Ad Widget

ಕೊಲ್ಲಮೊಗ್ರ : ತಾ.ಪಂ.ಸದಸ್ಯ ಬಿಜೆಪಿಯ ಉದಯ ಕೊಪ್ಪಡ್ಕ, ಶುಭಲತಾ, ಮೋಹಿನಿ ಗೆಲುವು

ಕೊಲ್ಲಮೊಗ್ರ ವಾರ್ಡ್ 1 ರಲ್ಲಿ ಬಿಜೆಪಿ ಬೆಂಬಲಿತರು 3 ಸ್ಥಾನಗಳಲ್ಲೂ ಗೆಲುವು ದಾಖಲಿಸಿದ್ದಾರೆ. ತಾ.ಪಂ.ಸದಸ್ಯ ಉದಯ ಕೊಪ್ಪಡ್ಕ 439, ಶುಭಲತಾ 379, ಮೋಹಿನಿ 442 ಮತ ಪಡೆದು ಗೆಲುವು ದಾಖಲಿಸಿದ್ದಾರೆ. ಸಮೃದ್ಧಿ ಬಳಗದ ಶೇಖರ ಅಂಬೆಕಲ್ಲು 374, ಕುಮುದಾ ಕೊಳಗೆ 208, ಶಶಿಕಲಾ ಚಾಳೆಪ್ಪಾಡಿ 231 , ಪಕ್ಷೇತರ ಬಾಲಸುಬ್ರಹ್ಮಣ್ಯ ಭಟ್ 312 ಮತ ಪಡೆದು...

ಮಡಪ್ಪಾಡಿ : ಕಾಂಗ್ರೆಸ್ ನ ಮಿತ್ರದೇವ, ಶರ್ಮಿಳ ಕಜೆ ಗೆಲುವು – ಎಪಿಎಂಸಿ ಅಧ್ಯಕ್ಷ ವಿನಯಕುಮಾರ್ ಮುಳುಗಾಡು ಸೋಲು

ಮಡಪ್ಪಾಡಿ 1 ನೇ ವಾರ್ಡ್ ನಲ್ಲಿ ಸೊಸೈಟಿ ಉಪಾಧ್ಯಕ್ಷ ಕಾಂಗ್ರೆಸ್ ನ ಮಿತ್ರದೇವ 339, ಶರ್ಮಿಳ ಕಜೆ 275 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಎಪಿಎಂಸಿ ಅಧ್ಯಕ್ಷ, ಗ್ರಾ.ಪಂ.ಮಾಜಿ ಸದಸ್ಯ ವಿನಯಕುಮಾರ್ ಮುಳುಗಾಡು 318, ಪ್ರತಿಮಾ ಮುಂಡೋಡಿ 265 ಮತ ಪಡೆದು ಸೋಲು ಕಂಡಿದ್ದಾರೆ.
Ad Widget

ದೇವಚಳ್ಳ: 2 ಬಿಜೆಪಿಯ ಬಂಡಾಯ, 1 ಬಿಜೆಪಿ ಗೆಲುವು – ಗೆದ್ದು ಮಿಂಚಿದ ಶೈಲೇಶ್ ಅಂಬೆಕಲ್ಲು

ದೇವಚಳ್ಳ 1 ನೇ ವಾರ್ಡ್ ನಿಂದ ಬಿಜೆಪಿ ಬಂಡಾಯ ಅಭ್ಯರ್ಥಿ ಶೈಲೇಶ್ ಅಂಬೆಕಲ್ಲು 447, ಲೀಲಾವತಿ ಸೇವಾಜೆ 300, ಬಿಜೆಪಿಯ ಪ್ರೇಮಲತಾ 343 ಮತ ಪಡೆದು ಗೆಲುವು ಸಾಧಿಸಿದರು. ಬಿಜೆಪಿಯ ಕುಸುಮಾವತಿ ಚಳ್ಳ 222, ರಾಧಾಕೃಷ್ಣ ಮಾವಿನಗೊಡ್ಲು 418, ಪಕ್ಷೇತರರಾದ ವಿವೇಕ್ ಕಲ್ಲುಪಣೆ 86, ಜಯಾನಂದ ಪಟ್ಟೆ 126, ಬಿಜೆಪಿ ಬಂಡಾಯ ಅಭ್ಯರ್ಥಿ ವಿದ್ಯಾಕುಮಾರಿ ಮೂಲೆತೋಟ...

ಆಲೆಟ್ಟಿ : ನಾಲ್ಕನೇ ವಾರ್ಡ್ ನಲ್ಲಿ 2 ಕಾಂಗ್ರೆಸ್ – 1 ಬಿಜೆಪಿ ಗೆಲುವು

ಆಲೆಟ್ಟಿ 4 ನೇ ವಾರ್ಡ್ ನ ಕಾಂಗ್ರೆಸ್ ಬೆಂಬಲಿತ ಮುತ್ತಪ್ಪ ಪೂಜಾರಿ 470, ಮೀನಾಕ್ಷಿ 379 ಹಾಗೂ ಬಿಜೆಪಿಯ ಕಮಲ 366 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಅಚ್ವುತ 314, ರಾಜಲಕ್ಷ್ಮಿ 344, ಸರೋಜಿನಿ 329 ಮತ ಪಡೆದು ಸೋಲು ಕಂಡರು

