Ad Widget

ಹಳ್ಳಿ ಪೈಟ್ ಫೊಟೋ ಕಳುಹಿಸಿ 9449387044

ನಿಮ್ಮ ನಿಮ್ಮ ಗ್ರಾಮಗಳಲ್ಲಿ ನಡೆಯುತ್ತಿರುವ ಚುನಾವಣೆಗೆ ಸಂಬಂಧಿಸಿದ ಪೋಟೋ ನೀಡಿ ಸಹಕರಿಸಿ. ಜತೆಗೆ ಸ್ವಲ್ಪ ವಿವರಣೆ ಕಳುಹಿಸಿ. ನಾವು ಅದನ್ನು ಅಮರ ಸುದ್ದಿ ವೆಬ್ಸೈಟ್ ಪ್ರಕಟಿಸುತ್ತೇವೆ.ವಾಟ್ಸಾಪ್ ಸಂಖ್ಯೆ : 9449387044

ರಾಷ್ಟ್ರೀಯ ಕ್ರೀಡಾಪಟು ಸಂಶೀರ್ ಜಯನಗರ ರವರಿಗೆ ಸನ್ಮಾನ ಕಾರ್ಯಕ್ರಮ

ರಾಷ್ಟ್ರೀಯ ಕ್ರೀಡಾಪಟು, ಉದ್ದ ಜಿಗಿತ , ಓಟ , ಮುಂತಾದ ಸ್ಪರ್ಧೆಗಳಲ್ಲಿ ಹಲವಾರು ಬಾರಿ ಚಿನ್ನದ ಪದಕವನ್ನು ಪಡೆದು ದೇಶಕ್ಕೆ ಕೀರ್ತಿ ತಂದ ಸಂಶೀರ್ ಜಯನಗರ ರವರಿಗೆ ಯೋನೆಕ್ಸ್ ಶಟಲ್ ಬ್ಯಾಡ್ಮಿಂಟನ್ ಕ್ಲಬ್. ರಿ. ಸುಳ್ಯ ವತಿಯಿಂದ ಡಿಸೆಂಬರ್ 25ರಂದು ಸುಳ್ಯ ಕುರುಂಜಿಗುಡ್ಡೆ ಒಳ ಕ್ರೀಡಾಂಗಣದಲ್ಲಿ ನಡೆದ ಯೋನೆಕ್ಸ್ ಡೇ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಳೆದ...
Ad Widget

ಸುಳ್ಯ : ಪತ್ರಕರ್ತರ ಸಂಘದ ವತಿಯಿಂದ ಭವ್ಯ ಸಂಕಲ್ಪ ದಿನಾಚರಣೆ, ಸನ್ಮಾನ

ಅಮರ ಸುಳ್ಯದ ಶಿಲ್ಪಿ ಡಾ.ಕುರುಂಜಿ ವೆಂಕಟ್ರಮಣ ಗೌಡರ 92 ನೇ ಹುಟ್ಟುಹಬ್ಬದ ಪ್ರಯುಕ್ತ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ‘ಭವ್ಯ ಸುಳ್ಯ ಸಂಕಲ್ಪ ದಿನಾಚರಣೆ’ ಕಾರ್ಯಕ್ರಮ ಡಿ.26ರಂದು ಸ್ನೇಹ ಶಿಕ್ಷಣ ಸಂಸ್ಥೆ ಯಲ್ಲಿ ನಡೆಯಿತು. ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣ ಬೆಟ್ಟ ಅಧ್ಯಕ್ಷತೆ ವಹಿಸಿದ್ದರು. ಎ.ಒ.ಎಲ್.ಇ ನಿರ್ದೇಶಕ ಕೆ.ವಿ.ಹೇಮನಾಥ ಉದ್ಘಾಟಿಸಿದರು. ಸ್ನೇಹ ಶಿಕ್ಷಣ ಸಂಸ್ಥೆಯ...

