- Saturday
- March 14th, 2026
ಚೊಕ್ಕಾಡಿ ಶ್ರೀ ಉಳ್ಳಾಕುಲು ದೈವಸ್ಥಾನದ ಚಾವಡಿ ಬಳಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ಅಮರಪಡ್ನೂರು ಚೊಕ್ಕಾಡಿ ಮತ್ತು ಅಮರಮುಡ್ನೂರು ಇದರ ಸದಸ್ಯರಿಂದ ಒಂದು ದಿನದ ಶ್ರಮದಾನ ನಡೆಯಿತು. ಶ್ರಮದಾನದಲ್ಲಿ ಒಕ್ಕೂಟದ ಸದಸ್ಯರು ಭಾಗವಹಿಸಿದರು.
ಸಂಪಾಜೆಯ ಕಾರ್ಮಿಕ ಸಂಘದ ಸದಸ್ಯರಾಗಿದ್ದು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ದ.ಕ.ಸಂಪಾಜೆ ಪಂಚಾಯತ್ ಸದಸ್ಯರಾದ ವಿಮಲ ಆರ್.ಪ್ರಸಾದ್ ಮತ್ತು ಚೆಂಬು ಗ್ರಾಮ ಪಂಚಾಯತ್ ಸದಸ್ಯೆ ಕುಸುಮಾ ಯೋಗೇಶ್ವರ ಇವರನ್ನು ಸಂಘಟನೆಯ ವತಿಯಿಂದ ಇಂದು (ಜ.10) ಕಲ್ಲುಗುಂಡಿಯ ಸಂಘದ ಕಛೇರಿಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಕೆ.ಪಿ.ಜೋನಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕೊರೊನಾ ಎಂಬ ಮಹಾಮಾರಿಯಿಂದ ನಮ್ಮ-ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಈ ಸಮಯವನ್ನು ಹಾಳು ಮಾಡದೇ ಸದುಪಯೋಗ ಪಡಿಸಿಕೊಂಡ ಅದೆಷ್ಟೋ ಮಂದಿ ಇದ್ದಾರೆ. ಆ ಸಾಲಿಗೆ ಇಲ್ಲೊಬ್ಬಳು ಸೇರುತ್ತಾಳೆ. ಅವಳೇ ಶ್ರೇಯಾ ಮೇರ್ಕಜೆ, ಶ್ರೀ ಗುರುಪ್ರಸಾದ್ ಮೇರ್ಕಜೆ ಮತ್ತು ಪ್ರಮೀಳ ಮೇರ್ಕಜೆರವರ ಪುತ್ರಿ. ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ 7ನೇ ತರಗತಿ ಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾಳೆ. ಜತೆಗೆ...
ಬೆಂಗಳೂರಿನ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜ.10 ರಂದು ನಡೆದ ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಹಿರಿಯೂರು, ಚಿತ್ರದುರ್ಗದವರು ಆಯೋಜಿಸಿದ್ದ 2020-2021ನೇ ಸಾಲಿನ ದ್ವಿತೀಯ ವಿಶ್ವ ಕನ್ನಡ ಸಾಹಿತ್ಯೋತ್ಸವ ಸಮಾರಂಭದ ವೇದಿಕೆ ಕವಿಗೋಷ್ಠಿಯಲ್ಲಿ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ರವರು ಸ್ವರಚಿತ ಕವನ ವಾಚಿಸಿ, ವೇದಿಕೆಯ ವತಿಯಿಂದ ಸನ್ಮಾನವನ್ನು ಸ್ವೀಕರಿಸಿದರು. ಲತಾಶ್ರೀ...
ಸದೃಢ ದೇಶ ಕಟ್ಟಲು ಸಜ್ಜನಿಕೆಯ ರಾಜಕಾರಣವೇ ಮೆಟ್ಟಿಲಾಗಬೇಕು. ಸಮಾಜದ ಅಶಕ್ತ ವರ್ಗದವರ ಕಣ್ಣೀರು ಒರೆಸಲು ಸಹೃದಯರ ಅವಶ್ಯಕತೆಯಿದೆ ಎಂಬುದರ ಫಲಿತಾಂಶವೇ ಪೆರುವಾಜೆ ವಾರ್ಡ್ 2ರ ಅಭ್ಯರ್ಥಿಗಳ ವಿಜಯ. ಮತದಾರ ಬಾಂಧವರ ಧೃಢ ನಿಶ್ಚಯ ಹಾಗೂ ಕಾರ್ಯಕರ್ತರು ಮಾಡಿದ ಸೇವಾ ಆಂದೋಲನವೇ ಈ ನಮ್ಮ ಗೆಲುವಿಗೆ ಕಾರಣವಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯ ಸುಳ್ಯ ಮಂಡಲದ ಪ್ರಧಾನ...
