Ad Widget

ಐವರ್ನಾಡು : ಪಕ್ಷೇತರ ಅಭ್ಯರ್ಥಿ ಸತೀಶ್ ಜಬಳೆ ಗೆಲುವು – ಬಿಜೆಪಿಗರಿಗೆ ಸೋಲು

ಐವರ್ನಾಡು ಗ್ರಾಮದ 5 ನೇ ವಾರ್ಡ್ ನ ಪಕ್ಷೇತರ ಅಭ್ಯರ್ಥಿ ಸತೀಶ್ ಜಬಳೆ 223 ಮತ ಪಡೆದು ಗೆಲುವು ಸಾಧಿಸಿದ್ದಾರೆ.ಬಿಜೆಪಿ ಬೂತ್ ಸಮಿತಿ ಹಾಗೂ ಮಂಡಲ ಸಮಿತಿ ಅಭ್ಯರ್ಥಿ ಸೋಲು ಕಂಡಿದ್ದಾರೆ. ಆ ಮೂಲಕ ಬಿಜೆಪಿಗರಿಗೆ ಮತದಾ ರ ಬುದ್ಧಿ ಕಲಿಸಿದ್ದಾರೆ.

ಮತ ಎಣಿಕೆ ಕೇಂದ್ರದಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್ – ಕಾತರದಿಂದ ಕಾಯುತ್ತಿರುವ ಅಭ್ಯರ್ಥಿಗಳು

ಮತ ಎಣಿಕೆ ಕೇಂದ್ರದಲ್ಲಿ ಅಭ್ಯರ್ಥಿಗಳು ಕಾತರದಿಂದ ಕಾಯುತ್ತಿರುವ ದೃಶ್ಯ ಕಂಡುಬರುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಎಸ್ ಐ ಹರೀಶ್ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
Ad Widget

ಸುಳ್ಯ : ಮತ ಎಣಿಕೆ ಕೇಂದ್ರದಲ್ಲಿ ಅಧಿಕಾರಿಗಳು ಮತ್ತು ಅಭ್ಯರ್ಥಿಗಳ ಮಧ್ಯೆ ಮಾತಿನ ಚಕಮಕಿ

ಮತ ಎಣಿಕೆ ಕೇಂದ್ರದ ಕೊಠಡಿ ಸಂಖ್ಯೆ 11 ರಲ್ಲಿ ಟೇಬಲ್ ಸಂಖ್ಯೆ 32 ರಲ್ಲಿ ದೇವಚಳ್ಳ ಮತ್ತು ಗುತ್ತಿಗಾರು ಗ್ರಾಮದ ಮತ ಎಣಿಕೆ ಗೆ ತಯಾರಿ ನಡೆಸಲಾಗಿತ್ತು. ಇಲ್ಲಿ ಮಧ್ಯೆ ಅಡ್ಡವಾಗಿ ಬಲೆ ಕಟ್ಟಿದ್ದರು. ಇದು ಅಡ್ಡ ಕಟ್ಟಿರುವುದರಿಂದ ನಮಗೆ ಸರಿಯಾಗಿ ಕಾಣುವುದಿಲ್ಲ ಎಂದು ವೆಂಕಟ್ ವಳಲಂಬೆ ಆಕ್ಷೇಪಿಸಿದ ಘಟನೆ ಹಾಗೂ ಮಧ್ಯ ಪ್ರವೇಶಿಸಿದ ತಹಶೀಲ್ದಾರ್...

ಎಸ್ ಎಂ ಎ ಸುಳ್ಯ ರೀಜನಲ್ ಚುನಾವಣಾ ಕಾರ್ಯಾಗಾರ ಕ್ರಿಯೇಶನ್ 2020

ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಸುಳ್ಯ ರೀಜನಲ್ ಇದರ ವತಿಯಿಂದ ಚುನಾವಣಾ ಕಾರ್ಯಾಗಾರ ಕ್ರಿಯೇಶನ್ 2020 ಕಾರ್ಯಕ್ರಮ ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಅರೇಬಿಕ್ ಮದರಸ ಸಭಾಂಗಣದಲ್ಲಿ ಡಿ.29 ರಂದು ನಡೆಯಿತು. ಎಸ್ ಎಂ ಎ ಜಿಲ್ಲಾ ಈಸ್ಟ್ ಎಲೆಕ್ಷನ್ ಬೋರ್ಡ್ ಅಧ್ಯಕ್ಷ ಸಯ್ಯದ್ ಸಾದತ್ ತಂಙಳ್ ಕರುವೇಲು ಕಾರ್ಯಕ್ರಮ ಉದ್ಘಾಟಿಸಿದರು. ಗಾಂಧಿನಗರ ಮುಹ್ಯದ್ದೀನ್ ಜುಮ್ಮಾ ಮಸೀದಿ ಖತೀಬರಾದ...

ಪಂಜ : ಜಾತ್ರೋತ್ಸವ ಅಂಗವಾಗಿ ಪೂರ್ವಭಾವಿ ಸಭೆ

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾ ಪ್ರಯುಕ್ತ ಪೂರ್ವಭಾವಿ ಸಭೆ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪದ್ಮನಾಭ ರೈ ರವರ ಸಭಾ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು. ದೇಗುಲದ ಮಾಜಿ ಆಡಳಿತ ಅಧಿಕಾರಿಗಳಾದ ಡಾ. ದೇವಿಪ್ರಸಾದ್ ಕಾನತ್ತೂರು , ಶ್ರೀ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇನ್ಯ ರವೀಂದ್ರನಾಥ ಶೆಟ್ಟಿ, ಡಾ. ಮಂಜುನಾಥ್...

