು, ಡಿಸೆಂಬರ್ ೧೨ ರಂದು, ಬಿಜೆಎಂ ವಠಾರದಲ್ಲಿ ಶಾಖಾಧ್ಯಕ್ಷರಾದ ಆಸಿಫ್ ಕೆ. ಎಂ.ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಸ್ಥಳೀಯ ಖತೀಬ್ ಉಸ್ತಾದ್ ಅಬ್ದುನ್ನಾಸಿರ್ ಸುಖೈಫಿ ಪ್ರಾರ್ಥನೆಯ ಮೂಲಕ ಸಭೆಗೆ ಚಾಲನೆ ನೀಡಿ, ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸದರ್ ಉಸ್ತಾದ್ ಬಿ.ಯಂ.ಇಸ್ಮಾಯಿಲ್ ಸಖಾಫಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಟಿಎಎಚ್ ಸಅದಿ...

ಸುಳ್ಯ : ನವೋದಯ ಚೈತನ್ಯ ವಿಮಾ ಚೆಕ್‌ ವಿತರಣೆ

ಡಿಸೆಂಬರ್ 14 ರಂದು ಸುಳ್ಯ ಸಿ ಎ ಬ್ಯಾಂಕ್ ನಲ್ಲಿರುವ ಸತ್ಯಶ್ರೀ ನವೋದಯ ಸ್ವ ಸಹಾಯ ಸಂಘ ಕಲ್ಲಗುಡ್ಡೆ ಅಜ್ಜಾವರ ಇದರ ಸದಸ್ಯೆ ಶ್ರೀಮತಿ ಬೇಬಿ ಯವರಿಗೆ ಚೈತನ್ಯ ವಿಮಾ ಚೆಕ್‌ ನ್ನು ಸಿ ಎ ಬ್ಯಾಂಕ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ವಿತರಿಸಿದರು. ಈ ಸಂದರ್ಭದಲ್ಲಿ ಸುಳ್ಯ ವಲಯ ಪ್ರೇರಕರಾದ ಶ್ರೀಧರ ಮಾಣಿಮರ್ಧು ಸಂಘದ ಅಧ್ಯಕ್ಷೆ ಶ್ರೀಮತಿ...

ದೊಡ್ಡತೋಟ ಶಾಲೆಯಲ್ಲಿ ಶ್ರಮದಾನ

ದೊಡ್ಡತೋಟ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಯಸ್.ಡಿ.ಯಂ.ಸಿ. ಮತ್ತು ವಿಪತ್ತು ನಿರ್ವಹಣಾ ಘಟಕ ಹಾಗೂ ಹಿರಿಯ ವಿದ್ಯಾರ್ಥಿಸಂಘ ಮತ್ತು ವಿದ್ಯಾರ್ಥಿ ಪೋಷಕರಿಂದ ಶಾಲೆಯ ಮೈದಾನ, ಶಾಲಾ ಆವರಣವನ್ನು ಶ್ರಮದಾನದ ಮೂಲಕ ಡಿ.13 ಸ್ವಚ್ಛಗೊಳಿಸಲಾಯಿತು.

ಜಬಳೆ : ತೋಡಿಗೆ ಬಿದ್ದ ಸ್ಕೂಟಿ – ಸವಾರನಿಗೆ ಗಾಯ

ಎಲಿಮಲೆ ಸಮೀಪ ದೊಡ್ಡತೋಟ ಕಡೆಯಿಂದ ಎಲಿಮಲೆ ಕಡೆಗೆ ತೆರಳುತ್ತಿದ್ದ ಸ್ಕೂಟಿ ಚಾಲಕನ ನಿಯಂತ್ರಣ ತಪ್ಪಿ ಜಬಳೆ ಯಲಿರುವ ತೋಡಿಗೆ ಉರುಳಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಸವಾರ ಬೊಮ್ಮಾರಿನವರಾಗಿದ್ದು ಬೆನ್ನಿನ ಭಾಗಕ್ಕೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.