ಗುತ್ತಿಗಾರು ಅಯ್ಯಪ್ಪ ಸೇವಾ ಸಮಿತಿ ಗುತ್ತಿಗಾರು ಹಾಗೂ ಶ್ರೀ ಕೃಷ್ಣ ಭಜನಾ ಮಂಡಳಿಯ ಆಡಳಿತ ಸಮಿತಿ ಮತ್ತು ಭಜನಾ ಸಮಿತಿಯ ಸದಸ್ಯರಿಂದ ಗುತ್ತಿಗಾರು ಶ್ರೀ ಕೃಷ್ಣಾ ಭಜನಾ ಮಂದಿರದಲ್ಲಿ ಶ್ರಮದಾನ ಜ.10 ರಂದು ನಡೆಯಿತು.
ಜನವರಿ 07 ರಂದು ಬೆಳ್ಳಾರೆಯ ಅಂಚೆಕಚೇರಿಯಲ್ಲಿ ಅಮೂಲ್ಯ ದಾಖಲೆಗಳುಳ್ಳ ಪರ್ಸ್ ಬಿದ್ದು ಸಿಕ್ಕಿರುತ್ತದೆ. ಸಂಬಂಧಪಟ್ಟವರು ಬೆಳ್ಳಾರೆ ಅಂಚೆಕಚೇರಿಗೆ ಬಂದು ಗುರುತು ಹೇಳಿ ಪರ್ಸ್ ಪಡೆದುಕೊಳ್ಳಬಹುದು ಎಂದು ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಸಂಪರ್ಕ ಸಂಖ್ಯೆ 9482251184.
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಉಪನ್ಯಾಸಕರಾದ ಶ್ರೀಮತಿ ಶ್ರುತಿ ಬಿ ಎಚ್ ಅವರು ಕರ್ನಾಟಕ ರಾಜ್ಯ ಉಪನ್ಯಾಸಕರ ಆರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕೊಲ್ಲಮೊಗ್ರು ಗ್ರಾಮ ಪಂಚಾಯತಿ ಸದಸ್ಯ ಅಶ್ವಥ್ ಯಾಲದಾಳು ಅವರ ಪತ್ನಿ.
ಎಡಮಂಗಲ ಜಾಲ್ತಾರು ತರವಾಡು ಮನೆಯಲ್ಲಿ ಕೊಲ್ಲರ್ನೂಜಿ ಕುಟುಂಬದ ಧರ್ಮದೈವ ಹಾಗೂ ಉಪದೈವಗಳಿಗೆ ಧರ್ಮ ನಡಾವಳಿ ಕಾರ್ಯಕ್ರಮವು ಜ.08 ಹಾಗೂ ಜ.09 ರಂದು ಜರುಗಿತು.ಬೆಳಗ್ಗೆ ಗಣಹೋಮ ನೆರವೇರಿತು. ತದನಂತರ ರಾತ್ರಿಯಿಂದ ಸತ್ಯದೇವತೆ, ಕಲ್ಲುರ್ಟಿ, ವರ್ಣಾರ ಪಂಜುರ್ಲಿ, ರುದ್ರಚಾಮುಂಡಿ, ಗುಳಿಗ ಹಾಗೂ ಉಪದೈವಗಳಿಗೆ ನೇಮ ನಡಾವಳಿ ನಡೆಯಿತು. ಈ ಸಂದರ್ಭದಲ್ಲಿ ಕುಟುಂಬಸ್ಥರು, ಬಂಧು - ಮಿತ್ರರು ಹಾಗೂ ಊರವರು...
ಪ್ರಸಿದ್ಧ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಉತ್ತಮ ವೈದ್ಯರ ಅವಶ್ಯಕತೆ ಅತೀ ಹೆಚ್ಚಾಗಿದ್ದು ,ಇದೀಗ ಸುಬ್ರಹ್ಮಣ್ಯದ ಕಾರ್ತಿಕೆಯ ವಸತಿಗೃಹ ಕಟ್ಟಡದಲ್ಲಿ ಡಾ. ಆದಿತ್ಯ ಚನಿಲ ರವರು ಹೋಮಿಯೋಪತಿ ಕ್ಲಿನಿಕ್ ಆರಂಭಿಸಿದ್ದಾರೆ. ಡಾ. ಆದಿತ್ಯ ರವರು ಪ್ರಾಥಮಿಕ ಶಿಕ್ಷಣವನ್ನು ಗುತ್ತಿಗಾರು ಶಾಲೆಯಲ್ಲಿ ಹಾಗೂ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಸುಬ್ರಹ್ಮಣ್ಯದಲ್ಲಿ ಮುಗಿಸಿ, ಐದುವರೆ ವರ್ಷ ಫಾದರ್ ಮುಲ್ಲಾರ್ ಮೆಡಿಕಲ್ ಕಾಲೇಜ್...
Loading posts...
All posts loaded
No more posts