ಪೆರುವಾಜೆ : ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಜಗನ್ನಾಥ್ ಪೂಜಾರಿ, ಗುಲಾಬಿ , ಚಂದ್ರಾವತಿ ಗೆಲುವು

ಪೆರುವಾಜೆ 1 ನೇ ವಾರ್ಡ್ ನ 3 ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಜಗನ್ನಾಥ್ ಪೂಜಾರಿ 458, ಗುಲಾಬಿ 367 , ಚಂದ್ರಾವತಿ 358 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಉಮೇಶ್ ಕೆ.ಎಂ.ಬಿ. 308, ಮಂಜುಳ 304, ವನಿತಾ 292 ಮತ ಪಡೆದ ಸೋಲು ಕಂಡಿದ್ದಾರೆ.

ಮರ್ಕಂಜ : ಪಕ್ಷೇತರ ಅಭ್ಯರ್ಥಿ ಚಿತ್ತರಂಜನ್ ಗೆಲುವು

ಮರ್ಕಂಜ 1 ನೇ ವಾರ್ಡ್ ನ ಸಾಮಾನ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಚಿತ್ತರಂಜನ್ 453 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶಶಿಕಾಂತ್ 229, ಕಾಂಗ್ರೆಸ್ ನ ಜಯರಾಮ 113 ಮತ ಪಡೆದು ಪರಾಭವಗೊಂಡರು. ಬಿಜೆಪಿಯ ಗೀತಾ ಬಳ್ಳಕ್ಕಾನ 206 ಮತ ಪಡೆದು ಜಯಗಳಿಸಿದರು.‌ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯಮುನಾ 49 ಮತ ಪಡೆದು...

ಬೆಳ್ಳಾರೆ : ಬಿಜೆಪಿಯ ಚಂದ್ರಶೇಖರ ಪನ್ನೆ, ನಮಿತಾ ಕೆ.ಎಲ್ ಗೆಲುವು

ಬೆಳ್ಳಾರೆ 4ನೇ ವಾರ್ಡ್ ನ ಬಿಜೆಪಿಯ ಚಂದ್ರಶೇಖರ ಪನ್ನೆ 323, ನಮಿತಾ ಕೆ.ಎಲ್. 283 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ‌ನಾಗೇಶ್ ತಡಗಜೆ 173, ಲಲಿತಾ ಮೂಲ್ಯ 132, ಎಸ್ ಡಿ ಪಿ ಐ ನ ನೌಪಾಲ್ 93 ಮತ ಪಡೆದು ಸೋಲು ಕಂಡರು.

ಮಂಡೆಕೋಲು: ಬಿಜೆಪಿಯ ಅನಿಲ್ ತೋಟಪ್ಪಾಡಿ, ಪ್ರತಿಮಾ ಹೆಬ್ಬಾರ್ ಗೆಲುವು

ಮಂಡೆಕೋಲು 1 ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿ ಬಿಜೆಪಿಯ ಅನಿಲ್ ತೋಟಪ್ಪಾಡಿ 338 ಹಾಗೂ ಪ್ರತಿಮಾ ಹೆಬ್ಬಾರ್ 322 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಶುಭಕರ ಬೊಳುಗಲ್ಲು 244, ರಶ್ಮಿ ಚೇರದಮೂಲೆ 161ಮತ ಪಡೆದು ಸೋಲು ಕಂಡಿದ್ದಾರೆ.

ಅಜ್ಜಾವರ : ಬಿಜೆಪಿಯ ರವಿರಾಜ್ ಕರ್ಲಪ್ಪಾಡಿ, ದಿವ್ಯ ಪಡ್ಡಂಬೈಲು ಗೆಲುವು

ಅಜ್ಜಾವರ 1ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿಗಳಾದ ರವಿರಾಜ್ ಕರ್ಲಪ್ಪಾಡಿ 327, ದಿವ್ಯ ಜಯರಾಮ ಪಡ್ಡಂಬೈಲು 270 ಮತ ಗಳಿಸಿ ವಿಜಯಿಯಾಗಿದ್ದಾರೆ. ಕಾಂಗ್ರೆಸ್ ನ ಮಿಥುನ್ ಕರ್ಲಪ್ಪಾಡಿ 188, ಪವಿತ್ರ ಲೋಕೇಶ್ ಮುಡೂರು 179 ಮತ ಪಡೆದು ಸೋಲು ಕಂಡರು

ಕೂತ್ಕುಂಜ : ಬಿಜೆಪಿಯ ನೇತ್ರಾವತಿ ಗೆಲುವು

ಕೂತ್ಕುಂಜ 1ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿ ನೇತ್ರಾವತಿ ಕಲ್ಲಾಜೆ, 310 ಮತ ಗಳಿಸಿ ವಿಜಯಿಯಾಗಿದ್ದಾರೆ. ಭವ್ಯ ಕುದ್ವ 133 ಮತ ಪಡೆದರೇ 9 ಮತ ತಿರಸ್ಕೃತ ವಾಗಿದೆ.
Loading posts...

All posts loaded

No more posts

error: Content is protected !!