ಡಿ.30 ರಂದು ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ನಿಷೇದಾಜ್ಞೆ – ಡಿಸಿ ಆದೇಶ

ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ಡಿ.30 ರಂದು ಮತ ಎಣಿಕಾ ಕೇಂದ್ರದ 200 ಮೀ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಘೋಷಿಸಿ ದ.ಕ.ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.

ಸುಳ್ಯ : ರಿಕ್ಷಾದಿಂದ ಬಿದ್ದ ಮಗು – ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ – ವೈರಲ್ ವಿಡಿಯೋ ಇಲ್ಲಿದೆ

ಸುಳ್ಯದ ಮುಖ್ಯರಸ್ತೆಯ ಜಟ್ಟಿಪಳ್ಳ ತಿರುವಿನಲ್ಲಿ ರಿಕ್ಷಾವೊಂದಕ್ಕೆ ಕಾರು ಅಡ್ಡಬಂದಾಗ ರಿಕ್ಷಾದಲ್ಲಿದ್ದ ಮಗು ರಸ್ತೆಗೆ ಬಿದ್ದ ಘಟನೆ ಡಿ.26 ನಡೆದಿದೆ. ತಕ್ಷಣ ಆಟೋ ಚಾಲಕ ಮಗು ಬೀಳುತ್ತಿದ್ದಂತೆ ಮೇಲಕ್ಕೆತ್ತಿದ್ದಾನೆ. ಈ ದೃಶ್ಯ ಪಕ್ಕದ ಅಂಗಡಿಯೊಂದರ ಸಿಸಿ ಕ್ಯಾಮರಾ ದಲ್ಲಿ ಸೆರೆಯಾಗಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. https://youtu.be/Uel6UKYaP7Q

ಕಾನಾವುಜಾಲು : ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ

ಪೆರುವಾಜೆ ಗ್ರಾಮದ ಕಾನಾವುಜಾಲಿನಲ್ಲಿ ಧರ್ಮದೈವ, ಪಿಲಿಭೂತ, ಶಿರಾಡಿದೈವ ಹಾಗೂ ಉಪದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶಭಿಷೇಕ ಡಿ.28 ರಂದು ವೇ.ಮೂ. ಪಂಜ‌ ನಾರಾಯಣ ಅಸ್ರಣ್ಣ ಅವರ ನೇತೃತ್ವದಲ್ಲಿ ನಡೆಯಿತು.ಡಿ.21 ರಿಂದ‌ ಡಿ.28 ರ ತನಕ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ಪವಮಾನ ಹೋಮ, ಸುದರ್ಶನ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಸೋಮವಾರ ಬೆಳಗ್ಗೆ ಧರ್ಮದೈವ,ಪಿಲಿಭೂತ,...

ಬೆಳ್ಳಾರೆ : ಉಮಿಕ್ಕಳ ಶ್ರೀ ನಾಗರಾಜ ಕ್ಷೇತ್ರದಲ್ಲಿ ಪ್ರತಿಷ್ಠೆ ಮತ್ತು ಕಲಶಾಭಿಷೇಕ

ಬೆಳ್ಳಾರೆ ಗ್ರಾಮದ ಉಮಿಕ್ಕಳ ( ಕೊಳಂಬಳ) ಶ್ರೀ ನಾಗರಾಜ ಕ್ಷೇತ್ರದಲ್ಲಿ ದೇರೆಬೈಲು ತಂತ್ರಿ ಮುಕ್ಕೂರು ಶ್ರೀ ಪತಂಜಲಿ ಶಾಸ್ತ್ರಿಯವರ ನೇತೃತ್ವದಲ್ಲಿ ನಾಗದೇವರಾದ ನಾಗವೀಣಾ ಬ್ರಹ್ಮ,ನಾಗಕನ್ನಿಕೆ,ಸಂತಾನ ನಾಗ, ನಾಗರಾಜ ಹಾಗೂ ನಾಗ ಚಾಮುಂಡಿಯ ಪ್ರತಿಷ್ಠೆ ಮತ್ತು ಕಲಶಾಭಿಷೇಕವು ಡಿ.28 ರಂದು ನಡೆಯಿತು. ಡಿ.27 ರಂದು ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ,ಸಪ್ತಶುದ್ದಿ,ಪ್ರಾಸಾದ ಶುದ್ಧಿ,ಭೂವರಾಹ ಹೋಮ,ಮಹಾಗಣಪತಿ ಹೋಮ, ಸಾಯಂಕಾಲ ರಾಕ್ಷೋಘ್ನಹೋಮ,...

ಜಯನಗರ : ದೃಷ್ಟಿ ಚಾರಿಟೇಬಲ್ ವತಿಯಿಂದ ಕ್ಯಾಲೆಂಡರ್ ವಿತರಣೆ

ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ಭಟ್ ಕೊಡಂಕೇರಿಯವರ ನೇತೃತ್ವದಲ್ಲಿ ದೃಷ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜಯನಗರ 3ನೇ ವಾರ್ಡ್ ನ ಮನೆಗಳಿಗೆ 2021 ರ ಕ್ಯಾಲೆಂಡರ್ ಗಳನ್ನು ಡಿಸೆಂಬರ್ 28ರಂದು ವಿತರಿಸಲಾಯಿತು. ಈ ಸಂದರ್ಭದಲ್ಲಿ ಬೂತ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಮಚಾದೋ, ಕಾರ್ಯದರ್ಶಿ ಸುಂದರ ಕುದ್ಪಾಜೆ, ಅಭಿವೃದ್ಧಿ ಕಾವಲು ಸಮಿತಿ ಅಧ್ಯಕ್ಷ ದೀಕ್ಷಿತ್ ಕುಮಾರ್ ಜಯನಗರ,...
Loading posts...

All posts loaded

No more posts

error: Content is protected !!