ಒಳಮೊಗ್ರು : ವಿದ್ಯುತ್ ಶಾಕ್ ಗೆ ಯುವ ಉದ್ಯಮಿ ಬಲಿ

ಅಲ್ಯುಮಿನಿಯಂ ಕೊಕ್ಕೆಯ ಮೂಲಕ ಅಡಿಕೆ ಕೊಯ್ಯುತ್ತಿದ್ದ ಸಂದರ್ಭ ವಿದ್ಯುತ್ ತಂತಿಗೆ ಕೊಕ್ಕೆ ತಾಗಿ ಯುವ ಉದ್ಯಮಿಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ಇಂದು ನಡೆದಿದೆ.ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ನಿವಾಸಿ ಬಾಬು ಪೂಜಾರಿ ಎಂಬವರ ಪುತ್ರ ರವೀಂದ್ರ ಪೂಜಾರಿ (36) ಮೃತರು. ಮಂಗಳೂರಿನಲ್ಲಿ ಉದ್ಯಮಿ ಆಗಿರುವ ರವೀಂದ್ರ ಅವರು ತಮ್ಮ ತೋಟದ ಅಡಕೆ ಮರದಿಂದ ಅಲ್ಯೂಮಿನಿಯಂ...

ತಾಹಿರಾ ಪ್ಯಾಭ್ರಿಕ್ಸ್ ನಲ್ಲಿ ಕೂಪನ್ ವಿಜೇತರಿಗೆ ಬಹುಮಾನ ವಿತರಣೆ

ಸುಳ್ಯ ರಥಬೀದಿಯಲ್ಲಿ ಕಾರ್ಯಚರಿಸುತ್ತಿರುವ ಶಾಫಿ ಕುತ್ತಮೊಟ್ಟೆರವರ ಮಾಲಕತ್ವದ ತಾಹಿರಾ ಫ್ಯಾಬ್ರಿಕ್ಸ್ ವತಿಯಿಂದ ನಡೆದ ದೀಪಾವಳಿ ಹಬ್ಬದ ವಿಶೇಷ ಕೊಡುಗೆ ಕೂಪನ್ ವಿಜೇತರಿಗೆ ಇಂದು ಬಹುಮಾನ ವಿತರಣೆ ನಡೆಯಿತು. ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿಬಿ ಸುಧಾಕರ ರೈ , ನ ಪಂ ಸದಸ್ಯೆ ಕಿಶೋರಿ ಶೇಟ್, ನ ಪಂ ಮಾಜಿ ಸದಸ್ಯ ಹಾಜಿ ಮುಸ್ತಪ ಜನತಾ...

ಕುತಂತ್ರ ಮಾಡಿದವರಿಗೆ ಮಂಡಲ ಸಮಿತಿ ಬೆಂಬಲ : ಚಲನ್ ಕೊಪ್ಪಡ್ಕ

ಕಲ್ಮಕಾರು ಮೂರನೇ ವಾರ್ಡ್ ನಿಂದ ನಾನು ಸ್ಪರ್ಧಿಸುತ್ತಿದ್ದು ನನಗೆ ಸೋಲಿನ ಭಯವಿಲ್ಲ, ಈಗ ಬಿಜೆಪಿ ಲೀಡರ್ ಗಳಿಗೆ ನಾನು ಸ್ಪರ್ಧಿಸಿರುವುದು ಭಯ ಬಂದು ಸ್ಪಷ್ಟನೆ ನೀಡುತ್ತಿದ್ದಾರೆ. ಕುತಂತ್ರ ಮಾಡಿದವರಿಗೆ, ವರಿಷ್ಠರು ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಮಂಡಲ ಸಮಿತಿ ಬೆಂಬಲ ನೀಡುತ್ತಿದೆ. ಪಕ್ಷದಲ್ಲಿ ಸರಿಯಾಗಿ ದುಡಿದ ಕಾರ್ಯಕರ್ತರಿಗೆ ಬೆಲೆ ಇಲ್ಲ. ನಾನು ಊರಿನ,ಬಿಜೆಪಿ ಕಾರ್ಯಕರ್ತರ ಒತ್ತಾಯಕ್ಕೆ...