ಸಾವಿತ್ರಿ ಕಣೆಮರಡ್ಕ ರಿಗೆ ಪಡುಮಲೆ ಯಶಸ್ವಿ ಸಾಧನಾ ಪ್ರಶಸ್ತಿ

ದೇವಚಳ್ಳ ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕಿಯಾಗಿರುವ ಸಾವಿತ್ರಿ ಕಣೆಮರಡ್ಕ ತನ್ನ ವೃತ್ತಿ ಸಾಧನೆ ಗುರುತಿಸಿ ರಾಜ್ಯ ಸರಕಾರ ಸಿಬ್ಬಂದಿ ಸೇವಾ ಪುರಸ್ಕಾರ ನೀಡಿ ಗೌರವಿಸಿತ್ತು. ಇದೀಗ ಇವರ ಈ ಸಾಧನೆಗೆ ಮತ್ತೊಂದು ಕಿರೀಟ ಲಭಿಸಿದ್ದು ಉಡುಪಿಯ ಯಶಸ್ವಿ ನಾಗರಿಕಾ ಸೇವಾ ಸಂಘದ ವತಿಯಿಂದ ಪಡುಮಲೆ ಯಶಸ್ವಿ ಸಾಧನಾ ಪ್ರಶಸ್ತಿ ನೀಡಿ ಗೌರವಿಸಿದೆ. ತಾ.ಪ.ಸುಳ್ಯ , ಗ್ರಾಮ ಪಂಚಾಯತ್...

ಕುಕ್ಕೆ‌ ಸುಬ್ರಹ್ಕಣ್ಯ ಷಷ್ಠಿ ಹಿನ್ನೆಲೆ ಡಿ.17 ರಿಂದ 20 ರವರೆಗೆ ಅಂತರ್ ಜಿಲ್ಲೆ, ಅಂತರ್ ರಾಜ್ಯದ ಭಕ್ತರಿಗೆ ದೇವಾಲಯ ಪ್ರವೇಶ ನಿಷೇಧ – ಮುಂಗಡ ಕಾದಿರಿಸಿದವರಿಗೆ ಮಾತ್ರ ಅವಕಾಶ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಜಾತ್ರೆ ನಡೆಯುತ್ತಿದ್ದು, ಸಾವಿರಾರು ಭಕ್ತರು ಸೇರುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಗಡ ನೊಂದಾಯಿಸಿರುವ ಭಕ್ತಾದಿಗಳನ್ನು ಹೊರತುಪಡಿಸಿ ಡಿಸೆಂಬರ್ 17 ರಿಂದ ನಾಲ್ಕು ದಿನಗಳ ಕಾಲ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ರಥಬೀದಿಗೆ ಭಕ್ತರ ಪ್ರವೇಶಕ್ಕೆ ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಆದೇಶಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ರಥೋತ್ಸವ...

ಸುಳ್ಯ : ವೆಂಕಟರಮಣ ಸೊಸೈಟಿಯ ಕ್ಯಾಲೆಂಡರ್ ‌ಬಿಡುಗಡೆ

ಸುಳ್ಯದ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯವರ 2021 ನೇ ವರ್ಷದ ಕ್ಯಾಲೆಂಡರ್ ನ್ನು ಡಿ.14 ರಂದು ಬಿಡುಗಡೆಯಾಯಿತು. ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ಪಿ.ಸಿ ಜಯರಾಮ, ಉಪಾಧ್ಯಕ್ಷ ಮೋಹನ್ ರಾಮ್ ಸುಳ್ಳಿ, ನಿರ್ದೇಶಕರುಗಳಾದ ಜಾಕೆ ಸದಾನಂದ, ಚಂದ್ರಾಕೋಲ್ಚಾರ್, ಪಿ.ಎಸ್. ಗಂಗಾಧರ, ಕೆ.ಸಿ ನಾರಾಯಣ ಗೌಡ, ಸದಾನಂದ ಕೆ.ಸಿ, ದಾಮೋದರ ನಾರ್ಕೋಡು, ಹೇಮಚಂದ್ರ ಕದಿಕಡ್ಕ, ದಿನೇಶ್...
Loading posts...

All posts loaded

No more posts

error: Content is protected !!