Ad Widget

ಕೊಲ್ಲಮೊಗ್ರ : ಟಿಕೇಟ್ ಹಂಚಿಕೆಯಲ್ಲಿ ಅಸಮಾಧಾನ – ಬಿಜೆಪಿ ಕಾರ್ಯಕರ್ತರಿಂದ ರಾಜೀನಾಮೆಗೆ ಸಿದ್ಧತೆ

ಕೊಲ್ಲಮೊಗ್ರ ಗ್ರಾಮ ಪಂಚಾಯತ್ ನ ಕಲ್ಮಕಾರು ವಾರ್ಡ್ 1 ರಲ್ಲಿ ಆಭ್ಯರ್ಥಿಗಳ ಆಯ್ಕೆ ಬಗ್ಗೆ ಗೊಂದಲವಿದ್ದು, ಕೊನೆಯ ಕ್ಷಣದಲ್ಲಿ ಮಂಡಲ ಸಮಿತಿಯು ಪಕ್ಷದ ನಿಷ್ಠಾವಂತರಿಗೆ ಮಣೆ ಹಾಕಿಲ್ಲವೆಂದು ಕಾರ್ಯಕರ್ತರು ಸಾಮೂಹಿಕ ರಾಜೀನಾಮೆಗೆ ಸಜ್ಜಾಗಿದ್ದಾರೆ.ಇಲ್ಲಿ ಬಿಜೆಪಿ ಬೆಂಬಲಿತರಾಗಿ ಸ್ಪರ್ಧೆಗೆ ಅಶ್ವಥ್ ಯಾಲದಾಳು ಮತ್ತು ಪುಷ್ಪರಾಜು ಪಡ್ಪು ಅವರಿಗೆ ಪಕ್ಷ ಟಿಕೇಟ್ ನೀಡಿದೆ. ಅಶ್ವಥ್ ಯಾಲದಾಳು ಅವರಿಗೆ ಟಿಕೆಟ್...

ಸಂಪಾಜೆ ಎಸ್ ಡಿ ಪಿ ಐ ಬೆಂಬಲಿತ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

ಸಂಪಾಜೆ (ದ. ಕ) ಗ್ರಾಮ ಪಂಚಾಯತ್ ನ 5 ನೇ ವಾರ್ಡ್ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಎಸ್ ಡಿ ಪಿ ಐ ಬೆಂಬಲಿತ ಅಭ್ಯರ್ಥಿಯಾಗಿ ರಿಫಾತ್ ಜಿ. ಎಸ್ ನಾಮಪತ್ರ ಸಲ್ಲಿಸಿದ್ದಾರೆ.
Ad Widget

ಸುಳ್ಯದಲ್ಲಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ ಅಸ್ತಿತ್ವಕ್ಕೆ : ಅಧ್ಯಕ್ಷರಾಗಿ ಶೈಲೇಂದ್ರ ಸರಳಾಯ – ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಎಸ್ ವೈ

ಸುಳ್ಯ ನಗರದಲ್ಲಿ ಕಾರ್ಯಚರಿಸುತ್ತಿರುವ ಮೊಬೈಲ್ ಫೋನ್ ಅಂಗಡಿಗಳ ಉದ್ಯಮಿಗಳು ಒಟ್ಟುಗೂಡಿ ಮಾರಾಟಗಾರರ ಸಮಸ್ಯೆಗಳಿಗೆ ಸಹಾಯಕವಾಗುವ ನಿಟ್ಟಿನಲ್ಲಿ ನೂತನವಾಗಿ ಅಸೋಶಿಯೇಶನ್ ಅನ್ನು ರಚಿಸಲಾಯಿತು. ನೂತನ ಸಮಿತಿ ರಚನಾ ಸಭೆಯು ಡಿಸೆಂಬರ್ 14ರಂದು ಬಾಳೆಮಕ್ಕಿ ದ್ವಾರಕಾ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ತಮ್ಮ ಸಂಘಟನೆಯ ಹಿತಾಶಕ್ತಿಗಳು ಮತ್ತು ಸಾಮಾಜಿಕವಾಗಿ ಜನ ಸ್ಪಂದನೆಯನ್ನು ರೂಪಿಸುವ ಕುರಿತು ಚರ್ಚೆ ಕಾರ್ಯಕ್ರಮ ನಡೆಯಿತು....

ಕಲ್ಮಡ್ಕ : ಎಸ್ ಡಿ ಪಿ ಐ ಬೆಂಬಲಿತ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

ಕಲ್ಮಡ್ಕ ಪಂಚಾಯತ್ ಚುನಾವಣೆಗೆ ಎಸ್ ಡಿ ಪಿ ಐ ಬೆಂಬಲಿತ ಅಭ್ಯರ್ಥಿಯಾಗಿ 1ನೇ ವಾರ್ಡ್ ನಿಂದ ಹಮೀದ್ ಮರಕ್ಕಡ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಐವರ್ನಾಡು : ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಐವರ್ನಾಡು ಗ್ರಾಮ ಪಂಚಾಯತ್ ಚುನಾವಣೆಗೆ ದೇರಾಜೆ ವಾರ್ಡ್ ನಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ದೇವಿಪ್ರಸಾದ್ ಎಸ್.ಎನ್ ಮತ್ತು ಬಾಂಜಿಕೋಡಿ ವಾರ್ಡ್ ನಿಂದ ರಂಜನ್ ಮೂಲೆತೋಟ, ನಿಡುಬೆ ವಾರ್ಡ್ ನಿಂದ ಚಂದ್ರಕಲಾ ಜಬಳೆ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ರಾಜ್ಯ ಮಟ್ಟದ ಯೋಗಾಸನ ಕ್ರೀಡಾ ಚಾಂಪಿಯನ್ ಶಿಪ್ ಗೆ ಸುಳ್ಯದ ವಿದ್ಯಾರ್ಥಿಗಳು

ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಕ್ರೀಡಾ ಸಂಸ್ಥೆ (ರಿ) ನಡೆಸುವ 40ನೇ ಕರ್ನಾಟಕ ರಾಜ್ಯ ಯೋಗಾಸನ ಕ್ರೀಡಾ ಚಾಂಪಿಯನ್ ಶಿಪ್ - 2020 ಡಿಸೆಂಬರ್ 16 ರಿಂದ 25 ರ ತನಕ ನಡೆಯಲಿದೆ. ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸುಳ್ಯದ ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ವಿದ್ಯಾರ್ಥಿಗಳಾದ ಅವನಿ ಎಂ.ಎಸ್. ಸುಳ್ಯ, ಶರತ್ ಮರ್ಗಿಲಡ್ಕ, ಅಧಿತಿ...

ಐವರ್ನಾಡು : ಪಕ್ಷೇತರ ಅಭ್ಯರ್ಥಿಯಾಗಿ ಅಶೋಕ್ ಎಡಮಲೆ ನಾಮಪತ್ರ

ಐವರ್ನಾಡು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅಶೋಕ್ ಎಡಮಲೆ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಡಿ.16 : ಅರೆಬಾಸೆ ಕಿರುಚಿತ್ರ ಕೋಲ ಬಿಡುಗಡೆ

ಹವಿನ್ ಗುಂಡ್ಯ ನಿರ್ದೇಶನದ ಕೋಲ ತಂಡದಿಂದ ನಿರ್ಮಾಣಗೊಂಡ ಅರೆಬಾಸೆ ಕಿರುಚಿತ್ರ "ಕೋಲ" ಡಿಸೆಂಬರ್ 16 ರಂದು ಬಿಡುಗಡೆ ಮತ್ತು ಪ್ರದರ್ಶನಗೊಳ್ಳಲಿದೆ. ಜ್ಯೋತಿ ಸರ್ಕಲ್ ನ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಚಿತ್ರ ತಂಡ ತಿಳಿಸಿದೆ.

ಕಳಂಜ : ಪಕ್ಷೇತರ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಕಳಂಜ ಗ್ರಾಮ ಪಂಚಾಯಿತಿನ ಪಕ್ಷೇತರ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದರು. 1ನೇ ವಾರ್ಡಿನಿಂದ ಜಮಾಲ್ ಮಣಿಮಜಲು ಮತ್ತು ಅನಿಲ್ ಕುಮಾರ್ ಮಣಿಮಜಲು ಹಾಗೂ 2ನೇ ವಾರ್ಡಿನಿಂದ ಹೈದರಾಲಿ ಕಳಂಜ ಮತ್ತು ಲಕ್ಷ್ಮೀನಾರಾಯಣ ಕಳಂಜ ನಾಮಪತ್ರ ಸಲ್ಲಿಸಿದರು.

ಸ್ಥಳೀಯ ಮುಖಂಡರು ಹಾಗೂ ನ.ಪಂ.ಮಾಜಿ ಅಧ್ಯಕ್ಷರು ಸದಸ್ಯರೊಂದಿಗೆ ಸಂವಾದ ಕಾರ್ಯಕ್ರಮ – ಸುಳ್ಯ ನಗರದ ಸಮಗ್ರ ಅಭಿವೃದ್ಧಿಗೆ ಪಣತೊಟ್ಟ ಅಧ್ಯಕ್ಷ ವಿನಯಕುಮಾರ್ ಕಂದಡ್ಕ

ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾಗಿ ಈಗಾಗಲೇ ಆಯ್ಕೆಗೊಂಡಿರುವ ವಿನಯ ಕುಮಾರ್ ಕಂದಡ್ಕ ರವರು ಕಳೆದ ಕೆಲವು ದಿನಗಳ ಹಿಂದೆ ನಗರದ ವಿವಿಧ ಸಮಸ್ಯೆಗಳ ಬಗ್ಗೆ ಸುಳ್ಯ ತಾಲೂಕು ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದ್ದರು.ಅದೇ ರೀತಿ ಇಂದು ನಗರ ಪಂಚಾಯತ್ ಸಭಾಂಗಣದಲ್ಲಿ ಸುಳ್ಯದ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ನಗರ ಪಂಚಾಯತ್ ಮಾಜಿ ಅಧ್ಯಕ್ಷರುಗಳೊಂದಿಗೆ ನಗರದ ಅಭಿವೃದ್ಧಿ...
Loading posts...

All posts loaded

No more posts

error: Content is protected !!