10 ದಿನಗಳ ಕಾಲ ರಾತ್ರಿ ಕರ್ಪ್ಯೂ ಜಾರಿ

ಕೊರೋನ ಎರಡನೇ ಅಲೆ ಅಂತಂಕ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದಿನಿಂದ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ರ ವರೆಗೆ 10 ದಿನಗಳ ಕಾಲ ರಾತ್ರಿ ಕರ್ಪ್ಯೂ ಘೋಷಣೆ ಮಾಡಿ ಮುಖ್ಯ ಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ ಎಂದು ವರದಿಯಾಗಿದೆ.

ಸುಳ್ಯ : ವಿವಿಧೆಡೆ ಅಭ್ಯರ್ಥಿ ಮತ್ತು ಕಾರ್ಯಕರ್ತರ ಭೇಟಿ ಮಾಡಿದ ಸುದರ್ಶನ್ ಮೂಡಬಿದ್ರೆ

ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಮೂಡುಬಿದಿರೆಯವರ ನೇತೃತ್ವದಲ್ಲಿ ಸುಳ್ಯ ಮಂಡಲದ ಹಲವಾರು ಗ್ರಾಮ ಪಂಚಾಯತಿಗಳ ಅಭ್ಯರ್ಥಿ ಹಾಗೂ ಪ್ರಮುಖ ಕಾರ್ಯಕರ್ತರ ಭೇಟಿ ಕಾರ್ಯಕ್ರಮ ಡಿ.22 ರಂದು ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ, ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಹಾಗೂ ಮಂಡಲ ಪ್ರಧಾನ ಕಾರ್ಯದರ್ಶಿ...

ಐವರ್ನಾಡು : ವಸತಿ ಸಮುಚ್ಚಯ ಮತ್ತು ಮದರಸ ಉದ್ಘಾಟನೆ

ಐವರ್ನಾಡು ಮುಹಿದ್ದೀನ್ ಜುಮಾ ಮಸೀದಿ ವತಿಯಿಂದ ನಿರ್ಮಿಸಿದ ವಸತಿ ಸಮುಚ್ಚಯ ಮತ್ತು ಆಧುನೀಕೃತ ಮದರಸ ಉದ್ಘಾಟನೆಯನ್ನು ಪ್ರಸಿದ್ಧ ಸೂಪಿ ವರ್ಯರಾದ ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು,ಮೌಲೂದ್ ಪರಾಯಣ ರೊಂದಿಗೆ ಡಿಸೆಂಬರ್ 20 ರಂದು ನೆರವೇರಿಸಿದರು. ಕಂಪ್ಯೂಟರ್ ಕೊಠಡಿಯನ್ನು ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಹಾಗೂ ಕೆ.ಪಿ.ಸಿ.ಸಿ.ಯ ಮಾಜಿ ಕಾರ್ಯದರ್ಶಿ ಟಿ.ಎಂ.ಶಾಹೀದ್ ತೆಕ್ಕಿಲ್ ಉದ್ಘಾಟಿಸಿ...

ಕಲ್ಮಕಾರು : ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಂದ ಸ್ಪಷ್ಟನೆ

ಕೊಲ್ಲಮೊಗ್ರ ಗ್ರಾ.ಪಂ.ನ  ಕಲ್ಮಕಾರು ಒಂದನೇ ವಾರ್ಡ್ ಗೆ  ಬಿಜೆಪಿಯ ಅಧಿಕೃತ ಅಭ್ಯರ್ಥಿಗಳಾಗಿ ನಾವು ನಾಮಪತ್ರ ಸಲ್ಲಿಸಿದ್ದೇವೆ ಎಂದು ಅಶ್ವಥ್ ಯಾಲದಾಳು, ಪುಷ್ಪರಾಜ್ ಪಡ್ಪು, ಶಿವಮ್ಮ ಮೈಲ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇಲ್ಲಿ ಬಂಡಾಯ ಅಭ್ಯರ್ಥಿಯಾಗಿರುವ ಚಲನ್ ಕೊಪ್ಪಡ್ಕ ಮತದಾರರನ್ನು ದಾರಿ ತಪ್ಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಸೋಲಿನ ಭಯದಿಂದ ಮತದಾರರಿಗೆ ಹಂಚಿದ ಮಾದರಿ ಮತಪತ್ರದಲ್ಲಿ ತಾನು ಬಿಜೆಪಿ...
Loading posts...

All posts loaded

No more posts

error: Content is protected !!